ಮತ್ತೊಂದು ವಿಶ್ವದಾಖಲೆಯ ಸನಿಹದಲ್ಲಿ ಭಾರತ ತಂಡ, ಫೈನಲ್ ಗೆದ್ದರೆ ಈ ದಾಖಲೆ ನಿರ್ಮಾಣ!
Indian team : ನಾಳೆ ನಡೆಯುವ ವಿಶ್ವಕಪ್ ಗೆಲುವನ್ನು ಭಾರತ ಸಾಧಿಸಿದರೆ ಭಾರತ ತನ್ನದೇ ದಾಖಲೆಯನ್ನು ಸರಿಗಟ್ಟಲಿದೆ.
Indian team record : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ವಿರುದ್ಧ ಗೆಲ್ಲುವ ಮೂಲಕ ಭಾರತ ತಂಡ ಮತ್ತೊಂದು ದಾಖಲೆಯನ್ನು ಸರಿಗಟ್ಟುವಲ್ಲಿ ತಯಾರಾಗಿ ನಿಂತಂತಿದೆ ಈ ಮೂಲಕ ನಾಳೆ ನಡೆಯುವ ವಿಶ್ವಕಪ್ ಗೆಲುವನ್ನು ಭಾರತ ಸಾಧಿಸಿದರೆ ಭಾರತ ತನ್ನದೇ ದಾಖಲೆಯನ್ನು ಸರಿಗಟ್ಟಲಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಭಾರತ ತಂಡ ಮತ್ತೊಂದು ವಿಶ್ವದಾಖಲೆಯ ಸನಿಹದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಗೆದ್ದರೆ ತನ್ನದೇ ದಾಖಲೆಯನ್ನು ಸರಿಗಟ್ಟಲಿದೆ.
ಇದನ್ನು ಓದಿ :ಕೆಎಂಹೆಚ್ ಕಪ್ : ಈ ಟೂರ್ನಿಯ ರಾಯಭಾರಿ ಆಗಿ ನಟಿ ಭಾವನಾ ರಾಮಣ್ಣ..!
ಕಳೆದೊಂದು ವರ್ಷದಲ್ಲಿಇಂಗ್ಲೆಂಡ್ ವಿರುದ್ಧದ ಗೆಲುವಿನ ಮೂಲಕ ಭಾರತ ಒಟ್ಟು ಸತತ 11 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತ ತಂಡ 2023ರ ಡಿಸೆಂಬರ್ ನಿಂದ 2024ರ ಜೂನ್ ವರೆಗೂ ಒಟ್ಟು 11 ಪಂದ್ಯಗಳಲ್ಲಿ ಜಯಭೇರಿ ಭಾರಿಸಿದೆ. ಈ ದಾಖಲೆಯೊಂದಿಗೆ ಭಾರತ ಸತತವಾಗಿ 2ನೇ ಬಾರಿಗೆ ಗರಿಷ್ಠ ಪಂದ್ಯಗಳಲ್ಲಿ ಜಯ ಗಳಿಸಿದ ದಾಖಲೆಗೆ ಪಾತ್ರವಾಗುತ್ತದೆ. ಇದಕ್ಕಾಗಿ ನಾಳೆ ನಡೆಯುವ ಫೈನಲ್ ಪಂದ್ಯವನ್ನೂ ಗೆದ್ದರೆ ಭಾರತ ತಂಡ ತನ್ನದೇ ದಾಖಲೆಯನ್ನು ಸರಿಗಟ್ಟಲಿದೆ
2021ರ ನವೆಂಬರ್ ನಿಂದ ಫೆಬ್ರವರಿ 2022ರವರೆಗೂ ಸತತ 12 ಪಂದ್ಯಗಳಲ್ಲಿ ಜಯಗಳಿಸಿತ್ತು. ನಾಳೆ ಪಂದ್ಯವನ್ನು ಗೆದ್ದರೆ ತನ್ನದೇ ದಾಖಲೆಯನ್ನು ಮತ್ತೊಮ್ಮೆ ಸರಿಗತ್ತಲಿದೆ.
ಇದನ್ನು ಓದಿ :ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!! ಯಾಕೆ ಗೊತ್ತಾ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ..
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಅತೀ ಹೆಚ್ಚು ಪಂದ್ಯಗಳಲ್ಲಿ ಸತತ ಜಯಗಳಿಸಿದ 2ನೇ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ. ಹಾಲಿ ಟೂರ್ನಿಯಲ್ಲಿ ಭಾರತ ಸತತ 7 ಪಂದ್ಯಗಳಲ್ಲಿ ಜಯಗಳಿಸಿದ್ದು, ಇದೇ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 8 ಪಂದ್ಯಗಳಲ್ಲಿ ಜಯಭೇರಿ ಭಾರಿಸಿ ಅಗ್ರ ಸ್ಥಾನದಲ್ಲಿದೆ. ಫೈನಲ್ ಭಾರತ ಗೆದ್ದರೆ ಆಗ ದಕ್ಷಿಣ ಆಫ್ರಿಕಾದ ದಾಖಲೆಯನ್ನು ಸರಿಗಟ್ಟಲಿದೆ.
8* - ದಕ್ಷಿಣ ಆಫ್ರಿಕಾ (2024)
7* - ಭಾರತ (2024)
6 -ಶ್ರೀಲಂಕಾ (2009)
6 - ಆಸ್ಟ್ರೇಲಿಯಾ(2010)
6 - ಆಸ್ಟ್ರೇಲಿಯಾ (2021)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ