ಬೆರಳು ಗಾಯದಿಂದ ಮೊದಲ ಮೂರು ಪಂದ್ಯಗಳಿಗೆ ಎಬಿ ಡಿವಿಲಿಯರ್ಸ್ ಅಲಭ್ಯ
ನವದೆಹಲಿ: ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಬೆರಳಿನ ಗಾಯದಿಂದಾಗಿ ಭಾರತ ವಿರುದ್ಧದ ಆರು ಪಂದ್ಯಗಳ ಸರಣಿಯಲ್ಲಿ ಮೊದಲ ಮೂರು ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಜೋಹಾನ್ಸ್ ಬರ್ಗ್ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಮೂರನೇ ಮತ್ತು ಅಂತಿಮ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ವಿರುದ್ಧ ದಕ್ಷಿಣ ಆಫ್ರಿಕಾದ 63 ರನ್ಗಳ ಸೋಲಿನ ಸಂದರ್ಭದಲ್ಲಿ 33 ವರ್ಷದ ಈ ಆಟಗಾರನಿಗೆ ಬಲ ಬೆರಳಿಗೆ ಬಲವಾದ ಪೆಟ್ಟು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ (ಸಿಎಸ್ಎ) ವೈದ್ಯಕೀಯ ತಂಡವು ಹೇಳುವಂತೆ ಡಿ ವಿಲಿಯರ್ಸ್ ಗೆ ಸಂಪೂರ್ಣವಾಗಿ ಗುಣಮುಖವಾಗಲು ಕನಿಷ್ಠ ಎರಡು ವಾರಗಳ ಕಾಲಾವಕಾಶ ಬೇಕಾಗುತ್ತದೆ ಎನ್ನಲಾಗಿದೆ.ಆದ್ದರಿಂದ ಅವರು ಮೊದಲ ಮೂರು ಪಂದ್ಯಗಳಿಗೆ ಅವರು ಅಲಭ್ಯವಾಗಲಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಆರು ಪಂದ್ಯಗಳ ಏಕದಿನ ಸರಣಿಯು ಗುರುವಾರದಿಂದ ಕಿಂಗ್ಸ್ ಮೆಡ್ ನ ಸಹರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎರಡು ತಂಡಗಳು ಕೆಳ ಕಂಡಂತಿವೆ:
ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿಸ್, ಹಶಿಮ್ ಅಮ್ಲಾ, ಕ್ವಿಂಟನ್ ಡಿ ಕೊಕ್, ಎಬಿ ಡಿ ವಿಲಿಯರ್ಸ್, ಜೆಪಿ ಡುಮಿನಿ, ಇಮ್ರಾನ್ ತಾಹಿರ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೊರಿಸ್, ಲುಂಗಿಸನಿ ಎಗಿಡಿ, ಆಂಡಿಲೆ ಫೆಹಲ್ಕ್ವೇವೊ, ಕಾಗಿಸೊ ರಾಬಾಡಾ, ತಾಬ್ರಾಜ್ ಷಾಂಸಿ, ಖಯೆಲ್ಲಿಹ್ಲೆ ಜೊಂಡೋ .
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೀಯಾಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ (ವಿಕೆಟ ಕೀಪರ್), ಅಕ್ಸಾರ್ ಪಟೇಲ್, ಯುಜ್ವೆಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬಮುರಾ, ಭುವನೇಶ್ವರ ಕುಮಾರ್, ಹಾರ್ಡಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಶಾರದುಲ್ ಠಾಕೂರ್.