Cricket and General Knowledge Quiz: ಇಂದು ನಾವು ಓದುಗರಿಗಾಗಿ ರಸಪ್ರಶ್ನೆಯೊಂದನ್ನು ಕೇಳಲಿದ್ದೇವೆ. ಇದು ಕ್ರೀಡೆಗೆ ಸಂಬಂಧಿಸಿದ್ದಾಗಿದೆ. ಏಕದಿನ ಕ್ರಿಕೆಟ್‌’ನಲ್ಲಿ ಕೆಲ ಕ್ರಿಕಟಿಗರನ್ನು ಇದುವರೆಗೆ ಔಟ್ ಮಾಡೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಅದರಲ್ಲೂ ಮೂವರು ಭಾರತದ ಬ್ಯಾಟ್ಸ್‌ಮನ್ಸ್. ಆ ಭಾರತೀಯ ಕ್ರಿಕೆಟಿಗರು ಯಾರು ಗೊತ್ತಾ?


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಬ್ಯಾಟ್ಸ್’ಮನ್’ ಗಳು ಇನ್ಮುಂದೆ ಬೌಲಿಂಗ್ ಮಾಡ್ತಾರೆ… ಕೋಚ್


ಸೌರಭ್ ತಿವಾರಿ:


ಭಾರತದ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ಅವರನ್ನು ವಿಶ್ವದ ಯಾವುದೇ ಬೌಲರ್ ಏಕದಿನ ಕ್ರಿಕೆಟ್‌’ನಲ್ಲಿ ಔಟ್ ಮಾಡಲು ಸಾಧ್ಯವಾಗಲಿಲ್ಲ. ಸೌರಭ್ ತಿವಾರಿ ಟೀಮ್ ಇಂಡಿಯಾ ಪರ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು ಎರಡು ಇನ್ನಿಂಗ್ಸ್‌’ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದ್ದಾರೆ. ಈ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೌರಭ್ ತಿವಾರಿ ಔಟಾಗದೆ ಉಳಿದಿದ್ದಾರೆ. ಆದರೆ ಅವರಿಗೆ ಹೆಚ್ಚು ಕಾಲ ತಂಡದಲ್ಲಿ ಅವಕಾಶ ನೀಡಿರಲಿಲ್ಲ.


ಸೌರಭ್ ತಿವಾರಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಕಾಲಿಟ್ಟಾಗ, ಅವರನ್ನು ಧೋನಿಯ ಉತ್ತರಾಧಿಕಾರಿ ಎಂದು ಕರೆಯಲಾಯಿತು. ಸೌರಭ್ ತಿವಾರಿ ಅವರ ಉದ್ದನೆಯ ಕೂದಲನ್ನು ನೋಡಿದ ಜನರು ಅವರನ್ನು ಧೋನಿಯೊಂದಿಗೆ ಹೋಲಿಸುತ್ತಿದ್ದರು. ಸೌರಭ್ ತಿವಾರಿ ಐಪಿಎಲ್‌’ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದರು.


ಫೈಜ್ ಫಜಲ್:


ಫೈಜ್ ಫಜಲ್ ದೇಶಿಯ ಕ್ರಿಕೆಟ್‌’ನಲ್ಲಿ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು ಮತ್ತು ಈ ಕಾರಣಕ್ಕಾಗಿಯೇ ಅವರಿಗೆ ಟೀಮ್ ಇಂಡಿಯಾದಲ್ಲಿಯೂ ಅವಕಾಶ ಸಿಕ್ಕಿತು, ಆದರೆ ಈ ಆಟಗಾರ ಟೀಂ ಇಂಡಿಯಾ ಪರ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. 2016ರಲ್ಲಿ ನಡೆದ ಈ ಏಕದಿನ ಪಂದ್ಯದಲ್ಲಿ ಫೈಜ್ ಫಜಲ್ ಜಿಂಬಾಬ್ವೆ ವಿರುದ್ಧ ಅಜೇಯ 55 ರನ್ ಗಳಿಸಿದ್ದರು. ಈ ಅದ್ಭುತ ಅರ್ಧಶತಕದ ನಂತರವೂ ಅವರನ್ನು ತಂಡದಿಂದ ಕೈಬಿಡಲಾಯಿತು 


ಇದನ್ನೂ ಓದಿ: ರೋಹಿತ್ ಶರ್ಮಾ ಹೆಸರಿನಲ್ಲಿದ್ದ 14 ವರ್ಷ ಹಳೆಯ ದಾಖಲೆ ಇನ್ಮುಂದೆ ಜೈಸ್ವಾಲ್ ತೆಕ್ಕೆಗೆ!


ಭರತ್ ರೆಡ್ಡಿ:


ಇಂದಿನ ಯುವಕರಿಗೆ ಭರತ್ ರೆಡ್ಡಿ ಹೆಸರು ತಿಳಿದಿಲ್ಲದಿರಬಹುದು. ಈ ಆಟಗಾರ ಭಾರತಕ್ಕಾಗಿ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಭರತ್ ರೆಡ್ಡಿ ಅವರು 1978 ರಿಂದ 1981 ರವರೆಗೆ ಭಾರತಕ್ಕಾಗಿ ಮೂರು ODIಗಳನ್ನು ಆಡಿದರು. ಅದರಲ್ಲಿ ಅವರು ಎರಡು ಬಾರಿ ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆದರು ಮತ್ತು ಎರಡೂ ಬಾರಿ ಅಜೇಯರಾಗಿ ಉಳಿದರು. ಇದಾದ ಬಳಿಕ ಭರತ್ ರೆಡ್ಡಿ ಅವರನ್ನೂ ಟೀಂ ಇಂಡಿಯಾದಿಂದ ಕೈಬಿಡಲಾಗಿದ್ದು, ಅವರ ವೃತ್ತಿಜೀವನವೂ ದುಃಖದ ಅಂತ್ಯ ಕಂಡಿತು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.