ಕೊಲಂಬೊ: ಭಾರತ ತಂಡವು ನಿಡಹಾಸ್ T20 ಟೂರ್ನಿಯಲ್ಲಿ ಬಾಂಗ್ಲಾ ದೇಶದ ವಿರುದ್ದ ಸುಲಭ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. 


COMMERCIAL BREAK
SCROLL TO CONTINUE READING

ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ ಗಳಲ್ಲಿ ರೋಹಿತ್ ಶರ್ಮಾ (89) ಸುರೇಶ ರೈನಾ(47) ಶಿಖರ್ ಧವನ್ (35) ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ  ಮೂರು ವಿಕೆಟ್ ಕಳೆದುಕೊಂಡು 176 ಕಲೆ ಹಾಕಿತು.


ನಂತರ ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು 20 ಓವರ್ ಗಳಲ್ಲಿ ಕೇವಲ 159 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಬಾಂಗ್ಲಾಪರ ಮುಷ್ಪಿಕರ್ ರೆಹಮಾನ್ ಅಜೇಯ 72 ಗಳಿಸಿದರು ಸಹಿತ ತಂಡವನ್ನು ಗೆಲುವಿನೆಡೆ ತಲುಪಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ವಾಷಿಂಗ್ಟನ್ ಸುಂದರ್ ಮೂರು ವಿಕೆಟ್ ಗಳನ್ನೂ ಕಬಳಿಸುವ ಮೂಲಕ ಬಾಂಗ್ಲಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.