IPL 2021 Auction: ಚೆನ್ನೈನಲ್ಲಿ ನಡೆಯಲಿದೆ IPL ಆಟಗಾರರ ಹರಾಜು ಪ್ರಕ್ರಿಯೆ, ಇಲ್ಲಿದೇ ದಿನಾಂಕಗಳ ಮಾಹಿತಿ
IPL 2021 Auction:ಇಂಡಿಯನ್ ಪ್ರಿಮಿಯರ್ ಲೀಗ್ ಆಟಗಾರರ ಮುಂದಿನ ಹರಾಜು ಪ್ರಕ್ರಿಯೆ ಫೆಬ್ರವರಿ 18 ಕ್ಕೆ ನಡೆಯಲಿದೆ. ಈ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ IPL, ಚೆನ್ನೈನಲ್ಲಿ 14 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದಿದೆ.
IPL 2021 Auction:ಇಂಡಿಯನ್ ಪ್ರಿಮಿಯರ್ ಲೀಗ್ ಆಟಗಾರರ ಮುಂದಿನ ಹರಾಜು ಪ್ರಕ್ರಿಯೆ ಫೆಬ್ರವರಿ 18 ಕ್ಕೆ ನಡೆಯಲಿದೆ. ಈ ಹರಾಜು (IPL Auction) ಪಕ್ರಿಯೇ ಚೆನ್ನೈನಲ್ಲಿ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ IPL, 14 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದಿದೆ. ಇದಕ್ಕೆ ಸಂಬಂಧಿಸಿದಂತೆ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ IPL, "IPL ಆಟಗಾರರ ಹರಾಜು ಪ್ರಕ್ರಿಯೆ ಚೆನ್ನೈ ನಲ್ಲಿ ಫೆ.18ಕ್ಕೆ ನಡೆಯಲಿದೆ ಮತ್ತು ಈ ಬಾರಿಯ ಹರಾಜು ಪ್ರಕ್ರಿಯೆಗಾಗಿ ನೀವೆಷ್ಟು ಉತ್ಸುಕರಾಗಿರುವಿರಿ" ಎಂದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೆ ಪಂದ್ಯ ಚೆನ್ನೈನಲ್ಲಿ ಫೆ.17ರಂದು ನಡೆಯಲಿರುವ ಕಾರಣ ಫೆ.18ಕ್ಕೆ ಈ ಪ್ರಕ್ರಿಯೆಯನ್ನು ಚೆನ್ನೈನಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ. ಚೆನ್ನೈನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಒಟ್ಟು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಆಡಲಿದೆ. ಎರಡನೇ ಟೆಸ್ಟ್ ಪಂದ್ಯ ಫೆ.13-17ರವರೆಗೆ ನಡೆಯಲಿದೆ ಹಾಗೂ ಮಾರನೆಯ ದಿನ ಅಂದರೆ ಫೆ. 18ಕ್ಕೆ IPL ಹರಾಜು (IPL 2021 Latest News) ಪ್ರಕ್ರಿಯೆ ನಡೆಯಲಿದೆ.
IPL ಪಂದ್ಯಗಳ ದಿನಾಂಕಗಳ ಕುರಿತು ಹಾಗೂ ಜಾಗಗಳ ಕುರಿತು ಯಾವುದೇ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಏಪ್ರಿಲ್ ತಿಂಗಳ ಮಧ್ಯಭಾಗದಿಂದ ಈ ಟೂರ್ನಿ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. IPL 2021ರ ಆಯೋಜನಾ ಸ್ಥಳದ ಬಗ್ಗೆಯೂ ಕೂಡ ಸಭೆಯ ಅಂತಿಮ ಘಟ್ಟದಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಇದನ್ನು ಓದಿ- IPL 2021: ಈ ಬಾರಿ ಯಾವ್ಯಾವ ಆಟಗಾರರು ಇದ್ದಾರೆ ಗೊತ್ತೇ? ಇಲ್ಲಿದೆ ಪೂರ್ಣ ಪಟ್ಟಿ
ಹಿರಿಯ ಆಟಗಾರರನ್ನು ರಿಲೀಸ್ ಮಾಡಲಾಗಿದೆ
ಆಟಗಾರರನ್ನು ಹಿಡಿದಿಟ್ಟುಕೊಳ್ಳಲು ಜನವರಿ 20 ಕೊನೆಯ ದಿನಾಂಕವಾಗಿತ್ತು. ಟ್ರೇಡಿಂಗ್ ವಿಂಡೋ ಫೆಬ್ರುವರಿ 4ರವರೆಗೆ ಮಾರಿಯಲ್ಲಿರಲಿದೆ. ವಿವಿಧ ತಂಡಗಳಿಂದ ಬಿಡುಗಡೆ ಹೊಂದಿರುವ ಆಟಗಾರರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (ರಾಜಸ್ಥಾನ್ ರಾಯಲ್ಸ್ ) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ (ಕಿಂಗ್ಸ್ ಇಲೆವೆನ್ ಪಂಜಾಬ್) ಗಳಂತಹ ದಿಗ್ಗಜ ಆಟಗಾರರು ಶಾಮೀಲಾಗಿದ್ದಾರೆ.
ಇದನ್ನು ಓದಿ-ಐಪಿಎಲ್ 2021ರ ಆವೃತ್ತಿಯಿಂದ ಡೇಲ್ ಸ್ಟೇನ್ ಹೊರಕ್ಕೆ
ಈ ಬಾರಿಯ IPL 2021 ಪ್ರಕ್ರಿಯೆ ಭಾರಿ ಕುತೂಹಲ ಮೂಡಿಸಿದೆ. ಏಕೆಂದರೆ, ಹರಾಜು (IPL Auction 2021) ಪ್ರಕ್ರಿಯೆಗೆ ಮುನ್ನವೇ ಬಹುತೇಕ ತಂಡಗಳು ತಮ್ಮ ತಂಡದ ಹಿರಿಯ ಆಟಗಾರರನ್ನು ರಿಲೀಸ್ ಮಾಡಿವೆ. ಹೀಗಾಗಿ ಯಾವ ತಂಡ ಯಾವ ಆಟಗಾರನಿಗೆ ಮಣೆಹಾಕಲಿದೆ ಎಂಬ ಸಂಗತಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನು ಓದಿ-IPL 2022: ಎರಡು ಹೊಸ ತಂಡಗಳಿಗೆ ಬಿಸಿಸಿಐ ಅನುಮೋದನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.