ನವದೆಹಲಿ: ರಾಜಕೋಟ್ ದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಮೊದಲು ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ರೋಹಿತ್ ಪಡೆ ಬಾಂಗ್ಲಾದೇಶವನ್ನು 6 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 153 ರನ್ ಗಳಿಗೆ ನಿಯಂತ್ರಿಸಿತು. ಬಾಂಗ್ಲಾದೇಶದ ಪರವಾಗಿ ಮೊಹಮ್ಮದ್ ನೈಮ್(36) ನಾಯಕ ಮಹಮುದುಲ್ಲಾ(30) ತಂಡವನ್ನು 150 ಗಡಿ ದಾಟಿಸುವಲ್ಲಿ ನೆರವಾದರು.  



ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ  118 ರನ್ ಗಳ ಮೊದಲ ವಿಕೆಟ್ ಜೊತೆಯಾಟ ತಂಡಕ್ಕೆ ಗೆಲುವನ್ನು ಸುಲಭ ಮಾಡಿತು.ರೋಹಿತ್ ಶರ್ಮಾ ಕೇವಲ 43 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಆರು ಬೌಂಡರಿಗಳ ನೆರವಿನಿಂದ 85 ರನ್ ಗಳಿಸಿದರು. ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡಿದ ಶಿಖರ್ ಧವನ್ 31 ರನ್ ಗಳನ್ನು ಗಳಿಸಿದರು.



ದೆಹಲಿಯಲ್ಲಿ ನಡೆದ ಟಿ-20 ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದ ಭಾರತ ಈಗ ರಾಜ್ ಕೋಟ ಪಂದ್ಯವನ್ನು ಗೆಲ್ಲುವ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡಿದೆ