Commonwealth games 2022: `ಭಾರತೀಯ ಕುಸ್ತಿಪಟುಗಳು 7 ರಿಂದ 8 ಚಿನ್ನದ ಪದಕ ಗೆಲ್ಲುವುದು ಖಚಿತ`
ಜುಲೈ 28 ರಿಂದ ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಕುಸ್ತಿ ತಂಡವು 8-9 ಚಿನ್ನದ ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಶುಕ್ರವಾರದಂದು ಹೇಳಿದ್ದಾರೆ. ರವಿ ದಹಿಯಾ (57 ಕೆಜಿ), ಬಜರಂಗ್ ಪುನಿಯಾ (65 ಕೆಜಿ), ನವೀನ್ (74 ಕೆಜಿ), ನವೀನ್ (74 ಕೆಜಿ) ), ದೀಪಕ್ ಪುನಿಯಾ (86 ಕೆಜಿ), ದೀಪಕ್ (97 ಕೆಜಿ) ಮತ್ತು ಮೋಹಿತ್ ದಹಿಯಾ (125 ಕೆಜಿ) ಅವರು ಈ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ನವದೆಹಲಿ: ಜುಲೈ 28 ರಿಂದ ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಕುಸ್ತಿ ತಂಡವು 8-9 ಚಿನ್ನದ ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಶುಕ್ರವಾರದಂದು ಹೇಳಿದ್ದಾರೆ. ರವಿ ದಹಿಯಾ (57 ಕೆಜಿ), ಬಜರಂಗ್ ಪುನಿಯಾ (65 ಕೆಜಿ), ನವೀನ್ (74 ಕೆಜಿ), ನವೀನ್ (74 ಕೆಜಿ) ), ದೀಪಕ್ ಪುನಿಯಾ (86 ಕೆಜಿ), ದೀಪಕ್ (97 ಕೆಜಿ) ಮತ್ತು ಮೋಹಿತ್ ದಹಿಯಾ (125 ಕೆಜಿ) ಅವರು ಈ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇನ್ನೊಂದೆಡೆಗೆ ಮಹಿಳೆಯರ ವಿಭಾಗದಲ್ಲಿ ಪೂಜಾ ಗೆಹ್ಲೋಟ್ (50 ಕೆಜಿ), ವಿನೇಶ್ ಫೋಗಟ್ (53 ಕೆಜಿ), ಅಂಶು ಮಲಿಕ್ (57 ಕೆಜಿ), ಸಾಕ್ಷಿ ಮಲಿಕ್ (62 ಕೆಜಿ), ದಿವ್ಯಾ ಕಕ್ರನ್ (68 ಕೆಜಿ) ಮತ್ತು ಪೂಜಾ ಧಂಡಾ (76 ಕೆಜಿ) ಇದ್ದಾರೆ. ಇವೆರಲ್ಲರೂ ಈಗ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಇದನ್ನು ಓದಿ: Horoscope Today: ಈ ರಾಶಿಯವರಿಗೆ ಧನಲಾಭದ ಜೊತೆಗೆ ಯಶಸ್ಸು ಸಿಗಲಿದೆ
'ಕುಸ್ತಿಗೆ ಕಾಮನ್‌ವೆಲ್ತ್ ಕ್ರೀಡಾಕೂಟವು ಮುಖ್ಯವಾಗಿದೆ. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತೀಯ ಕುಸ್ತಿಪಟುಗಳು 8-9 ಚಿನ್ನದ ಪದಕಗಳನ್ನು ಗೆಲ್ಲುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಒಲಿಂಪಿಕ್ಸ್‌ನಂತೆ, ನಾವು ಕುಸ್ತಿಯಿಂದ 7 ರಲ್ಲಿ 2 ಪದಕಗಳನ್ನು ಪಡೆದಿದ್ದೇವೆ. ಹಾಗಾಗಿ ಭಾರತವು ಗರಿಷ್ಠ ಚಿನ್ನದ ಪದಕಗಳನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. "ಎಂದು ಯೋಗೇಶ್ವರ್ ದತ್ ಎಎನ್‌ಐಗೆ ತಿಳಿಸಿದ್ದಾರೆ.
ಇದೇ ವೇಳೆ ಮುಂದೂಡಲ್ಪಟ್ಟ ಏಷ್ಯನ್ ಕ್ರೀಡಾಕೂಟದ ಬಗ್ಗೆ ಮಾತನಾಡಿದ ಯೋಗೇಶ್ವರ್, "ಮುಂದೂಡಲ್ಪಟ್ಟ ನಂತರವೂ ತಯಾರಿ ಮುಂದುವರಿಯುತ್ತದೆ. ಇದು ನಮ್ಮ ನ್ಯೂನತೆಗಳನ್ನು ನಿವಾರಿಸಲು ನಮಗೆ ಸಮಯ ನೀಡುತ್ತದೆ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದರಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.