ಇಂದು ಭಾರತ vs ಜಿಂಬಾಬ್ವೆ ಮುಖಾಮುಖಿ: ಉಭಯ ತಂಡಗಳ ಬಲಾಬಲವೇನು? ಹೆಡ್ ಟು ಹೆಡ್ ರೆಕಾರ್ಡ್ ಇಲ್ಲಿದೆ
India vs Zimbabwe T20I Records: ಭಾರತವು ಪ್ರಸ್ತುತ T20 ವಿಶ್ವಕಪ್ ಚಾಂಪಿಯನ್ ಆಗಿದೆ, ಆದರೆ ಜಿಂಬಾಬ್ವೆ ಈ ಬಾರಿ T20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹ ಸಾಧ್ಯವಾಗಲಿಲ್ಲ. ಜಿಂಬಾಬ್ವೆ ವಿರುದ್ಧದ ಈ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಶುಭಮನ್ ಗಿಲ್ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ.
India vs Zimbabwe T20I Records: ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ T20 ಸರಣಿ ಇಂದಿನಿಂದ ಅಂದರೆ ಜುಲೈ 6 ರಿಂದ ಹರಾರೆಯಲ್ಲಿ ಪ್ರಾರಂಭವಾಗಲಿದೆ. ದಾಖಲೆಗಳನ್ನು ನೋಡಿದರೆ ಉಭಯ ತಂಡಗಳ ನಡುವೆ ಹೋಲಿಕೆಯೇ ಇಲ್ಲ.
ಭಾರತವು ಪ್ರಸ್ತುತ T20 ವಿಶ್ವಕಪ್ ಚಾಂಪಿಯನ್ ಆಗಿದೆ, ಆದರೆ ಜಿಂಬಾಬ್ವೆ ಈ ಬಾರಿ T20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹ ಸಾಧ್ಯವಾಗಲಿಲ್ಲ. ಜಿಂಬಾಬ್ವೆ ವಿರುದ್ಧದ ಈ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಶುಭಮನ್ ಗಿಲ್ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ.
ಇದನ್ನೂ ಓದಿ: ಬ್ಯೂಟಿಯಲ್ಲಿ ಅನುಷ್ಕಾಗಿಂತಲೂ ಚಂದ ವಿರಾಟ್ ಅಕ್ಕನ ಮಗಳು! ಕೊಹ್ಲಿ ಸೊಸೆಯ ಅಂದಕ್ಕೆ ನಟಿಯರೂ ಸರಿಸಾಟಿಯಲ್ಲ…
ಭಾರತ ಮತ್ತು ಜಿಂಬಾಬ್ವೆ ಮುಖಾಮುಖಿ ದಾಖಲೆ
ಹೆಡ್ ಟು ಹೆಡ್ ರೆಕಾರ್ಡ್ ಬಗ್ಗೆ ಮಾತನಾಡುವುದಾದರೆ, ಇದುವರೆಗೆ ಭಾರತ ಮತ್ತು ಜಿಂಬಾಬ್ವೆ ನಡುವೆ 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ಜಿಂಬಾಬ್ವೆ ಕೇವಲ ಎರಡು ಬಾರಿ ಭಾರತವನ್ನು ಸೋಲಿಸಿದೆ. ಜಿಂಬಾಬ್ವೆ 2015 ಮತ್ತು 2016ರಲ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿತ್ತು..
ಜಿಂಬಾಬ್ವೆ ತನ್ನ ತವರಿನಲ್ಲಿ ಆಡುತ್ತಿದ್ದು ಪ್ರಯೋಜನವನ್ನು ಸಾಧ್ಯತೆ ಇದೆ. ಇದರಿಂದಾಗಿ ಈ ಸರಣಿಯು ಯುವ ಮತ್ತು ಅನನುಭವಿ ಟೀಮ್ ಇಂಡಿಯಾದ ಭರವಸೆಯ ಆಟಗಾರರ ಪ್ರತಿಭಾ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಿದೆ. ಜಿಂಬಾಬ್ವೆ ನಾಯಕ ಸಿಕಂದರ್ ರಜಾ 86 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಸಿಕಂದರ್ ರಜಾ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಉತ್ತಮ ಸ್ಪಿನ್ ಬೌಲರ್. ರಜಾ ಹೊರತುಪಡಿಸಿ, ಲ್ಯೂಕ್ ಜೊಂಗ್ವೆ 2014 ರಲ್ಲಿ ಪಾದಾರ್ಪಣೆ ಮಾಡಿದ ಇನ್ನೊಬ್ಬ ಅನುಭವಿ ಆಟಗಾರ.
ಇದನ್ನೂ ಓದಿ: ಹೆಂಡತಿ ತನ್ನ ಗಂಡನ ‘ಈ’ ಭಾಗವನ್ನು ಪ್ರತೀದಿನ ಮುಟ್ಟಿದರೆ… ದುಪ್ಪಟ್ಟು ಸುಖದ ಜೊತೆ ಪ್ರೀತಿಯೂ ಸಿಗುತ್ತೆ!
ಜಿಂಬಾಬ್ವೆ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಾದರೆ, ಉತ್ತಮ ಆರಂಭದ ಅವಶ್ಯಕತೆಯಿದೆ, ಇದಕ್ಕಾಗಿ ತಂಡವು ತನ್ನ ಆರಂಭಿಕ ಆಟಗಾರ ಇನ್ನೋಸೆಂಟ್ ಕೈಯಾ ಮೇಲೆ ಹೆಚ್ಚು ಅವಲಂಬಿತವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ