ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಪಂದ್ಯಗಳಿಗೆ ಆಟಗಾರರನ್ನು ಕರೆದೊಯ್ಯಲು ಪಂಚತಾರಾ ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ಕನಿಷ್ಠ ಒಂದು ಐಷಾರಾಮಿ ಬಸ್‌ಗಳ ಗಾಜುಗಳನ್ನು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಒಡೆದಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಮುಂಜಾನೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆ ನಂತರ ಸ್ಥಳಕ್ಕೆ ಧಾವಿಸಿದ ಕೊಲಾಬಾ ಪೊಲೀಸ್ ಠಾಣೆ ತಂಡ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದೆ.ಮಧ್ಯರಾತ್ರಿಯ ಸ್ವಲ್ಪ ಸಮಯದ ಮೊದಲು, ಮಹಾರಾಷ್ಟ್ರ ನವನಿರ್ಮಾಣ ಸೇನೆ-ವಹತುಕ್ ಸೇನಾ (ಸಾರಿಗೆ ವಿಭಾಗ) ದ ಸುಮಾರು ಅರ್ಧ-ಡಜನ್ ಕಾರ್ಯಕರ್ತರು ಬಸ್‌ನ ಬಳಿ ಸಮಾವೇಶಗೊಂಡು ತಮ್ಮ ಬೇಡಿಕೆಗಳ ಪೋಸ್ಟರ್‌ಗಳನ್ನು ಅಂಟಿಸಿ, ಘೋಷಣೆಗಳನ್ನು ಕೂಗುತ್ತಾ ಬಸ್ ಕಿಟಕಿಗಳನ್ನು ಒಡೆದು ಹಾಕಲು ಪ್ರಾರಂಭಿಸಿದರು.


ಇದನ್ನೂ ಓದಿ: ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ‌ ಬೇಲಿಗೆ ಹಾರಿದ ಭಕ್ತರು..!


ಬಸ್‌ನ ಗಾಜಿನ ಮೇಲೆ ದೆಹಲಿ ಕ್ಯಾಪಿಟಲ್ ಧ್ಯೇಯವಾಕ್ಯ 'ವಿ ರೋರ್ ಟುಗೆದರ್' ಎಂದು ಬರೆಯಲಾಗಿರುವುದರಿಂದ ಧ್ವಂಸಗೊಂಡ ಬಸ್ ದೆಹಲಿ ಕ್ಯಾಪಿಟಲ್ಸ್ ಕಡೆಗೆ ಸೇರಿದೆ ಎಂದು ತಿಳಿದುಬಂದಿದೆ.ಈಗ ಘಟನೆಗೆ ಸಂಬಂಧಿಸಿದಂತೆ ಪ್ರಶಾಂತ್ ಗಾಂಧಿ, ಸಂತೋಷ್ ಜಾಧವ್, ಭರ್ಮು ನಂದೂರಕರ್ ಸೇರಿದಂತೆ ಐವರು ಹಿರಿಯ ಎಂಎನ್‌ಎಸ್-ವಿಎಸ್ ನಾಯಕರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಬುಧವಾರ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.


Corona Vaccination For Children: 12-14 ವರ್ಷದ ಮಕ್ಕಳ ಲಸಿಕೆಗಾಗಿ ಈ ರೀತಿ ನೋಂದಾಯಿಸಿ


ಪ್ರಮುಖವಾಗಿ, ದೆಹಲಿ ಕ್ಯಾಪಿಟಲ್ಸ್ ತಂಡವು ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಪ್ಯಾಲೇಸ್ ಎಂಬ ಹೋಟೆಲ್‌ನಲ್ಲಿ ತಂಗಿದೆ. ರಿಷಭ್ ಪಂತ್ ನೇತೃತ್ವದ ತಂಡದ ಸದಸ್ಯರು ಮುಂಬರುವ IPL 2022 ಗಾಗಿ ತಮ್ಮ ತಯಾರಿಯನ್ನು ಪ್ರಾರಂಭಿಸಲು ಮುಂಬೈಗೆ ಆಗಮಿಸುತ್ತಿದ್ದಾರೆ, ಮಾರ್ಚ್ 26 ರಿಂದ ಟೂರ್ನಿಯು ಪ್ರಾರಂಭವಾಗಲಿದೆ.ದೆಹಲಿ ಕ್ಯಾಪಿಟಲ್ಸ್ ತಮ್ಮ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಐದು ಬಾರಿ IPL ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಮಾರ್ಚ್ 27 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ಆಡಲಿದೆ.


ಏತನ್ಮಧ್ಯೆ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದೆಹಲಿ ಕ್ಯಾಪಿಟಲ್ಸ್ ಹೋಟೆಲ್ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ