ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ತಂಡವು ಮೇಲುಗೈ ಸಾಧಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ (Team India) ವು 29 ರನ್ ಗಳಾಗುವಷ್ಟರಲ್ಲಿ ಮಾಯಾಂಕ್ ಅಗರವಾಲ್ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು.


ಇದನ್ನೂ ಓದಿ: IPL 2022 : RCB ಗೆ ನಾಯಕನಾಗಿ ಈ ಆಟಗಾರನ ನೇಮಕ


ಇದಾದ ನಂತರ ಇನ್ನೇನೂ ನೆಲೆ ಕಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ಹನುಮ ವಿಹಾರಿ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 31 ಮತ್ತು 23 ರನ್ ಗಳಿಗೆ ಔಟಾದರು.ಈ ಹಂತದಲ್ಲಿ ಜೊತೆಗೂಡಿದ ರಿಶಬ್ ಪಂತ್ ಹಾಗೂ ಶ್ರೇಯಸ್ ಅವರ ವೇಗದ ಬ್ಯಾಟಿಂಗ್ ನೆರವಿನಿಂದಾಗಿ ಭಾರತ 252 ರನ್ ಗಳಿಗೆ ಸರ್ವಪತನವನ್ನು ಕಂಡಿತು.ಒಂದೆಡೆ ರಿಶಬ್ ಪಂತ್ 39 ರನ್ ಗಳಿಸಿದರೆ ಶ್ರೇಯಸ್ ಅಯ್ಯರ್ ಅವರು 92 ರನ್ ಗಳಿಸುವ ಮೂಲಕ ಶತಕದ ಅಂಚಿಗೆ ಬಂದು ವಿಕೆಟ್ ಒಪ್ಪಿಸಿದರು.ಶ್ರೀಲಂಕಾ ತಂಡದ ಪರವಾಗಿ ಎಬುಲ್ದೆನಿಯಾ ಮತ್ತು ಜಯವಿಕ್ರಂ ತಲಾ ಮೂರು ವಿಕೆಟ್ ಹಾಗೂ ಧನಂಜಯ ಡಿಸಿಲ್ವಾ ಎರಡು ವಿಕೆಟ್ ಪಡೆಯುವ ಮೂಲಕ ಭಾರತ ತಂಡ (Team India)ದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.


ಇದನ್ನೂ ಓದಿ: Delhi Capitals New Jersey : IPL 2022 ಕ್ಕೆ 'ಹೊಸ ಜೆರ್ಸಿ' ಲಾಂಚ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್


ಇನ್ನೊಂದೆಡೆಗೆ ಭಾರತ ತಂಡದ ಹೊಡೆದ 252 ರನ್ ಗಳ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಬುಮ್ರಾ ಮತ್ತು ಶಮಿ ಅವರ ಬೌಲಿಂಗ್ ಬಿರುಗಾಳಿಗೆ ಸಿಲುಕಿದ ಶ್ರೀಲಂಕಾ ತಂಡವು 50 ರನ್ ಗಳಾಗುವಷ್ಟರಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಆಘಾತ ಎದುರಿಸಿತು. ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಎಂಜೆಲೋ ಮ್ಯಾಥ್ಯೂ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.