ನವದೆಹಲಿ : ಐಪಿಎಲ್ 2021 (IPL 2021) ರ ಉಳಿದ ಪಂದ್ಯಗಳನ್ನು ಸೆಪ್ಟೆಂಬರ್‌ನಿಂದ ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿಯ (BCCI) ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಕರೋನಾ (Coronavirus) ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸೀಸನ್ ನ ಪಂದ್ಯಗಳನ್ನು ಮಧ್ಯದಲ್ಲಿಯೇ ಸ್ಥಗಿತಗೊಳಿಸಲಾಗಿತ್ತು.  ಕೇವಲ 29 ಪಂದ್ಯಗಳನ್ನು ಮಾತ್ರ ಆಡಲಾಗಿತ್ತು. ಇನ್ಜುಳಿದ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. 


COMMERCIAL BREAK
SCROLL TO CONTINUE READING

 ಸೆಪ್ಟೆಂಬರ್ 17 ರಿಂದ ಐಪಿಎಲ್‌ನ ಉಳಿದ ಪಂದ್ಯಗಳು :
ಕ್ರಿಕೆಟ್ ಪ್ರಿಯರಿಗೆ ಇದೊಂದು ಅತ್ಯಂತ ಸಂತೋಷದ ವಿಷಯ. ಕರೋನಾ (Coronavirus) ಕಾರಣದಿಂದ ಸ್ಥಗಿತಗೊಂಡಿದ್ದ ಐಪಿಎಲ್ 2021ರ (IPL 2021) ಉಳಿದ ಪಂದ್ಯಗಳು ಸೆ. 17 ರಿಂದ ಪುನರಾರಂಭಗೊಳ್ಳಲಿದೆ.  ಇನ್ನು  ಐಪಿಎಲ್ 2021ರ ಫೈನಲ್ ಪಂದ್ಯ ಅಕ್ಟೋಬರ್ 10 ರಂದು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2021) ಕಾರಣದಿಂದಾಗಿ ಬಿಸಿಸಿಐ ವೇಳಾಪಟ್ಟಿಯನ್ನು ಪ್ರಕಟಸಿಲ್ಲ ಎನ್ನಲಾಗಿದೆ.


ಇದನ್ನೂ ಓದಿ : Asian Boxing Championship: ಭಾರತೀಯ ಬಾಕ್ಸರ್ ಮೇರಿ ಕೋಮ್ ಗೆ ಬೆಳ್ಳಿ ಪದಕ


ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಿರುವ ಬಿಸಿಸಿಐ : 
ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2021) ಆಗಸ್ಟ್ 28 ರಿಂದ ಸೆಪ್ಟೆಂಬರ್ 19 ರವರೆಗೆ ನಡೆಯಲಿದೆ.  ಈ ಲೀಗ್ ಅನ್ನು 7 ರಿಂದ 10 ದಿನಗಳ ಮುಂಚಿತವಾಗಿ ಆಯೋಜಿಸಲು ವೆಸ್ಟ್ ಇಂಡೀಸ್ ಮಂಡಳಿಯೊಂದಿಗೆ ಚರ್ಚೆಗಳು ನಡೆಯುತ್ತಿವೆ. ಹೀಗಾದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವ ಆಟಗಾರರು  ಐಪಿಎಲ್ (IPL) ಪಂದ್ಯಕ್ಕಾಗಿ ಯುಎಇ ತಲುಪುವುದಕ್ಕೆ ಸಹಕಾರಿಯಾಗಲಿದೆ. ಮುಂದಿನ 10 ದಿನಗಳಲ್ಲಿ ಬಿಸಿಸಿಐ (BCCI) ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ. 


ಟಿ 20 ವಿಶ್ವಕಪ್ ಬಗ್ಗೆಯೂ ನಿರ್ಧಾರ : 
ಇದಲ್ಲದೆ, ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ (T 20 world cup) ಬಗ್ಗೆಯೂ ಚರ್ಚೆಗಳು ನಡೆದಿವೆ. ಅಕ್ಟೋಬರ್-ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಬಗ್ಗೆ ಬಿಸಿಸಿಐ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜೊತೆ ಮಾತುಕತೆ ನಡೆಸಲಿದೆ. 'ಐಸಿಸಿ ಟಿ 20 ವಿಶ್ವಕಪ್ 2021 ರ ಆತಿಥ್ಯದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಗಡುವನ್ನು ವಿಸ್ತರಿಸುವಂತೆ ಬಿಸಿಸಿಐನ ಎಸ್‌ಜಿಎಂ ಮನವಿ ಮಾಡಿದೆ . ಟಿ 20 ವಿಶ್ವಕಪ್ ಅಕ್ಟೋಬರ್ 18 ಮತ್ತು ನವೆಂಬರ್ 15 ರ ನಡುವೆ ನಡೆಯಲಿದೆ 


ಇದನ್ನೂ ಓದಿ : MS Dhoni : ದೇಶದ ಪ್ರತಿಷ್ಠಿತ ನಗರದಲ್ಲಿ ಮನೆ ಖರೀದಿಸಿದ್ದಾರೆ MS ಧೋನಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ