ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕುರಿತು ಇದುವರೆಗಿನ ಅತಿ ದೂದ ಸುತ್ತಿ ಪ್ರಕಟಗೊಂಡಿದೆ. ಐಪಿಎಲ್ ನ 13ನೇ ಆವೃತ್ತಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಪಂದ್ಯಾವಳಿ ಫೈನಲ್ ಪಂದ್ಯಗಳು ನವೆಂಬರ್ 8 ರಂದು ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಬ್ರಜೇಶ್ ಪಟೇಲ್ ಈ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವರ್ಷ ಯುಎಇಯಲ್ಲಿ ಐಪಿಎಲ್ ನಡೆಸಲಾಗುವದು ಎಂದು ಈ ಹಿಂದೆ ಬ್ರಜೇಶ್ ಪಟೇಲ್ ಘೋಷಿಸಿದ್ದರು. ಕರೋನಾ ವೈರಸ್‌ನಿಂದಾಗಿ, ಐಪಿಎಲ್ ಅನ್ನು ಸಮಯಕ್ಕೆ ಸರಿಯಾಗಿ ಆಯೋಜಿಸಲಾಗಿರಲ್ಲಿಲ್ಲ. ಆದರೆ ವಿಶ್ವಕಪ್ ರದ್ದುಗೊಂಡ ಕಾರಣ BCCIಗೆ IPLನ ಆಯೋಜನೆಯ ದಾರಿ ಸುಗಮವಾದಂತಾಗಿದೆ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 19 ರಿಂದ IPL ಟೂರ್ನಿ ಆರಂಭವಾಗುವುದರ ಕುರಿತು ಗುರುವಾರವೇ ಊಹಾಪೋಹಗಳು ಕೇಳಿಬಂದಿದ್ದವು. ಬಿಸಿಸಿಐ ಒಂದು ದಿನದಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಯೋಜಿಸಲು ಬಯಸಿದೆ ಎಂದು ಹೇಳಲಾಗಿದೆ, ಆದ್ದರಿಂದ ಪಂದ್ಯಾವಳಿಯನ್ನು ಮೊದಲೇ ಪ್ರಾರಂಭಿಸಲಾಗುತ್ತಿದೆ. ಐಪಿಎಲ್‌ನ 13 ನೇ ಸೀಸನ್ 51 ದಿನಗಳವರೆಗೆ ನಡೆಯಲಿದೆ ಎಂದು ಬ್ರಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.


ಶೀಘ್ರವೇ ಜಾರಿಯಾಗಲಿದೆ ಶೆಡ್ಯೂಲ್
ಆದರೆ ಇದುವರೆಗೆ ಮಂಡಳಿ IPL 2020ರ ವೇಳಾಪಟ್ಟಿ ಹಾಗೂ ಎಷ್ಟು ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂಬುದರ ಮಾಹಿತಿ ನೀಡಿಲ್ಲ. ಮುಂದಿನ ಒಂದು ವಾರದ ಒಳಗೆ BCCI,  IPL 13ನೇ ಆವೃತ್ತಿಯ ವೆಳಾಪಟ್ಟಿ ಬಿಡುಗಡೆಗೊಳಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. IPLನ ಗವರ್ನಿಂಗ್ ಕೌನ್ಸಿಲ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಜೊತೆಗೆ IPLನ ಎಲ್ಲ ಫ್ರೇಂಚೈಸಿ ತಂಡಗಳು ಒಂದು ತಿಂಗಳು ಮುಂಚಿತವಾಗಿಯೇ ಯುಎಇ ತಲುಪಲಿವೆ ಎಂಬ ವರದಿಗಳೂ ಕೂಡ ಕೇಳಿಬಂದಿವೆ. IPL ಟೂರ್ನಿಯಲ್ಲಿ ಭಾಗವಹಿಸಬೇಕಿರುವ ಆಟಗಾರರು ಕೊವಿಡ್ ಮಹಾಮಾರಿಯ ಹಿನ್ನೆಲೆ ಕಳೆದ ನಾಲ್ಕು ತಿಂಗಳುಗಳಿಂದ ಮೈದಾನದಿಂದ ಹಾಗೂ ಪ್ರ್ಯಾಕ್ಟಿಸ್ ನಿಂದ ದೂರ ಉಳಿದಿದ್ದಾರೆ. ಆಟಗಾರರಿಗೆ ತಮ್ಮ ಹಳೆ ಆಟಕ್ಕೆ ಮರಳಲು ಮೂರರಿಂದ ನಾಲ್ಕು ವಾರಗಳ ಕಾಲಾವಕಾಶ ಬೇಕಾಗಲಿದೆ ಎನ್ನಲಾಗಿದೆ. ಇದಲ್ಲದೆ ಫ್ರ್ಯಾಂಚೈಸಿಗಳೂ ಕೂಡ ತಮ್ಮ ತಮ್ಮ ಆಟಗಾರರ ನಡುವೆ ಪ್ರ್ಯಾಕ್ಟಿಸ್ ಮ್ಯಾಚ್ ಕೂಡ ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 


ಇದಕ್ಕೂ ಮೊದಲು ಇಂಡಿಯನ್ ಪ್ರಿಮಿಯರ್ 13ನೇ ಆವೃತ್ತಿಯಯನ್ನು ಮಾರ್ಚ್ 28ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಹಿನ್ನೆಲೆ ಮೊದಲು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದ್ದ ಟೂರ್ನಿ, ನಂತರ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಿದ ಕಾರಣ ಅನಿಶ್ಚಿತ ಕಾಲದವರೆಗೆ ಮುಂದೂಡಲಾಗಿತ್ತು. ಭಾರತದಲ್ಲಿ ಕೊರೊನಾ ಪ್ರಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕ್ರಿಕೆಟ್ ನಿಯಂತ್ರಣ ಮಂಡಳಿ UAE ನಲ್ಲಿ ಈ ಟೂರ್ನಿಯನ್ನು ನಡೆಸುವ ನಿರ್ಣಯ ಕೈಗೊಂಡಿದೆ. ಆದರೆ, ಯುಎಇ ನಲ್ಲಿ ಪ್ರೇಕ್ಷಕರು ಇರಲಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಇದುವರೆಗೆ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ.