India Tour of Bangladesh: ಭಾರತ ತಂಡ ಸದ್ಯ ಒಂದು ತಿಂಗಳ ವಿಶ್ರಾಂತಿಯಲ್ಲಿದೆ. ನಂತರ ಟೀಂ ಇಂಡಿಯಾ ಜುಲೈ 12 ರಿಂದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2 ಟೆಸ್ಟ್, 3 ODI ಮತ್ತು 5 T20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ನಡುವೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಜುಲೈನಿಂದ ಭಾರತ ತಂಡ ಒಂದು ದೇಶದೊಂದಿಗೆ ಅಂತರಾಷ್ಟ್ರೀಯ ಸರಣಿಯನ್ನು ಆಡಲಿದೆ. ಆದರೆ ಇದು ಪುರುಷರ ಕ್ರಿಕೆಟ್ ತಂಡದ ವೇಳಾಪಟ್ಟಿಯಲ್ಲ ಬದಲಾಗಿ ಮಹಿಳಾ ಕ್ರಿಕೆಟ್ ತಂಡ. ಜುಲೈ 6 ರಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಈ ಪ್ರವಾಸ ಆರಂಭವಾಗಲಿದೆ.  ಅಲ್ಲಿ ತಂಡವು T20 ಮತ್ತು ODI ಸರಣಿಗಳನ್ನು ಆಡಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂದಿನ 11 ತಿಂಗಳು ಈ ರಾಶಿಯವರಿಗೆ ಸೋಲೇ ಇಲ್ಲ: ಗುರುಬಲದೊಂದಿಗೆ ಧನಲಕ್ಷ್ಮೀ ಹೆಜ್ಜೆಹೆಜ್ಜೆಗೂ ನಿಲ್ಲುವಳು!


ಜುಲೈ 6 ರಿಂದ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಜುಲೈನಲ್ಲಿ ವೈಟ್ ಬಾಲ್ ಸರಣಿಗಾಗಿ ಭಾರತೀಯ ಮಹಿಳಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮಹಿಳಾ ವಿಂಗ್ ಅಧ್ಯಕ್ಷೆ ಶಫಿಯುಲ್ ಆಲಂ ಚೌಧರಿ ನಡೆಲ್ ಅವರು ಕ್ರಿಕ್ ಬಜ್ ನಲ್ಲಿ ಇದನ್ನು ಖಚಿತಪಡಿಸಿದ್ದಾರೆ. "ಹೌದು, ನಾವು ಜುಲೈನಲ್ಲಿ ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ವೈಟ್-ಬಾಲ್ ಸರಣಿಯನ್ನು ಆಡಲಿದ್ದೇವೆ ಮತ್ತು ಎಲ್ಲಾ ಪಂದ್ಯಗಳನ್ನು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಾಗುವುದು" ಎಂದು ಅವರು ಹೇಳಿದ್ದಾರೆ.


SBNS (ಷೇರ್-ಎ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ) ಮಹಿಳಾ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸುತ್ತಿರುವುದು 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ. ಬಾಂಗ್ಲಾದೇಶ ಮಹಿಳಾ ತಂಡವು ಈ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ 2012 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿತ್ತು. ಭಾರತ ಮತ್ತು ಬಾಂಗ್ಲಾದೇಶ ನಡುವೆ ಎಲ್ಲಾ ಪಂದ್ಯಗಳು ನಡೆಯಲಿವೆ


ಇದನ್ನೂ ಓದಿ: ಬುಧನ ಶ್ರೀರಕ್ಷೆಯಿಂದ ಈ ರಾಶಿಯವರ ಹಣೆಬರಹವೇ ಚೇಂಜ್: ಅದೃಷ್ಟ-ಧನಸಂಪತ್ತು ಜೀವನದಲ್ಲಿ ಮೇಳೈಸುವುದು!


ಇದು ವೇಳಾಪಟ್ಟಿ:


ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲು ಭಾರತ ಮಹಿಳಾ ತಂಡ ಜುಲೈ 6 ರಂದು ಢಾಕಾ ತಲುಪಲಿದೆ. ಜುಲೈ 9, 11 ಮತ್ತು 13 ರಂದು T20I ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಮತ್ತು ಮೂರು ODI ಪಂದ್ಯಗಳು ಜುಲೈ 16, 19 ಮತ್ತು 22 ರಂದು ನಡೆಯಲಿವೆ. ಆದರೆ ಅದರ ಸಮಯ ಮತ್ತು ಭಾರತ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ ಬಳಿಕ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಆಟಗಾರರು ನಿರಂತರ ವಿಶ್ರಾಂತಿಯಲ್ಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ