ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಆವೃತ್ತಿಯು ಏಪ್ರಿಲ್ 9ರಂದು ಆರಂಭವಾಗಲಿದೆ ಎಂದು ಬಿಸಿಸಿಐ ಮೂಲಗಳು ಶನಿವಾರ ಬಹಿರಂಗಪಡಿಸಿವೆ. ಇಂಗ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡ ವು ತನ್ನ ಸರಣಿಯನ್ನು ಅನ್ನು ಪೂರೈಸಿದ 12 ದಿನಗಳ ನಂತರ ಶುರುವಾಗಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ICC World Test ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾ


ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಮಾರ್ಚ್ 28ರಂದು ಪುಣೆಯಲ್ಲಿ ನಡೆಯಲಿದೆ. ಭಾರತದ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಟಿ20 ಲೀಗ್ ನ ಅವಧಿಯನ್ನು ನಿಗದಿಗೊಳಿಸಲಾಗಿದೆ ಎನ್ನಲಾಗಿದೆ. 'ಐಪಿಎಲ್ ಏಪ್ರಿಲ್ 9 ರಿಂದ ಐಪಿಎಲ್(IPL)‌ ಟೂರ್ನಿ ಪ್ರಾರಂಭವಾಗುತ್ತದೆ ಮತ್ತು ಮೇ 30 ಕ್ಕೆ ಕೊನೆಗೊಳ್ಳುತ್ತದೆ ಎಂದು ಇದನ್ನು ನಾವು ತಾತ್ಕಾಲಿಕವಾಗಿ ನಿರ್ಧರಿಸಿದ್ದೇವೆ' ಎಂದು ಬಿಸಿಸಿಐ(BCCI) ತಿಳಿಸಿದೆ ಅಂತ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಈ ವೇಳೆ ಐಪಿಎಲ್‌ ಟೂರ್ನಿ ಶುರುವಾಗುವ ದಿನಾಂಕಗಳು ಮತ್ತು ಸ್ಥಳಗಳಿಗೆ ಸಂಬಂಧಪಟ್ಟಂತೆ ಔಪಚಾರಿಕ ಅನುಮೋದನೆ ನೀಡಲಾಗುವುದು ಎನ್ನಲಾಗಿದೆ.


Road Safety World Series 2021: ಸಚಿನ್, ಸೆಹ್ವಾಗ್ ಅಬ್ಬರ, ಇಂಡಿಯಾ ಲೆಜೆಂಡ್ಸ್ ಗೆ ಗೆಲುವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.