IPL 2020: ವ್ಯರ್ಥವಾದ ಮಾಯಾಂಕ್, ಕೆ.ಎಲ್.ರಾಹುಲ್ ಆಟ; ರಾಜಸ್ಥಾನ ರಾಯಲ್ಸ್ ಗೆ 4 ವಿಕೆಟ್ ಗಳ ಜಯ
ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ರಾಜಸ್ಥಾನ ರಾಯಲ್ಸ್ 4 ವಿಕೆಟ್ ಗಳ ಅಂತರದಿಂದ ಸೋಲಿಸಿದೆ.
ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ರಾಜಸ್ಥಾನ ರಾಯಲ್ಸ್ 4 ವಿಕೆಟ್ ಗಳ ಅಂತರದಿಂದ ಸೋಲಿಸಿದೆ.
ಟಾಸ್ ಗೆದ್ದು ರಾಜಸ್ತಾನ ರಾಯಲ್ಸ್ ತಂಡವು ಕಿಂಗ್ಸ್ ಇಲೆವನ್ ತಂಡಕ್ಕೆ ಬ್ಯಾಟಿಂಗ್ ಅವಕಾಶವನ್ನು ನೀಡಿತು.ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಪಂಜಾಬ್ ತಂಡವು ಉತ್ತಮ ಆರಂಭವನ್ನು ಕಂಡಿತು, ಕೆಎಲ್.ರಾಹುಲ್ 69 ಹಾಗೂ ಮಾಯಾಂಕ್ ಅಗರ್ವಾಲ್ 106 ರನ್ ಗಳಿಸುವ ಮೂಲಕ ತಂಡವು ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ತಂಡದ ಮೊತ್ತ 19-1 ಆಗಿದ್ದಾಗ ಜೋಸ್ ಬಟ್ಲರ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ತದನಂತರ ಸ್ಟೀವನ್ ಸ್ಮಿತ್ 50,ಸಂಜು ಸಾಮ್ಸನ್ 85, ರಾಹುಲ್ ತೆವಾತಿಯಾ ಅವರ 53 ರನ್ ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದವು.ರಾಜಸ್ತಾನ ತಂಡವು 6 ವಿಕೆಟ್ ನಷ್ಟಕ್ಕೆ ಇನ್ನು ಮೂರು ಎಸೆತಗಳು ಬಾಕಿ ಇರುವಂತೆ ತಂಡವು 226 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.