ನವದೆಹಲಿ:ಕರೋನಾ ವೈರಸ್‌ನಿಂದಾಗಿ ವಿಶ್ವದ ಹೆಚ್ಚಿನ ದೇಶಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಸಮಯದಲ್ಲಿ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಸಂಪರ್ಕ ಹೊಂದಿದ್ದಾರೆ. ಮತ್ತೊಂದೆಡೆ, ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಕೂಡ ವಿಡಿಯೋವೊಂದನ್ನು ಹರಿಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಗೆ ಒಳಗಾಗಿದ್ದರು. ಆದರೆ, ತಮ್ಮನ್ನು ಟ್ರೋಲ್ ಮಾಡಿರುವ ಟ್ರೋಲ್‌ಗಳಿಗೆ ಸೂಕ್ತ ಉತ್ತರ ನೀಡಲು, ಹಸೀನ್ ಜಹಾನ್ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹಸೀನ್ ಜಹಾನ್ ತಮ್ಮ ವಿಡಿಯೋ ಹಂಚಿಕೊಂಡಿದ್ದು, "ಕಿಚ್ಚು ಹಚ್ಚಿಕೊಳ್ಳಲು ಸಿದ್ಧರಾಗಿ" ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಹಸಿನ್ ಜಹಾನ್ ಇನ್ನೂ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದ ಹಸೀನ್ ಜಹಾನ್  'ನಾನು ಕಿಡಿ ಹೊತ್ತಿಸಿದ್ದೇನೆ, ಈಗ ನೀವು ಸಿಡಿಯುತ್ತಲೇ ಇರಿ' ಎಂದು ಬರೆದುಕೊಂಡಿದ್ದಳು.



ಹಸೀನ್ ಜಹಾನ್ ಹಲವು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೀಡಿಯೊ ಹಂಚಿಕೊಳ್ಳುವ ಮೂಲಕ ಚರ್ಚೆ ಹುತ್ತುಹಾಕುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ತಮ್ಮ ವೀಡಿಯೊಗಳ ಕಾರಣದಿಂದ ಹಸೀನ್ ಜಹಾನ್ ಇತ್ತೀಚೆಗೆ ಸಾಕಷ್ಟು ಟ್ರೋಲ್ ಗೂ ಕೂಡ ಒಳಗಾಗಿದ್ದರು.ತಮ್ಮ ವಿಡಿಯೋ ಟ್ರೋಲ್ ಗೆ ಒಳಗಾದ ಬಳಿಕ ಹಸೀನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ನಿರಂತರವಾಗಿ ಟ್ರೋಲ್‌ಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಲೇ ಇದ್ದಾರೆ. ಟ್ರೊಲ್ ಗೆ ಒಳಗಾದ ಬಳಿಕ ಹಸೀನ್ ಸತತ ಮೂರು ವಿಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


2018 ರಲ್ಲಿ, ಹಸೀನ್ ಜಹಾನ್ ಮೊಹಮ್ಮದ್ ಶಮಿ ಅವರ ಮೇಲೆ ಮ್ಯಾಚ್ ಫಿಕ್ಸಿಂಗ್ ಹಾಗೂ ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿದ್ದರು. ಆದರೆ, ತನಿಖೆಯ ನಂತರ, ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶಮಿಗೆ ಬಿಸಿಸಿಐ ಕ್ಲೀನ್ ಚಿಟ್ ನೀಡಿತ್ತು. ಈ ಸಂದರ್ಭದಲ್ಲಿ ಉಭಯರ ನಡುವಿನ ವಿವಾದ ಸಾಕಷ್ಟು ಸುದ್ದಿಯಲ್ಲಿತ್ತು. ಈ ವಿವಾದದ ನಂತರ ಹಸೀನ್ ಜಹಾನ್ ಮತ್ತು ಮೊಹಮ್ಮದ್ ಶಮಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.