ಐಪಿಎಲ್ 2018: ರಾಜಸ್ತಾನ್ ಮೇಲೆ ಭರ್ಜರಿ ನೈಟ್ ಸವಾರಿ ಮಾಡಿದ ಕೊಲ್ಕತಾ
ಜೈಪುರ್: ಇಲ್ಲಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಕೊಲ್ಕತ್ತಾ ತಂಡವು ರಾಜಸ್ತಾನ ತಂಡದ ಮೇಲೆ ಭರ್ಜರಿ ಸವಾರಿ ಮಾಡಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ತಾನ್ ತಂಡವು ಅಜಿಂಕ್ಯಾ ರಹಾನೆ(36) ಮತ್ತು ಡಿ ಅರ್ಚಿ ಶಾರ್ಟ್(44) ಭರ್ಜರಿ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು160 ರನ್ ಗಳಿಸಿತು.ಕೊಲ್ಕತಾ ಪರ ನಿತೀಶ ರಾಣಾ(2) ಟಾಮ್ ಕುರೆನ್(2)ವಿಕೆಟ್ ಗಳನ್ನೂ ತೆಗೆದು ರಾಜಸ್ತಾನ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ರಾಜಸ್ತಾನ್ ದ 160 ರನ್ ಗಳ ಸವಾಲು ಬೆನ್ನತ್ತಿದ ಕೊಲ್ಕತ್ತಾ ತಂಡವು ರಾಬಿನ್ ಉತ್ತಪ್ಪ(48) ಸುನಿಲ್ ನರೇನ್(35)ನಿತೀಶ್ ರಾಣಾ(35) ದಿನೇಶ್ ಕಾರ್ತಿಕ್(42) ಬ್ಯಾಟಿಂಗ್ ನೆರವಿನಿಂದ ಇನ್ನು ಏಳು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ತಡ ಸೇರಿತು.ಪಂದ್ಯದ ಕೊನೆಯಲ್ಲಿ ಭರ್ಜರಿ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ ಕೇವಲ 23 ಎಸೆತಗಳಲ್ಲಿ 42 ರನ್ ಗಳಿಸಿದರು.