ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ 2021 ಪಂದ್ಯಾವಳಿಯಲ್ಲಿ ಕೇವಲ ಒಂದು ಪಂದ್ಯ ಮಾತ್ರ ಆಡಲಾಗಿದೆ. ಪಂಜಾಬ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 34 ರನ್‌ಗಳಿಂದ ಸೋಲಿಸಿ ಪಾಯಿಂಟ್ ಟೇಬಲ್‌ನಲ್ಲಿ ಸ್ಥಾನ ಗಳಿಸಿತು.


COMMERCIAL BREAK
SCROLL TO CONTINUE READING

ಪಾಯಿಂಟ್ ಟೇಬಲ್‌ನಲ್ಲಿ ಯಾವ ತಂಡಕ್ಕೆ ಅನುಕೂಲವಾಯಿತು?
ಐಪಿಎಲ್ 2021 (IPL 2021) ಪಾಯಿಂಟ್ ಟೇಬಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ದೆಹಲಿ ಕ್ಯಾಪಿಟಲ್ಸ್ ಕೊಡಾ 10 ಅಂಕಗಳನ್ನು ಗಳಿಸಿದ್ದು ನಿವ್ವಳ ರನ್ ದರದಿಂದಾಗಿ ಎರಡನೆಯ ಸ್ಥಾನದಲ್ಲಿದೆ. ಆರ್‌ಸಿಬಿ ಮೂರನೇ ಸ್ಥಾನದಲ್ಲಿದ್ದರೆ, ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್, ಐದನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್, ಆರನೇ ಸ್ಥಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್, ಏಳನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ.


Punjab vs Bangalore: ಕೆ.ಎಲ್.ರಾಹುಲ್ ಅಬ್ಬರ, ಹರ್ಪ್ರೀತ್ ಕೈಚಳಕಕ್ಕೆ ಮಣಿದ RCB


ಆರೆಂಜ್ ಕ್ಯಾಪ್ ರೇಸ್
ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ (KL Rahul) ನಿನ್ನೆ ನಡೆದ ಪಂದ್ಯದಲ್ಲಿ 57 ಎಸೆತಗಳಲ್ಲಿ ಔಟಾಗದೆ 91 ರನ್ ಗಳಿಸಿದರು. ಇದಲ್ಲದೆ ಅವರು  7 ಪಂದ್ಯಗಳಲ್ಲಿ 331 ರನ್ ಗಳಿಸುವ ಮೂಲಕ ಶಿಖರ್ ಧವನ್ ಅವರಿಂದ ಆರೆಂಜ್ ಕ್ಯಾಪ್ ತೆಗೆದುಕೊಂಡರು. ಈ ಋತುವಿನಲ್ಲಿ ರಾಹುಲ್ ಈಗ 331 ರನ್ ಗಳಿಸಿದ್ದರೆ ಶಿಖರ್ ಧವನ್ 311 ರನ್ ಗಳಿಸಿದ್ದಾರೆ.


ಇದನ್ನೂ ಓದಿ - IPL ಮುಗಿದ ಬಳಿಕ ತಮ್ಮ ದೇಶಕ್ಕೆ ತೆರಳುವುದಿಲ್ಲ ಆಸ್ಟ್ರೇಲಿಯಾದ ಆಟಗಾರರು..!


ಪರ್ಪಲ್ ಕ್ಯಾಪ್ ರೇಸ್ :
ಆರ್‌ಸಿಬಿಯ ಯುವ ಬೌಲರ್ ಹರ್ಷಲ್ ಪಟೇಲ್ 7 ಪಂದ್ಯಗಳಲ್ಲಿ 15.11 ರ ಸರಾಸರಿಯಲ್ಲಿ ಒಟ್ಟು 17 ವಿಕೆಟ್‌ಗಳನ್ನು ಪಡೆದಿದ್ದು ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.