ನವದೆಹಲಿ: ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಫುಟ್ಬಾಲ್ ಆಟಗಾರರಾಗಿದ್ದಾರೆ.ಈಗ ಅವರು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.ಅಷ್ಟೇ ಅಲ್ಲದೆ ಈಗ ಅವರಿಗೆ ಲಿಯೋನಿಲ್ ಮೆಸ್ಸಿ ಅವರಂತಹ ಖ್ಯಾತನಾಮ ಆಟಗಾರರ ದಾಖಲೆಯನ್ನು ಮುರಿಯುವ ಅವಕಾಶವೊಂದು ಎದುರಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Spirulina Health Benefits: ಆರೋಗ್ಯ ಸಂಜೀವನಿ 'ಸ್ಪಿರುಲಿನಾ' ಬಗ್ಗೆ ನಿಮಗೆಷ್ಟು ಗೊತ್ತು?


ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಅವರು ಅತಿ ಹೆಚ್ಚು ಗೋಲ್ ಗಳನ್ನು ಗಳಿಸಿದ ಸಕ್ರಿಯ ಆಟಗಾರ ಎನ್ನುವ ಖ್ಯಾತಿಗೆ ಸುನಿಲ್ ಛೆಟ್ರಿ ಪಾತ್ರರಾಗಿದ್ದಾರೆ.ಇದುವರೆಗೆ ಅವರು 84 ಗೋಲ್ ಗಳನ್ನು ಗಳಿಸಿದ್ದಾರೆ, ಮೆಸ್ಸಿಗಿಂತ ಕೇವಲ ಎರಡು ಗೋಲ್ ಗಳಷ್ಟು ಅವರು ಹಿಂದೆ ಇದ್ದಾರೆ. ಇನ್ನೊಂದೆಡೆಗೆ ರೋನಾಲ್ಡೋ 117 ಗೋಲ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 86 ಗೋಲ್ ಗಳೊಂದಿಗೆ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: Juice For Bad Cholesterol Control: ನಿತ್ಯ ಈ ಜ್ಯೂಸ್ ಸೇವಿಸಿ ಕೇವಲ 90 ದಿನಗಳಲ್ಲಿ ಕೊಲೆಸ್ಟ್ರಾಲ್ ಗೆ ಗುಡ್ ಬೈ ಹೇಳಿ


ಈಗ ಈ ದಾಖಲೆ ಮುರಿಯುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುನಿಲ್ ಚೆಟ್ರಿ "ಇದೊಂದು ರೀತಿ ಸಂತೋಷದ ಭಾವನೆ ಎಂದು ಹೇಳಬಹುದು, ಆದರೆ ಅದನ್ನು ನೀವು ಮುಂದುವರೆಸಿಕೊಂಡು ಹೋಗಬೇಕು.ನಾನು ನಿಜವಾಗಿಯೂ ದಾಖಲೆಗಳ ಬಗ್ಗೆ ಹೆದರುವುದಿಲ್ಲ.ಆದರೆ ಮೈದಾನಕ್ಕೆ ಹೋಗುವಾಗ ಕೊನೆಯ ಕ್ಷಣಗಳನ್ನು ಆನಂದಿಸಲು ಬಯಸುತ್ತೇನೆ' ಎಂದು ಅವರು ಹೇಳಿದರು. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.