ನವದೆಹಲಿ: ದೆಹಲಿ ಕ್ಯಾಪಿಟಲ್ಸ್ ವೇಗದ ಬೌಲರ್ ದಕ್ಷಿಣ ಆಫ್ರಿಕಾದ ಅನ್ರಿಕ್ ನಾರ್ಟ್ಜೆ ಗೆ COVID-19 ಸೋಂಕು ಇರುವುದು ಧೃಢಪಟ್ಟಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯಂಗ್ ಟರ್ಕ್ಸ್ ದೆಹಲಿ ಕ್ಯಾಪಿಟಲ್ಸ್ ಆರ್ಭಟಕ್ಕೆ ಮಂಕಾದ ಚೆನ್ನೈ ಸೂಪರ್ ಕಿಂಗ್ಸ್


ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ತೊರೆದ ನಂತರ ನಾರ್ಟ್ಜೆ, ಕಗಿಸೊ ರಬಾಡಾ ಅವರೊಂದಿಗೆ ಏಪ್ರಿಲ್ 6 ರಂದು ಮುಂಬೈಗೆ ಆಗಮಿಸಿದ್ದರು.ಆದರೆ ಏಪ್ರಿಲ್ 10 ರಂದು ಸಿಎಸ್ಕೆ ವಿರುದ್ಧದ ದೆಹಲಿ ಕ್ಯಾಪಿಟಲ್ಸ್ ( Delhi Capitals) ಆರಂಭಿಕ ಪಂದ್ಯವನ್ನು ಇಬ್ಬರೂ ತಪ್ಪಿಸಿಕೊಂಡರು, ಏಕೆಂದರೆ ಅವರು ಇನ್ನೂ ಏಳು ದಿನಗಳ ಕಡ್ಡಾಯ ನಿರ್ಬಂಧದಲ್ಲಿದ್ದಾರೆ.


ಐಪಿಎಲ್‌ಗೆ ಭಾರತಕ್ಕೆ ತೆರಳುವ ಮೊದಲು, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ನಾರ್ಟ್‌ಜೆ ಭರ್ಜರಿ ಪ್ರದರ್ಷನ ನೀಡಿದ್ದರು. ಅವರು ಆಡಿದ ಎರಡು ಪಂದ್ಯಗಳಲ್ಲಿ ಅವರು ಒಟ್ಟು ಏಳು ವಿಕೆಟ್ ಪಡೆದರು. ಸೆಂಚುರಿಯನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ನಾರ್ಟ್‌ಜೆ 4/51 ವಿಕೆಟ್ ಕಬಳಿಸಿದ್ದರೆ, ಮುಂದಿನ ಪಂದ್ಯದಲ್ಲಿ ಇನ್ನೂ ಮೂರು ವಿಕೆಟ್‌ಗಳನ್ನು ಪಡೆದಿದ್ದರು.


ಇದನ್ನೂ ಓದಿ: IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ


ಅಂತರರಾಷ್ಟ್ರೀಯ ಬೇಸಿಗೆಯಲ್ಲಿ ತನ್ನನ್ನು ತಾನು ಸದೃಢವಾಗಿರಿಸಿಕೊಳ್ಳಲು ಪಂದ್ಯಾವಳಿಯಿಂದ ಹೊರಗುಳಿದಿದ್ದ ಕ್ರಿಸ್ ವೋಕ್ಸ್‌ಗೆ ಬದಲಿಯಾಗಿ ಬಂದರು. ಕಳೆದ ವರ್ಷ ದೆಹಲಿ ಮೂಲದ ಫ್ರ್ಯಾಂಚೈಸ್‌ಗಾಗಿ ನಾರ್ಟ್‌ಜೆ ಒಬ್ಬರಾಗಿದ್ದರು, 16 ಪಂದ್ಯಗಳಿಂದ 22 ವಿಕೆಟ್‌ಗಳನ್ನು ಪಡೆದರು. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಲೀಗ್ ಪಂದ್ಯವೊಂದರಲ್ಲಿ ಐಪಿಎಲ್ ಇತಿಹಾಸದಲ್ಲಿ ಗಂಟೆಗೆ 156.22 ಕಿಮೀ ವೇಗದ ಎಸೆತವನ್ನು ಹಾಕಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.