ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಂದು ಅಗ್ರಸ್ಥಾನಕ್ಕಾಗಿ ಮದಗಜಗಳ ನಡುವೆ ಕಾದಾಟ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್(Delhi Capitals) ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ. ಪ್ರಸಕ್ತ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲೆರಡು ತಂಡಗಳೆನಿಸಿಕೊಂಡಿರುವ ಚೆನ್ನೈ ಮತ್ತು ದೆಹಲಿ ತಂಡಗಳು ಈಗ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಹೋರಾಟ ನಡೆಸಲಿವೆ.


COMMERCIAL BREAK
SCROLL TO CONTINUE READING

ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಸೋಮವಾರದ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ ಗಳ ಸುರಿಮಳೆಯಾಗಲಿದೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ(MS Dhoni) ನೇತೃತ್ವದ ಚೆನ್ನೈ ತಂಡವು ರಿಷಭ್ ಪಂತ್(Rishabh Pant) ನಾಯಕತ್ವದ ದೆಹಲಿ ಮೇಲೆ ಸವಾರಿ ಮಾಡಲು ಸಜ್ಜಾಗಿದೆ. ಉಭಯ ತಂಡಗಳು ತಲಾ 12 ಪಂದ್ಯಗಳನ್ನು ಆಡಿದ್ದು, ತಲಾ 9 ರಲ್ಲಿ ಗೆಲುವು ಮತ್ತು ತಲಾ 3 ಸೋಲು ಕಂಡಿವೆ. ಕಳೆದ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದರೂ ಕೂಡ ಚೆನ್ನೈ ತಂಡ ರಾಜಸ್ಥಾನ್ ರಾಯಲ್ಸ್ ಆರ್ಭಟದ ಎದುರು ಸೋಲು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ದೆಹಲಿ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ.


ಇದನ್ನೂ ಓದಿ: India vs England: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದೇನು ಗೊತ್ತಾ..?


ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿರುವ ಚೆನ್ನೈ(Chennai Super Kings) ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಫೆವರಿಟ್ ತಂಡವಾಗಿ ಗಮನ ಸೆಳೆಯುತ್ತಿದೆ. ನಾಯಕ ಧೋನಿ ತಂತ್ರಗಾರಿಕೆ, ಸಹ ಆಟಗಾರರ ಅತ್ಯುತ್ತಮ ಪ್ರದರ್ಶನ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಹೀಗಾಗಿ ಎಂತಹ ಬಲಿಷ್ಠ ತಂಡವಾಗಿದ್ದರೂ ಅದನ್ನು ಮಣಿಸುವ ತಾಕತ್ತು ಧೋನಿ ಪಡೆಗೆ ಇದೆ. ಇನ್ನು ದೆಹಲಿ ಕೂಡ ಪ್ರಸಕ್ತ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ರಿಷಭ್ ಪಂತ್ ನಾಯಕತ್ವ ತಂಡಕ್ಕೆ ಆನೆಬಲ ನೀಡಿದಂತಾಗುತ್ತಿದೆ. ಹೀಗಾಗಿ ದೆಹಲಿ ಕೂಡ ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.


ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಗಳ ಗೆಲುವು ಸಾಧಿಸಿರುವ ದೆಹಲಿ ತಂಡ ಚೆನ್ನೈ ವಿರುದ್ಧವೂ ಗೆಲುವು ಸಾಧಿಸುವ ವಿಶ್ವಾದಲ್ಲಿದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗವನ್ನು ಹೊಂದಿರುವ ದೆಹಲಿ ಚೆನ್ನೈಗೆ ಸವಾಲು ಒಡ್ಡುವ ನಿರೀಕ್ಷೆ ಇದೆ. ಮದಗಜಗಳ ಕಾಳಗದಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆಂಬುದು ಕುತೂಹಲ ಮೂಡಿಸಿದೆ.


ಇದನ್ನೂ ಓದಿ: IPL 2021: ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ಬೆಂಗಳೂರಿನ ವಿರಾಟ್ ಬಳಗ


ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:


ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹಾರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್.ಜಗದೀಶನ್, ಕರಣ್ ಶರ್ಮಾ, ಲುಂಗಿ ಎನ್ ಜಿಡಿ, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ರುತುರಾಜ್ ಗಾಯಕವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕುರ್ರನ್, ಆರ್.ಸಾಯಿ ಕಿಶೋರ್, ಮೊಯೀನ್ ಅಲಿ, ಕೆ.ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ, ಸಿ.ಹರಿ ನಿಶಾಂತ್.


ದೆಹಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಅಜಿಂಕ್ಯ ರಹಾನೆ, ಪೃಥ್ವಿ ಶಾ, ರಿಪಾಲ್ ಪಟೇಲ್, ಶಿಖರ್ ಧವನ್, ಶಿಮ್ರಾನ್ ಹೆಟ್ಮ್ಯಾರ್, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್, ಅಮಿತ್ ಮಿಶ್ರಾ, ಅನ್ರಿಚ್ ನಾರ್ಟ್ಜೆ, ಅವೇಶ್ ಖಾನ್, ಬೆನ್ ದ್ವಾರಶುಯಿಸ್, ಇಶಾಂತ್ ಶರ್ಮಾ, ಕಾಗಿಸೊ ರಬಾಡ, ಕುಲ್ವಂತ್ ಖೆಜ್ರೋಲಿಯಾ, ಲುಕ್ಮಾನ್ ಮೇರಿವಾಲಾ, ಪ್ರವಿನ್ ದುಬೆ, ಟಾಮ್ ಕುರ್ರಾನ್, ಉಮೇಶ್ ಯಾದವ್, ಅಕ್ಸರ್ ಪಟೇಲ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ರವಿಚಂದ್ರನ್ ಅಶ್ವಿನ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ವಿಷ್ಣು ವಿನೋದ್.


ಐಪಿಎಲ್‌ ಪಂದ್ಯ: 50


ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್


ದಿನಾಂಕ: ಅಕ್ಟೋಬರ್ 04, ಸೋಮವಾರ


ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ


ಸಮಯ: ಸಂಜೆ 7.30ಕ್ಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.