ನವದೆಹಲಿ: ಆಂಡ್ರೂ ರಸೆಲ್(ಅಜೇಯ 70) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಮಯಾಂಕ್ ಅಗರ್ವಾಲ್ ಪಡೆಗೆ ಮಣ್ಣು ಮುಕ್ಕಿಸಿತು.


COMMERCIAL BREAK
SCROLL TO CONTINUE READING

ಟಾಸ್ ಸೋತ ಕೋಲ್ಕತ್ತಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ  ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ಕೋಲ್ಕತ್ತಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ರನ್ ಗಳಿಸಲು ತಿಣುಕಾಡಿತು. 18.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಪಂಜಾಬ್ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಕೋಲ್ಕತ್ತಾ 14.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಸಾಧಿಸಿತು.  


ಇದನ್ನೂ ಓದಿ: IPL 2022: ಲಕ್ನೋ ತಂಡದಲ್ಲಿ ಗೇಲ್‌ಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್


ಉಮೇಶ್ ಯಾದವ್ ಮಾರಕ ಬೌಲಿಂಗ್


ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಉಮೇಶ್ ಯಾದವ್(23ಕ್ಕೆ 4) ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ತತ್ತರಿಸಿ ಹೋಯಿತು. ಗೆಲುವಿನ ಉತ್ಸಾಹದಲ್ಲಿಯೇ ಕಣಕ್ಕಿಳಿದ ಪಂಜಾಬ್ ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು. ಪಂಜಾಬ್ ಆರಂಭದಲ್ಲಿಯೇ ನಾಯಕ ಮಯಾಂಕ್ ಅಗರ್ವಾಲ್(1) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಕೂಡ ಒಂದರ ಹಿಂದೊಂದರಂತೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.  ಭಾನುಕಾ ರಾಜಪಕ್ಸ (31 ರನ್), ಕಗಿಸೊ ರಬಾಡ(25), ಲಿಯಾಮ್ ಲಿವಿಂಗ್‌ಸ್ಟೋನ್ (19),  ಶಿಖರ್ ಧವನ್ (16), ಹರ್‌ಪ್ರೀತ್ ಬ್ರಾರ್(11) ಹಾಗೂ ರಾಜ್ ಬಾವಾ (11) ರನ್ ಗಳಿಸಿದರು. ಕೋಲ್ಕತ್ತಾ ಪರ ಉಮೇಶ್ ಯಾದವ್ 4, ಟೀಮ್ ಸೌಥಿ 2, ಶಿವಂ ಮಾವಿ, ಸುನಿಲ್ ನರೇನ್ ಮತ್ತು ಆಂಡ್ರೂ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.


ಅಬ್ಬರದ ಬ್ಯಾಟಿಂಗ್ ನಡೆಸಿ ಬೊಬ್ಬಿರಿದ ರಸೆಲ್!


ಸುಲಭ ಗೆಲುವಿನ ಗುರು ಬೆನ್ನತ್ತಿದ ಕೋಲ್ಕತ್ತಾ ಪರ ಆಂಡ್ರೂ ರಸೆಲ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 31 ಎಸೆತಗಳನ್ನು ಎದುರಿಸಿದ ರಸೆಲ್ 2 ಬೌಂಡರಿ ಹಾಗೂ 8 ಸಿಕ್ಸರ್ ಇದ್ದ 70 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ಶ್ರೇಯಸ್ ಅಯ್ಯರ್ (26) ಹಾಗೂ ಸ್ಯಾಮ್ಸ್ ಬಿಲ್ಲಿಂಗ್ಸ್ (ಅಜೇಯ 24) ತಂಡದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದರು. ಪಂಜಾಬ್ ಪರ ರಾಹುಲ್ ಚಾಹರ್ 2 ವಿಕೆಟ್ ಗಳಿಸಿ ಮಿಂಚಿದರೆ, ಕಾಗಿಸೊ ರಬಾಡ ಹಾಗೂ ಓಡನ್ ಸ್ಮಿತ್ ತಲಾ 1 ವಿಕೆಟ್ ಕಬಳಿಸಿದರು.


ಇದನ್ನೂ ಓದಿ: IPL 2022: ತೀವ್ರ ಕುತೂಹಲ ಕೆರಳಿಸಿದ ಎಂ.ಎಸ್.ಧೋನಿ – ಗೌತಮ್ ಗಂಭಿರ್ ಭೇಟಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.