IndW vs IreW: ದಕ್ಷಿಣ ಆಫ್ರಿಕಾದ ಸೆಂಟ್ ಜಾರ್ಜ್ ಪಾರ್ಕ್ ನಲ್ಲಿ ನಡೆದ ಭಾರತ-ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ  5 ರನ್ ಗಳಿಂದ ಗೆಲುವು ಸಾಧಿಸಿದೆ. ಭಾರತದ ಪರ ರೇಣುಕಾ ಸಿಂಗ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಐರ್ಲೆಂಡ್ ಪರ ಗ್ಯಾಬಿ ಲೂಯಿಸ್ ಅತಿ ಹೆಚ್ಚು ಅಂದರೆ 32 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.


IND vs AUS: ಜಡೇಜಾ ಅಲ್ಲ, ಈ ಆಟಗಾರ ನಿಜವಾದ 'ಮ್ಯಾನ್ ಆಫ್ ದಿ ಮ್ಯಾಚ್'.!


COMMERCIAL BREAK
SCROLL TO CONTINUE READING

5 ರನ್ ಗಳಿಂದ ಗೆಲುವು ಸಾಧಿಸಿದ ಭಾರತ
ಭಾರತ ನೀಡಿದ 156 ರನ್ ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ತನ್ನ ಆರಂಭಿಕ ಎರಡು ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿದೆ. 8.2 ಓವರ್ ಗಳಲ್ಲಿ ತಂಡ 2 ವಿಕೆಟ್ ಗಳನ್ನು ಕಳೆದುಕೊಂಡು 54 ರನ್ ಗಳನ್ನು ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದೆ ಮತ್ತು ಪಂದ್ಯಕ್ಕೆ ಸ್ವಲ್ಪಕಾಲ ವಿರಾಮ ನೀಡಲಾಗಿತ್ತು. ಈ ಸಂದರ್ಭದಲ್ಲಿ ಲುಯಿಸ್ 32 ಹಾಗೂ ನಾಯಕಿ ಡೆನಲಿ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಆದರೆ, ವರುಣನ ಆರ್ಭಟ ನಿಲ್ಲದೆ ಇದ್ದ ಕಾರಣ ಪಂದ್ಯವನ್ನು ಡಿಆರ್ ಎಸ್ ಆಧಾರದಲ್ಲಿ ತೀರ್ಮಾನಿಸಲಾಗಿದ್ದು, ಭಾರತ 5 ರನ್ ಗಳಿಂದ ಗೆಲುವು ಸಾಧಿಸಿದೆ. ಡಿಆರ್ ಎಸ್ ನಿಯಮಗಳ ಪ್ರಕಾರ, ಪಂದ್ಯ ನಿಂತು ಹೋದ ಸಂದರ್ಭದಲ್ಲಿ ಐರ್ಲೆಂಡ್ 54 ರನ್ ಗಳಿಸಿತ್ತು ಮತ್ತು ಇದೆ ಅವಧಿಯಲ್ಲಿ ಭಾರತ 59 ರನ್ ಅಂದರೆ ಐರ್ಲೆಂಡ್ ಗಿಂತ 5 ರನ್ ಹೆಚ್ಚು ಗಳಿಸಿತ್ತು. ಹೀಗಾಗಿ ಭಾರತವನ್ನು ವಿಜೇತ ತಂಡ ಎಂದು ಘೋಶಿಸಲಾಗಿದೆ.


ಇದನ್ನೂ ಓದಿ-KL Rahul : ರಾಹುಲ್ ಉಪನಾಯಕತ್ವ ಕಿತ್ತುಕೊಂಡ ಬಿಸಿಸಿಐ, ಈ ಸ್ಥಾನಕ್ಕೆ 3 ಆಟಗಾರರು ಸ್ಪರ್ಧಿಗಳು


ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಸ್ವಲ್ಪ ನಿಧಾನಗತಿಯ ಪಿಚ್ನಲ್ಲಿ  ಶೆಫಾಲಿ ವರ್ಮಾ (24 ರನ್) ಸ್ಮೃತಿ ಮಂಧಾನ (87) ಜೊತೆ ಭಾರತಕ್ಕೆ ಬಲವಾದ  ಆರಂಭವನ್ನು ನೀಡಿದ್ದಾರೆ. ಮೊದಲ ವಿಕೆಟ್‌ ಪತನಗೊಂಡಾಗ ಒಂದು ತುದಿಯಲ್ಲಿ ನಿಯಮಿತ ಕಾಲಾಂತರದಲ್ಲಿ  ವಿಕೆಟ್‌ಗಳು ಉರುಳುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಅದೃಷ್ಟದ ರಥವನ್ನೇರಿದ್ದ ಸ್ಮೃತಿ ಮಂಧಾನ ರಭಸವಾಗಿ ಬ್ಯಾಟ್ ಬೀಸುತ್ತಿದ್ದರು ಮತ್ತು ಸ್ಲಾಗ್ ಓವರ್‌ಗಳಲ್ಲಿ ಉತ್ತಮ ಆಟ ಪ್ರದಶಿಸಿದ್ದಾರೆ. ಪಂದ್ಯದ 19 ನೇ ಓವರ್‌ನಲ್ಲಿ ಸ್ಮೃತಿ ಔಟಾದಾಗ, ಅವಳು ತಂಡಕ್ಕೆ ತನ್ನ ಪಾಲಿನ ಕೊಡುಗೆಯನ್ನು ನೀಡಿ ಆಗಿತ್ತು. ಮಂಧಾನ ಟಿ20ಯಲ್ಲಿ ತನ್ನ ಅತ್ಯುತ್ತಮ ಸ್ಕೋರ್ ದಾಖಲಿಸಿದ್ದಾರೆ. ಸ್ಮೃತಿ ಪ್ರಯತ್ನದಿಂದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 155 ರನ್‌ಗಳ ಗುರಿಯನ್ನು  ತಲುಪಲು ಸಾಧ್ಯವಾಯಿತು. ಸ್ಮೃತಿ ನಂತರ ಮೈದಾನಕ್ಕಿಳಿದ  ರೊಡ್ರಿಗಸ್ (19) ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...