ಕ್ರಿಕೆಟ್ ಜಗತ್ತನ್ನೇ ನಡುಗಿಸಿದ ಐವರು ಅವಳಿಗಳಿವರು…! ಎದುರಾಳಿಗಳ ಬೆವರಿಳಿಸಿದ ಸಹೋದರರು…!
Twin Cricketers in the World: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಮೈದಾನಕ್ಕಿಳಿದ ಅವಳಿ ಸಹೋದರರ ಜೋಡಿ ಆಸ್ಟ್ರೇಲಿಯಾದ ಮಾರ್ಕ್ ವಾ ಮತ್ತು ಸ್ಟೀವ್ ವಾ. ಈ ಇಬ್ಬರು ಸಹೋದರರು 11 ಡಿಸೆಂಬರ್ 1988ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡಿದ್ದರು.
Twin Cricketers in the World: ರಾಷ್ಟ್ರೀಯ ಅವಳಿ ದಿನವನ್ನು ಪ್ರತಿ ವರ್ಷ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ. ಅವಳಿ ಎಂದರೆ ಒಟ್ಟಿಗೆ ಹುಟ್ಟಿದ ಇಬ್ಬರು ಎಂದರ್ಥ. ಅನೇಕ ಅವಳಿ ಕ್ರಿಕೆಟಿಗರು ಕ್ರಿಕೆಟ್ ಜಗತ್ತಿನಲ್ಲಿ ಪಂದ್ಯಗಳನ್ನಾಡಿದ್ದಾರೆ.
ನಾವಿಂದು ಈ ವರದಿಯಲ್ಲಿ ಅಂತಹ 5 ಕ್ರಿಕೆಟ್ ಜೋಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಗರ್ಲ್ ಫ್ರೆಂಡ್ ಇವರೇ… ಮೊಟ್ಟಮೊದಲ ಬಾರಿಗೆ ಫೇಸ್ ರಿವೀಲ್!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಮೈದಾನಕ್ಕಿಳಿದ ಅವಳಿ ಸಹೋದರರ ಜೋಡಿ ಆಸ್ಟ್ರೇಲಿಯಾದ ಮಾರ್ಕ್ ವಾ ಮತ್ತು ಸ್ಟೀವ್ ವಾ. ಈ ಇಬ್ಬರು ಸಹೋದರರು 11 ಡಿಸೆಂಬರ್ 1988ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಮಾರ್ಕ್ ವಾ ಬೌಲಿಂಗ್ ಮಾಡಲು ಬರದಿದ್ದರೂ, ಫೀಲ್ಡಿಂಗ್’ನಿಂದ ಪಾಕಿಸ್ತಾನಕ್ಕೆ ದುಸ್ವಪ್ನವಾಗಿ ಕಾಡಿದ್ದರು. ಅಂದಹಾಗೆ ಈ ಸಹೋದರರು ಒಟ್ಟಾಗಿ 35000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ. ಇದರ ಜೊತೆಗೆ 73 ಶತಕಗಳನ್ನು ಬಾರಿಸಿದ್ದು, ಇಬ್ಬರೂ ಬೌಲಿಂಗ್ ಮಾಡುವಾಗ 400ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
2005ರ ಮಾರ್ಚ್’ನಲ್ಲಿ ಆಕ್ಲೆಂಡ್’ನ ಈಡನ್ ಪಾರ್ಕ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ಪಂದ್ಯವಿತ್ತು. ಇದರಲ್ಲಿ ಕೀವೀಸ್ ತಂಡದ ಹ್ಯಾಮಿಶ್ ಮತ್ತು ಜೇಮ್ಸ್ ಮಾರ್ಷಲ್ ಅವರು ಒಂದೇ ಪಂದ್ಯದಲ್ಲಿ ಒಂದೇ ತಂಡಕ್ಕಾಗಿ ಒಟ್ಟಿಗೆ ಕ್ರಿಕೆಟ್ ಆಡಿದ ಮೊದಲ ಪುರುಷ ಅವಳಿಗಳು ಎಂಬ ಖ್ಯಾತಿಗೆ ಪಾತ್ರರಾದರು.
ಮತ್ತೊಂದು ಅವಳಿ ಸಹೋದರರು ಮೈಕ್ ಟೇಲರ್ ಮತ್ತು ಡೆರೆಕ್ ಟೇಲರ್. ಬಕಿಂಗ್ಹ್ಯಾಮ್‌ಶೈರ್’ನಲ್ಲಿ ಜನಿಸಿದ ಈ ಇಬ್ಬರೂ ದೀರ್ಘ ಕೌಂಟಿ ವೃತ್ತಿಜೀವನವನ್ನು ಹೊಂದಿದ್ದರು. ಮೈಕ್ ನಟಿಂಗ್‌ಹ್ಯಾಮ್’ಶೈರ್ ಮತ್ತು ಹ್ಯಾಂಪ್’ಶೈರ್‌ಗೆ ಮಧ್ಯಮ ವೇಗಿ ಆಲ್‌ರೌಂಡರ್ ಆಗಿದ್ದರು. ಡೆರೆಕ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆಗಿದ್ದರು.
ಇಂಗ್ಲೆಂಡ್’ನ ಅವಳಿ ಸಹೋದರರಾದ ಬಿಲ್ಲಿ ಮತ್ತು ಜಾನ್ ಡೆಂಟನ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ನಾರ್ಥಾಂಪ್ಟನ್‌ಶೈರ್‌ನಲ್ಲಿ ಜನಿಸಿದ ಇಬ್ಬರೂ ಸಹೋದರರು ಕೌಂಟಿಯಲ್ಲಿ 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: ತೆಲುಗು ಬಿಗ್ ಬಾಸ್ ವಿನ್ನರ್ ಬಹುಮಾನ ಮೊತ್ತಕ್ಕೆ ಕತ್ತರಿ.. ಪಲ್ಲವಿ ಪ್ರಶಾಂತ್’ಗೆ ಸಿಕ್ಕ ಹಣವೆಷ್ಟು
ಇಂಗ್ಲೆಂಡ್’ನ ಬೆಡ್ಸರ್ಸ್ ಸಹೋದರರನ್ನು ದೇಶದ ಅತ್ಯಂತ ಪ್ರಸಿದ್ಧ ಅವಳಿಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತಿತ್ತು. ಎರಿಕ್ ಮತ್ತು ಅಲೆಕ್ ಬೆಡ್ಸರ್ ಸುಮಾರು 15 ವರ್ಷಗಳ ಕಾಲ ಇಂಗ್ಲಿಷ್ ಕೌಂಟಿ ಕ್ರಿಕೆಟ್’ನಲ್ಲಿ ಸರ್ರೆ ಪರ ಆಡಿದ್ದರು. ಅಲೆಕ್ ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದರೆ, ಎರಿಕ್ ಬಲಗೈ ಆಫ್ ಬ್ರೇಕ್ ಬೌಲ್ ಮಾಡುತ್ತಿದ್ದರು. ಇಬ್ಬರೂ ಒಂದೇ ತಂಡದ ಭಾಗವಾಗಿದ್ದಾಗ ಸತತ ಏಳು ಕೌಂಟಿ ಪ್ರಶಸ್ತಿಗಳನ್ನು ಗೆದ್ದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.