India vs Bangladesh Test: ಬಾಂಗ್ಲಾದೇಶ ವಿರುದ್ಧ ಭಾರತ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶವನ್ನು ಸರಣಿಯಲ್ಲಿ ಹೊರಹಾಕಿದೆ ಭಾರತ. ಇದರೊಂದಿಗೆ ತವರು ನೆಲದಲ್ಲಿ ಟೀಂ ಇಂಡಿಯಾ ಸತತ 18ನೇ ಸರಣಿಯನ್ನು ಗೆದ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಸೊಪ್ಪನ್ನು ಅರೆದು ಹಣೆಗೆ ಹಚ್ಚಿದರೆ ತಿಂಗಳುಗಟ್ಟಲೆ ಕಡಿಮೆಯಾಗದ ಶೀತ, ಕೆಮ್ಮಿಗೆ ಒಂದೇ ನಿಮಿಷದಲ್ಲಿ ಪರಿಹಾರ ಸಿಗುತ್ತದೆ! ತಲೆನೋವಿಗೂ ಇದೇ ಮದ್ದು


ಬಾಂಗ್ಲಾದೇಶ ಭಾರತಕ್ಕೆ ಗೆಲ್ಲಲು ಕೇವಲ 95 ರನ್‌ಗಳ ಗುರಿ ನೀಡಿತ್ತು. ಈ ಅಲ್ಪ ಗುರಿ ಬೆನ್ನತ್ತಿದ್ದ ಭಾರತ ತಂಡ ಹೆಚ್ಚು ಸಮಯ ತೆಗೆದುಕೊಳ್ಳದೆ 3 ವಿಕೆಟ್‌ಗೆ 98 ರನ್ ಗಳಿಸಿ ಗೆಲುವು ಸಾಧಿಸಿತು. ರೋಹಿತ್ (8 ರನ್) ಮತ್ತು ಶುಭಮನ್ ಗಿಲ್ (6) ರನ್‌ ಗಳಿಸಿ ಮೆಹದಿ ಹಸನ್ ಮೀರಜ್‌ಗೆ ವಿಕೆಟ್‌ ಒಪ್ಪಿಸಿದರು. ಅದಾದ ಬಳಿಕ ಯಶಸ್ವಿ ಜೈಸ್ವಾಲ್ ಅದ್ಭುತ ಇನ್ನಿಂಗ್ಸ್ ಆಡಿ 45 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಅವರೊಂದಿಗೆ ಮೂರನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಇದಾದ ನಂತರ ಕೊಹ್ಲಿ ಮತ್ತು ರಿಷಬ್ ಪಂತ್ ಪಂದ್ಯವನ್ನು ಅಂತ್ಯಗೊಳಿಸಿದರು. ಕೊಹ್ಲಿ 29 ಮತ್ತು ಪಂತ್ 4 ರನ್ ಗಳಿಸಿ ಅಜೇಯರಾಗಿ ಉಳಿದರು. ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ ಮತ್ತು ಯಶಸ್ವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಇದನ್ನೂ ಓದಿ: ಗಂಟುಗಳಲ್ಲಿ ಅಂಟಿದ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ʼಈʼ ಚಟ್ನಿ! ನಿತ್ಯ ಊಟದೊಂದಿಗೆ ತಿಂದ್ರೆ ಮತ್ತೆಂದೂ ಆ ಸಮಸ್ಯೆ ಕಾಡಲ್ಲ!! 


ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಕಾನ್ಪುರದಲ್ಲಿ ಮೊದಲ 3 ದಿನ ಮಳೆಯಿಂದಾಗಿ ಅಡೆತಡೆ ಉಂಟಾಗಿತ್ತು. ಮೊದಲ ದಿನ ಕೇವಲ 35 ಓವರ್‌ಗಳು ಮಾತ್ರ ಆಡಲು ಸಾಧ್ಯವಾಯಿತು. ಆ ನಂತರ ಎರಡು ಮತ್ತು ಮೂರನೇ ದಿನ ಒಂದೇ ಒಂದು ಬಾಲ್ ಬೌಲ್ ಆಗಲಿಲ್ಲ. ನಾಲ್ಕನೇ ದಿನದಂದು ವಾತಾವರಣ ತಿಳಿಗೊಂಡಾಗ ಪಂದ್ಯ ಆರಂಭವಾಯಿತು. ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಸಂದರ್ಭದಲ್ಲಿ ಮೊಮಿನುಲ್ ಹಕ್ ಗರಿಷ್ಠ 103 ರನ್ ಗಳಿಸಿದ್ದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ತಲಾ 2 ವಿಕೆಟ್‌ ಪಡೆದರೆ,  ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ