ನವದೆಹಲಿ: IPL 2021 TIME TABLE - ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಆರಂಭವಾಗುವ ದಿನಾಂಕದ ಅಧಿಕೃತ ಘೋಷಣೆ ಮಾಡಲಾಗಿದೆ. ಸುದ್ದಿಸಂಸ್ಥೆ ANIನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, IPL-2021ರ ಆಯೋಜನೆ ಏಪ್ರಿಲ್ 9 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಚೆನ್ನೈ ನಲ್ಲಿ ನಡೆಯಲಿದ್ದಾರೆ, ಪಂದ್ಯಾವಳಿಯ ಫೈನಲ್ ಪಂದ್ಯ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇತ್ತೀಚೆಗಷ್ಟೇ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸೀರಿಸ್ ನ ಕೊನೆಯ ಎರಡು ಪಂದ್ಯಗಳನ್ನು ಇದೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಇದಲ್ಲದೆ ಉಭಯ ದೇಶಗಳ ನಡುವೆ ನಡೆದ ಐದು ಪಂದ್ಯಗಳ T20 ಸೀರೀಸ್ ಅನ್ನು ಕೂಡ ಇದೆ ಗ್ರೌಂಡ್ ನಲ್ಲಿ ಆಯೋಜಿಸಲಾಗಿತ್ತು.


CLICK HERE


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಏಪ್ರಿಲ್ 9ರಿಂದ IPL 2021 ಆರಂಭ..!


ಆದರೆ, ಈ ಬಾರಿಯೂ ಕೂಡ ಪ್ರೇಕ್ಷಕರಿಲ್ಲದೆ IPL ಪಂದ್ಯಗಳನ್ನು ಆಯೋಜಿಸಲಾಗುವುದು ಎಂಬುದರ ಮೇಲೆ ಇದುವರೆಗೆ BCCI ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಕಳೆದ ಬಾರಿ UAE ನಲ್ಲಿ ಆಯೋಜಿಸಲಾಗಿದ್ದ IPL ಪಂದ್ಯಾವಳಿಯ ವೇಳೆ ಪ್ರೇಕ್ಷಕರಿಗೆ ಲೈವ್ ಪಂದ್ಯ ನೋಡುವ ಅವಕಾಶ ನೀಡಲಾಗಿರಲಿಲ್ಲ. ಆದರೆ, ಈ ಬಾರಿ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕುಳಿತು ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲಿದ್ದಾರೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ. 


ಇದನ್ನೂ ಓದಿ-  IPL 2021: ಈ ಮೂರು ಕಾರಣಗಳಿಂದಾಗಿ RCB ಈ ಬಾರಿ ಐಪಿಎಲ್ ಟ್ರೋಪಿ ಗೆಲ್ಲಲಿದೆ


ಕಳೆದ ವಾರದಿಂದ IPL ಆಯೋಜನೆಯ ವೆನ್ಯೂ ಕುರಿತು ಸಾಕಷ್ಟು ಗೊಂದಲಗಳು ಕೇಳಿಬಂದಿವೆ. ಈ ಪಂದ್ಯಗಳ ಆಯೋಜನೆಗಾಗಿ BCCI ಅಹ್ಮದಾಬಾದ್, ಕೊಲ್ಕತಾ, ದೆಹಲಿ, ಬೆಂಗಳೂರು, ಚೆನ್ನೈ ಹಾಗೂ ಮುಂಬೈ ನಗರಗಳನ್ನು ಪರಿಗಣಿಸುತ್ತಿದೆ ಎಂಬ ಸುದ್ದಿ ಬಿತ್ತರಗೊಳ್ಳುತ್ತಲೇ ಈ ವಿವಾದ ಮತ್ತಷ್ಟು ತೀವ್ರವಾಗಿದೆ. ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕೂಡ ಇದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿವೆ. ವೆನ್ಯೂ ಕುರಿತು ಹೆಚ್ಚಾಗುತ್ತಿರುವ ವಿವಾದದ ಕುರಿತು BCCI ಇದುವರೆಗೆ ಮೌನ ಧೋರಣೆ ತಳೆದಿದೆ.


ಇದನ್ನೂ ಓದಿ -'ನನ್ನದೇ ಆದ ಪರಂಪರೆಯನ್ನು ಹೊಂದುವ ಗುರಿ ಇದೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.