IND vs ZIM: ತಂಡ ಕಟ್ಟುವಲ್ಲಿ ಎಡವಿದ ಶುಭಮನ್, ಪ್ಲೇಯಿಂಗ್ XI ನಿಂದ ಹೊರಬಿದ್ದ ಅಭಿಷೇಕ್ ಶರ್ಮಾ..!
IND vs ZIM: ಐದು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಶನಿವಾರ ನಡೆಯಲಿರುವ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಶುಭಮನ್ ಗಿಲ್ ಪಡೆ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ದ ಭರ್ಜರಿ ಗೆಲುವು ಸಾಧಿಸಿದೆ.
IND vs ZIM: ಐದು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಶನಿವಾರ ನಡೆಯಲಿರುವ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಶುಭಮನ್ ಗಿಲ್ ಪಡೆ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ದ ಭರ್ಜರಿ ಗೆಲುವು ಸಾಧಿಸಿದೆ.
ಭಾರತ ತಂಡ ಎರಡರಲ್ಲಿ ಗೆದ್ದು, ಕೇವಲ ಒಂದು ಪಂದ್ಯ ಗೆದ್ದಿರುವ ಜಿಂಬಾಬ್ವೆ ತಂಡದ ವಿರುದ್ಧ ಲೀಡ್ ಕಾಯ್ದುಕೊಂಡಿದೆ. ಇದೀಗ ಶನಿವಾರ ನಾಲ್ಕನೆ ಪಂದ್ಯ ನಡೆಯಲಿದ್ದು, ಈ ಪಂದ್ಯ ಗೆಲ್ಲುವುದು ಭಾರತ ತಂಡಕ್ಕೆ ಬಹಳ ಪ್ರಮುಖವಾಗಿದೆ. ಆದರೆ ಈ ನಾಲ್ಕನೇ ಪಂದ್ಯದಲ್ಲಿ ಶುಭಮನ್ ಗಿಲ್ ತಂಡದಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದಾರೆ. ಇದೇ ಕಾರಣ ಇದೀಗ ಕಂಡಕವಾಗಿ ಎದುರಾಗಿದೆ.
ಇದನ್ನೂ ಓದಿ: ಇಂಟರ್‌ವ್ಯೂ ಮಾಡಲು ಬಂದ ನಿರೂಪಕಿಯರನ್ನೆ ಪ್ರೀತಿಸಿ ಮದುವೆಯಾದ ಕ್ರಿಕೆಟಿಗರು ಇವರೇ ನೋಡಿ...
ಟಿ20 ವಿಶ್ವಕಪ್ ಗೆದ್ದು ವಿಶ್ರಾಂತಿಯಲ್ಲಿದ್ದ ಟೀ ಇಂಡಿಯಾ ಆಟಗಾರರು ಇದೀಗ ಈ ಸರಣಿಗೆ ಲಭ್ಯವಾಗಿದ್ದಾರೆ. ಈ ಮೂವರು ಪ್ರಮುಖ ಆಟಗಾರರ ಅನುಪಸ್ಥಿತಿಯ ಕಾರಣ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರ ಸ್ಥಾನಕ್ಕೆ ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಕರೆತರಲಾಗಿತ್ತು. ನಂತರ ಮೂವರು ಆಟಗಾರರು ವಿಶ್ರಾಂತಿ ಮುಗಿಸಿ ಬರುತ್ತಿದ್ದಂತೆ ಐಪಿಎಲ್ ಸ್ಟಾರ್ ಆಟಗಾರರನ್ನು ತಂಡದಿಂದ ಹೊರ ಹಾಕಲಾಯಿತು.
ಇದೀಗ, ನಾಲ್ಕನೆ ಪಂದ್ಯದಲ್ಲೂ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.
ಆರಂಭಿಕ ಸ್ಥಾನಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, VVS ಲಕ್ಷ್ಮಣ್ ನೇತೃತ್ವದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಭಿಷೇಕ್ ಶರ್ಮಾ ಅವರನ್ನು ಕೈಬಿಡಲು ನಿರ್ಧರಿಸಬಹುದು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಅವರನ್ನು ಅಂತಿಮ ತಂಡದಲ್ಲಿ ಸೇರಿಸಬಹುದು. ಮೂರನೇ ಟಿ20ಯಲ್ಲಿ ಟೀಂ ಇಂಡಿಯಾ 23 ರನ್ ಗಳ ಜಯ ಸಾಧಿಸಿದ್ದರೂ, ಬ್ಯಾಟಿಂಗ್ ವಿಭಾಗ ತತ್ತರಿಸಿ ಹೋಗುವಂತಿತ್ತು.
ಇದನ್ನೂ ಓದಿ: IND vs ZIM: ಟಿ20 ಮಾದರಿಯಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ
ಈ ಕ್ರಮದಲ್ಲಿ ತಂಡದ ಸಂಯೋಜನೆಯನ್ನು ಬಲಪಡಿಸಲು ತಂಡದ ಆಡಳಿತವು ಯೋಜಿಸುತ್ತಿದೆಯಂತೆ. ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ಕಳೆದ ಮೂರು ಪಂದ್ಯಗಳನ್ನು ಆಡಿರುವ ಅವೇಶ್ ಖಾನ್ ಈ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಅವರ ಜಾಗಕ್ಕೆ ಮುಖೇಶ್ ಕುಮಾರ್ ಮತ್ತೆ ಎಂಟ್ರಿ ಕೊಡಬಹುದು. ಇತರ ಸಂಯೋಜನೆಗಳಲ್ಲಿ ಯಾವುದೇ ಬದಲಾವಣೆಗಳ ಸಾಧ್ಯತೆಯಿಲ್ಲ. ಅಭಿಷೇಕ್ ಶರ್ಮಾ ಮುಂದುವರಿಯಲು ಬಯಸಿದರೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ