Sri Lanka Tour: ಭಾರತ ಕ್ರಿಕೆಟ್ ತಂಡ ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ, ಇದಕ್ಕೆ ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದ್ದು, ಹೊಸ ಕೋಚ್‌ ಆಗಿ ಗಂಭೀರ್‌ ಜವಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾ ಕ್ರಿಕೆಟ್‌ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಷನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದೇ ಕಾರಣದಿಂದ ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.


COMMERCIAL BREAK
SCROLL TO CONTINUE READING

ನಿರೋಶನ್, 41ರ ಹರೆಯದ ಮಾಜಿ ಕ್ರಿಕೆಟಿಗ ತನ್ನ ಕುಟುಂಬದೊಂದಿಗೆ ಗಾಲೆಯ ಅಂಲಂಗೋಡ ನಗರದಲ್ಲಿ ವಾಸಿಸುತ್ತಿದ್ದ. ಈತನ ಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಮಂಗಳವಾರ ರಾತ್ರಿ, ಶ್ರೀಲಂಕಾದ ಕ್ರಿಕೆಟ್‌ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ, ಗಾಲೆ ಜಿಲ್ಲೆಯ ಅತ್ಯಂತ ಚಿಕ್ಕ ಪಟ್ಟಣವಾದ ಅಂಲಂಗೋಡಾದಲ್ಲಿ ವಾಸಿಸುತ್ತಿದ್ದ ನಿರೋಶನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಮುಂದೆಯೇ ಕಿಡಿಗೇಡಿಗಳು ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಿರಂತರ ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ, 41 ವರ್ಷದ ಈ ಮಾಜಿ ಕ್ರಿಕೆಟಿಗನನ್ನು ತನ್ನ ಮನೆಯಲ್ಲೇ ತನ್ನ ಕುಟುಂಬದವರ ಮುಂದೆ ಕೊಲೆ ಮಾಡಲಾಗಿದ್ದು, ಪ್ರಕರಣದ ಕುರಿತು ಯಾವುದೇ ಮಾಹಿತಿ ಪೋಲಿಸ್‌ ವಲಯದಿಂದ ಹೊರಬಂದಿಲ್ಲ.


ಇದನ್ನೂ ಓದಿ: "ನಾನು ಏನಾಗಿದ್ದರೂ ಅದು ಕೇವಲ ನಿನ್ನಿಂದಲೇ"..ತಾಯಿಯ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ರವೀಂದ್ರಾ ಜಡೇಜಾ


ಅಂಡರ್-19 ಕ್ರಿಕೆಟ್ ತಂಡದ ನಾಯಕರಾಗಿದ್ದ ಧಮ್ಮಿಕಾ ನಿರೋಷನ್ ಶ್ರೀಲಂಕಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆಲ್ ರೌಂಡರ್ ಆಗಿದ್ದ ಅವರು 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ಗಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗನ ಸಾವು ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಆಘಾತ ತಂದಿದೆ.


ಭಾರತದ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ


27 ಜುಲೈ - 1 ನೇ ಟಿ20, ಸಂಜೆ 7 ಕ್ಕೆ, ಪಲ್ಲೆಕೆಲೆ
28 ಜುಲೈ - 2 ನೇ ಟಿ20, ರಾತ್ರಿ 7 ಕ್ಕೆ, ಪಲ್ಲೆಕೆಲೆ
30 ಜುಲೈ - 3 ನೇ ಟಿ20, ಸಂಜೆ 7 ಕ್ಕೆ, ಪಲ್ಲೆಕೆಲೆ
2 ಆಗಸ್ಟ್ - 1 ನೇ ODI, 2.30 ಕ್ಕೆ, ಕೊಲಂಬೊ
4 ಆಗಸ್ಟ್ - 2 ನೇ ODI, 2.30 ಕ್ಕೆ, ಕೊಲಂಬೊ
7 ಆಗಸ್ಟ್ - 3 ನೇ ODI, 2.30 ಕ್ಕೆ, ಕೊಲಂಬೊ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.