ನವದೆಹಲಿ: ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಕರೋಲಿನಾ ಮರೀನ್ ಆಟದ ಮಧ್ಯದಲ್ಲಿ ಗಾಯಗೊಂಡು ನಿವೃತ್ತಿಯಾದ ಪರಿಣಾಮ ಸೈನಾ ನೆಹ್ವಾಲ್ ರನ್ನು ಇಂಡೋನೇಷ್ಯಾ ಮಾಸ್ಟರ್ಸ್ ನ ಚಾಂಪಿಯನ್ ಎಂದು ಘೋಷಣೆ ಮಾಡಲಾಯಿತು.



COMMERCIAL BREAK
SCROLL TO CONTINUE READING

ಮರೀನ್ ಗಾಯಗೊಳ್ಳುವ ಮೊದಲು 10-4 ರ ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು.ಮೊದಲ ಸುತ್ತಿನಲ್ಲಿ ಮರೀನ್ ಅವರ ಒಡೆತಗಳಿಗೆ ಉತ್ತರಕೊಡುವಲ್ಲಿ ಸೈನಾ ಹಿಂದೆ ಬಿದ್ದಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಸೈನಾ ಅವರು  ಚೀನಾದ ಆಟಗಾರ್ತಿ ಹೇ ಬಿಂಗ್ ಜಿಯಾವೋ ಅವರನ್ನು 18-21,21-12,21-18 ರ ಅಂತರದಲ್ಲಿ ಸೋಲಿಸಿ ಅಂತಿಮ ಘಟ್ಟ ತಲುಪಿದ್ದರು.


ಇದಕ್ಕೂ ಮುಂಚೆ ಸೈನಾ ನೆಹ್ವಾಲ್ ಮಲೇಶಿಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಮರೀನ್ ವಿರುದ್ದ ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದ್ದರು.