ನವದೆಹಲಿ: IND W vs SA W - ಭಾರತೀಯ ಮಹಿಳಾ ಕ್ರಿಕೆಟ್(Women Cricket) ತಂಡದ ನಾಯಕಿ ಮಿಥಾಲಿ ರಾಜ್, ದಕ್ಷಿಣ ಆಫ್ರಿಕಾ (Ind Women vs SA Women)ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶಿಷ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಪಂದ್ಯದ 27.5ನೇ ಓವರ್ ನಲ್ಲಿ ಏನೇ ಬಾಸ್ ಅವರ ಬೌಲ್ ಅನ್ನು ಬೌಂಡರಿಗೆ ಅಟ್ಟುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000 ರನ್ಸ್ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮೊದಲು ಮಿಥಾಲಿ ರಾಜ್ ತಮ್ಮ ಖಾತೆಗೆ ಒಟ್ಟು 9,965 ರನ್ಸ್ ಸೇರಿಸಿದ್ದರು. ಈ ಪಂದ್ಯದಲ್ಲಿ ಮಿಥಾಲಿ 50 ಬೌಲ್ಗಳಲ್ಲಿ ಒಟ್ಟು 36 ರನ್ಸ್ ಗಳಿಸಿ ಔಟಾಗಿದ್ದಾರೆ. ವಿಶ್ವ ಮಹಿಳಾ ಕ್ರಿಕೆಟ್(International Women CricketInternational Women Cricket) ಕುರಿತು ಹೇಳುವುದಾದರೆ, ಈ ಗುರಿಯನ್ನು ಸಾಧಿಸಿದ ವಿಶ್ವದ ಎರಡನೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಕೀರ್ತಿಗೂ ಕೂಡ ಮಿಥಾಲಿ (Mithali Raj) ಪಾತ್ರರಾಗಿದ್ದಾರೆ.


Watch Video: 'ಸೀರೆಯಲ್ಲಿ' ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್


COMMERCIAL BREAK
SCROLL TO CONTINUE READING

ಮಿಥಾಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಆಡಿರುವ ಒಟ್ಟು 10 ಟೆಸ್ಟ್ ಪಂದ್ಯಗಳಲ್ಲಿ 663ರನ್ಸ್ ಗಳಿಸಿದ್ದರೆ, 89 T20 ಪಂದ್ಯಗಳಲ್ಲಿ ಸರಾಸರಿ 37.52 ರಂತೆ 2364 ರನ್ಸ್ ಗಳಿಸಿದ್ದಾರೆ. ಮಿಥಾಲಿ 212 ಪಂದ್ಯಗಳಲ್ಲಿ ಒಟ್ಟು 6974 ರನ್ಸ್ ಗಳಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಥಾಲಿ ಒಟ್ಟು 7 ಶತಕ ಹಾಗೂ 54 ಅರ್ಧಶತಕಗಳನ್ನು ಬಾರಿಸಿದ್ದಾರೆ.[[{"fid":"204409","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ- ಟಿ-20 ಕ್ರಿಕೆಟ್ ಗೆ ವಿದಾಯ ಹೇಳಿದ ಮಿಥಾಲಿ ರಾಜ್


ಇಂಗ್ಲೆಂಡ್ ನ ಮಾಜಿ ಕ್ರಿಕೆಟ್ ಆಟಗಾರ್ತಿ ಶಾರ್ಲೆಟ್ ಎಡ್ವರ್ಡ್ಸ್ ಈ ಗುರಿಯನ್ನು ಸಾಧಿಸಿದ ಮೊದಲ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಮಿಥಾಲಿ ಕ್ರೀಸ್ ಗೆ ಇಳಿಯುವ ಮುನ್ನ ಭಾರತ (India vs South Africa) ಕೇವಲ 64 ರನ್ ಗಳಿಗೆ ತನ್ನ ಎರಡು ವಿಕೆಟ್ ಕಳೆದುಕೊಂಡು  ಸಂಕಷ್ಟದ ಸ್ಥಿತಿಯಲ್ಲಿತ್ತು. ಬಳಿಕ ಮಿಥಾಲಿ, ಪೂನಂ ರಾವುತ್ ಜತೆ ಸೇರಿ ಪಂದ್ಯವನ್ನು ತನ್ನ ಹತೋಟಿಗೆ ತೆಗೆದುಕೊಂಡು ಸ್ಕೋರ್ ಅನ್ನು 141 ರನ್ಸ್ ಗಳಿಗೆ ತಲುಪಿಸಿದ್ದಾರೆ. ತಮ್ಮ ಆಟದ ವೇಳೆ ಮಿಥಾಲಿ ಒಟ್ಟು 5 ಬೌಂಡರಿ ಸಿಡಿಸಿದ್ದಾರೆ. 


ಏಕದಿನ ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಮಿಥಾಲಿ ರಾಜ್


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.