ರಾಜಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡಿಸ್ ವಿರುದ್ದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ  ಭಾರತವು ಇನಿಂಗ್ಸ್ ಸಹಿತ 272 ರನ್ ಅಂತರಗಳ ಜಯ ಸಾಧಿಸಿದೆ.


COMMERCIAL BREAK
SCROLL TO CONTINUE READING

ಮೊದಲ ಇನ್ನಿಂಗ್ಸ್ ನಲ್ಲಿ  649 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದ  ಭಾರತ  ನಂತರ ವೆಸ್ಟ್ ಇಂಡಿಸ್ ತಂಡವನ್ನು  181 ರನ್ ಗಳಿಗೆ ಆಲೌಟ್ ಮಾಡಿತ್ತು.ಇದಾದ ನಂತರ ಫಾಲೋ ಆನ್  ನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕೆರೆಬಿಯನ್ ಪಡೆ ನಂತರ 196 ರನ್ ಗಳಿಗೆ ಸರ್ವ ಪತನವನ್ನು ಕಂಡಿತು.ಆ ಮೂಲಕ ಭಾರತ ತಂಡವು ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇನಿಂಗ್ಸ್ ಸಹಿತ  272 ರನ್ ಗಳ ಗೆಲುವನ್ನು ಕಾಣುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.



ಎರಡನೇ ಇನಿಂಗ್ಸ್ ನಲ್ಲಿ  ಕುಲದೀಪ್ ಯಾದವ್ ಅವರು ಐದು ವಿಕೆಟ್ ತಗೆದುಕೊಳ್ಳುವ ಮೂಲಕ  ವಿಂಡಿಸ್ ಬ್ಯಾಟಿಂಗ್ ಪತನಕ್ಕೆ ಕಾರಣವಾದರು.