ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡ- ಕಪಿಲ್ ದೇವ್
ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಭಾನುವಾರದಂದು ವಿಶ್ವಕಪ್ ಟೂರ್ನಿಯ ಪಾಕಿಸ್ತಾನದ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿ: ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಭಾನುವಾರದಂದು ವಿಶ್ವಕಪ್ ಟೂರ್ನಿಯ ಪಾಕಿಸ್ತಾನದ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದನೇತೃತ್ವ ವಹಿಸಿದ ಕಪಿಲ್ ದೇವ್ ಅವರು ಪ್ರಸಕ್ತ ಭಾರತೀಯ ತಂಡವು ಈಗ ಉತ್ತಮ ಕ್ರಿಕೆಟ್ ಆಡುತ್ತಿದೆ ಎಂದು ಹೇಳಿದರು "ತಂಡವು ಖಂಡಿತವಾಗಿಯೂ ಪಾಕಿಸ್ತಾನ ವಿರುದ್ಧ ಗೆಲ್ಲುತ್ತದೆ. ಏಕೆಂದರೆ ಅವರು ಆ ಸಮಯದಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಹೇಳಿದರು.
ತಾವು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಪಾಕಿಸ್ತಾನ ತಂಡವು ನೆಚ್ಚಿನ ತಂಡವಾಗಿತ್ತು.ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಾರತ ತಂಡವು ಪಾಕ್ ಗಿಂತಲೂ ಈಗ ಉತ್ತಮವಾಗಿದೆ ಎಂದು ಕಪಿಲ್ ಹೇಳಿದರು.ಈಗಾಗಲೇ ಭಾರತ ತಂಡವು ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಕಂಡಿದೆ.
ಆದರೆ ಈಗ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯಗೊಂಡು ಮೂರು ವಾರಗಳ ಕಾಲ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವುದು ಈಗ ಭಾರತಕ್ಕೆ ಚಿಂತೆಗಿಡು ಮಾಡಿದೆ.ಈ ವಿಚಾರವಾಗಿ ಮಾತನಾಡಿದ ಕಪಿಲ್ ದೇವ್ ಅದರ ಬಗ್ಗೆ ನಕರಾತ್ಮಕವಾಗಿ ಚಿಂತೆ ಮಾಡುವುದು ಸರಿಯಲ್ಲ. ಏಕೆಂದರೆ ನಾವು ಈ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ " ಎಂದರು.
ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಶಿಖರ್ ಧವನ್ ಪ್ರಮುಖ ಪಾತ್ರ ವಹಿಸಿದ್ದರು.ಈ ಪಂದ್ಯದಲ್ಲಿಯೇ ಅವರು ಗಾಯಗೊಂಡು ಈಗ ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.