India vs South Africa: ಬಿಸಿಸಿಐ ಫೋಟೋಗಳಿಂದ ವಿರಾಟ್ ಕೊಹ್ಲಿ ಔಟ್, ಕಾರಣ?
India vs South Africa: ಟೆಸ್ಟ್ ಸರಣಿಯ ಬಳಿಕ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನೂ ಆಡಬೇಕಿದೆ. ಜನವರಿ 19ರಿಂದ ಏಕದಿನ ಸರಣಿ ಆರಂಭವಾಗಲಿದೆ. ಭಾರತೀಯ ಕ್ರಿಕೆಟಿಗರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುತ್ತಿರುವ ಫೋಟೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿಯ ಫೋಟೋ ಶೇರ್ ಮಾಡದಿರುವುದು ಅತ್ಯಂತ ಅಚ್ಚರಿಯ ಸಂಗತಿಯಾಗಿದೆ.
India vs South Africa: ಭಾರತ ಟೆಸ್ಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದು, 3 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಮಧ್ಯಾಹ್ನ 1:30 IST ಕ್ಕೆ ಆರಂಭವಾಗಲಿದೆ. ಟೆಸ್ಟ್ ಸರಣಿಯ ಬಳಿಕ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನೂ ಆಡಬೇಕಿದೆ. ಜನವರಿ 19ರಿಂದ ಏಕದಿನ ಸರಣಿ ಆರಂಭವಾಗಲಿದೆ. ಭಾರತೀಯ ಕ್ರಿಕೆಟಿಗರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುತ್ತಿರುವ ಫೋಟೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿಯ ಫೋಟೋ ಶೇರ್ ಮಾಡದಿರುವುದು ಅತ್ಯಂತ ಅಚ್ಚರಿ ಮೂಡಿಸಿದೆ. ಬಿಸಿಸಿಐನ ಈ ಕ್ರಮದ ನಂತರ ಹಲವು ಪ್ರಶ್ನೆಗಳು ಎದ್ದಿವೆ.
ಬಿಸಿಸಿಐ ಫೋಟೋಗಳಿಂದ ವಿರಾಟ್ ಕೊಹ್ಲಿ ಔಟ್:
ಬಿಸಿಸಿಐ (BCCI) ಗುರುವಾರ ತನ್ನ ಟ್ವಿಟರ್ ಖಾತೆಯಲ್ಲಿ ಭಾರತೀಯ ಆಟಗಾರರ ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಆಟಗಾರರು ವಿಮಾನದಲ್ಲಿ ಕುಳಿತಿದ್ದಾರೆ. ಬಿಸಿಸಿಐ ಈ ಫೋಟೋದ ಶೀರ್ಷಿಕೆಯಲ್ಲಿ 'ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಎಲ್ಲರೂ ಒಟ್ಟಿಗೆ' ಎಂದು ಬರೆದಿದ್ದಾರೆ. ಬಿಸಿಸಿಐ ಟ್ವಿಟರ್‌ನಲ್ಲಿ 4 ಚಿತ್ರಗಳನ್ನು ಹಂಚಿಕೊಂಡಿದೆ, ಇದರಲ್ಲಿ ಜಸ್ಪ್ರೀತ್ ಬುಮ್ರಾ, ಮಯಾಂಕ್ ಅಗರ್ವಾಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ಉಮೇಶ್ ಯಾದವ್ ಕಾಣಿಸಿಕೊಂಡಿದ್ದಾರೆ, ಆದರೆ ಭಾರತೀಯ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಕಾಣೆಯಾಗಿದ್ದಾರೆ.
Virat Kohli) ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅದು ಬುಧವಾರ ಸಾರ್ವಜನಿಕವಾಯಿತು. ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯದಂತೆ ಮನವೊಲಿಸುವ ಪ್ರಯತ್ನ ನಡೆದಿದೆ ಎಂಬ ಮಂಡಳಿಯ ಹೇಳಿಕೆಯನ್ನು ವಿರಾಟ್ ಕೊಹ್ಲಿ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ- ICC Test Ranking : ಇನ್ನೂ ಮುಗಿಯುತ್ತಿಲ್ಲ ಕೊಹ್ಲಿ ಟೆನ್ಷನ್, ಇದೀಗ ಈ ವಿಚಾರದಲ್ಲಿ ಮುನ್ನುಗ್ಗಿದ ರೋಹಿತ್!
ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಹೊಸ ಅಧ್ಯಾಯದಂತೆ ತೋರುತ್ತಿರುವಂತೆ, T20 ತಂಡದ ನಾಯಕತ್ವವನ್ನು ತೊರೆಯದಂತೆ ಮಂಡಳಿಯು ಮನವಿ ಮಾಡಿದೆ ಎಂಬ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರ ಹೇಳಿಕೆಯನ್ನು ಉನ್ನತ ನಾಯಕರೊಬ್ಬರು ಸಾರ್ವಜನಿಕವಾಗಿ ತಳ್ಳಿಹಾಕಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ, 'ಈಗಾಗಲೇ ತೆಗೆದುಕೊಂಡ ನಿರ್ಧಾರದ ಬಗ್ಗೆ ಏನೇ ಸಂವಹನ ನಡೆದರೂ ಅದರ ಬಗ್ಗೆ ಏನೇ ಹೇಳಿದರೂ ತಪ್ಪು' ಎಂದಿದ್ದಾರೆ.
ನಾನು ಟಿ20 ನಾಯಕತ್ವ ತೊರೆದಾಗ ಮೊದಲು ಬಿಸಿಸಿಐಯನ್ನು ಸಂಪರ್ಕಿಸಿ ನನ್ನ ನಿರ್ಧಾರದ ಬಗ್ಗೆ ತಿಳಿಸಿದ್ದೆ ಮತ್ತು ಅವರ (ಅಧಿಕಾರಿಗಳ) ಮುಂದೆ ನನ್ನ ಅಭಿಪ್ರಾಯವನ್ನು ಇಟ್ಟಿದ್ದೇನೆ ಎಂದು ಕೊಹ್ಲಿ ಸ್ಪಷ್ಟ ಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಗಂಗೂಲಿ ನೀಡಿದ ಹೇಳಿಕೆಗೆ ಸಂಪೂರ್ಣ ವಿರುದ್ಧವಾದ ಮಾಹಿತಿಯನ್ನು ನೀಡಿದ ಕೊಹ್ಲಿ, 'ನಾನು ಟಿ 20 ನಾಯಕತ್ವವನ್ನು ಏಕೆ ತೊರೆಯಲು ಬಯಸುತ್ತೇನೆ ಮತ್ತು ನನ್ನ ದೃಷ್ಟಿಕೋನವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಏನೂ ತಪ್ಪಿಲ್ಲ, ಹಿಂಜರಿಕೆ ಇಲ್ಲ, ಟಿ20 ನಾಯಕತ್ವ ಬಿಟ್ಟುಕೊಡಬೇಡಿ ಎಂದು ಒಮ್ಮೆಯೂ ಹೇಳಿರಲಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ- ಈ ಫೋಟೋದಲ್ಲಿ ಸಚಿನ್ ಜೊತೆಗಿದ್ದಾರೆ ಇನ್ನೊಬ್ಬ ಅತಿಥಿ.. ಅದು ಯಾರು? ಕಂಡುಹಿಡಿಯುವಿರಾ!
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತೀಯ ಟೆಸ್ಟ್ ತಂಡ:
ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (WK), ವೃದ್ಧಿಮಾನ್ ಸಹಾ (WK), ಪ್ರಿಯಾಂಕ್ ಪಾಂಚಾಲ್, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್.
ಸ್ಟ್ಯಾಂಡ್‌ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಹಾರ್ ಮತ್ತು ಅರ್ಜನ್ ನಾಗ್ವಾಸ್ವಾಲಾ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.