ನವದೆಹಲಿ: ಜಸ್ಪ್ರಿತ್ ಬುಮ್ರಾ ಭಾರತದ ತಂಡದ ಪ್ರಮುಖ ಸದಸ್ಯರಾಗಿದ್ದಾರೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಅವರ ಮೊದಲ ಹ್ಯಾಟ್ರಿಕ್ ಅವರ ಕೊನೆಯ ಪಂದ್ಯವಲ್ಲ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ಬುಮ್ರಾ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಸರಣಿಯಲ್ಲಿ 13 ವಿಕೆಟ್ಗಳನ್ನು ಕಬಳಿಸುವ ಮೂಲಕ ಪ್ರಮುಖ ಪಾತ್ರವಹಿಸಿದ್ದರು.ಆ ಮೂಲಕ ವಿರಾಟ್ ನೇತೃತ್ವದ ಭಾರತ ತಂಡವು ಟೆಸ್ಟ್ ಸರಣಿಯನ್ನು 2-0 ರ ಅಂತರದಲ್ಲಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ 120 ಅಂಕಗಳೊಂದಿಗೆ ಅಗ್ರಸ್ತಾನವನ್ನು ಪಡೆದಿದೆ.


ಕ್ರಿಕೆಟಿನ ಮೂರು ಸ್ವರೂಪದ ಆಟದಲ್ಲಿ ವಿಶ್ವದ ಅತ್ಯುತ್ತಮ ಆಟಗಾರ ಎಂದು ಪರಿಗಣಿಸಲ್ಪಟ್ಟಿರುವ ಬುಮ್ರಾ, ಇತ್ತೀಚಿಗೆ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಿದ್ದರು. ಇದಕ್ಕೂ ಮೊದಲು ಭಾರತ ತಂಡದ ಪರವಾಗಿ ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ ಅವರು ಈ ಸಾಧನೆ ಮಾಡಿದ್ದರು.


ಈಗ ಐಎಎನ್ಎಸ್ ಪ್ರತಿಕ್ರಿಯಿಸಿರುವ ಭಾರತದ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ" ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಪ್ರಮುಖ ಆಟಗಾರ ಎಂದು ನಾನು ಭಾವಿಸುತ್ತೇನೆ ಎಂದರು. "ಬುಮ್ರಾ ಭಾರತಕ್ಕಾಗಿ ಆಡದಿದ್ದಾಗ, ಅದು ಎಲ್ಲರಿಗಿಂತ ದೊಡ್ಡ ನಷ್ಟವಾಗಲಿದೆ. ಅವರು ತಂಡಕ್ಕೆ ಅಷ್ಟು ಪ್ರಮುಖ ಆಟಗಾರರಾಗಿದ್ದಾರೆ. ಆದ್ದರಿಂದ ಅಂತಹ ಆಟಗಾರರನ್ನು ಭಾರತ ತಂಡ ಹೊಂದಿರುವುದು ಅದೃಷ್ಟದ ಸಂಗತಿ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಭಾರತ ಮೂರು ಸ್ವರೂಪದ ಆಟದಲ್ಲಿ ಅವರಂತಹ ಆಟಗಾರರನ್ನು ಹುಡುಕಬೇಕು" ಎಂದು ಹೇಳಿದರು.


2006 ರಲ್ಲಿ ಕರಾಚಿ ಟೆಸ್ಟ್ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಬುಮ್ರಾಗೂ ಮೊದಲು ಟೆಸ್ಟ್ ಹ್ಯಾಟ್ರಿಕ್ ಪಡೆದಿದ್ದರು.