ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 2022 ರ ಮೆಗಾ ಹರಾಜಿನ (IPL 2022 mega auction) ಹರಾಜುದಾರ ಹಗ್ ಆಡಮ್ಸ್ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಐಪಿಎಲ್ ಹರಾಜಿನ ವೇಳೆ ಹರಾಜುದಾರ ಹಗ್ ಆಡಮ್ಸ್ (Auctioneer Hugh Edmeades) ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಪ್ರಜ್ಞಾಹೀನರಾದರು. ಹೀಗಾಗಿ ಮೆಗಾ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. 


ಇದನ್ನೂ ಓದಿ:IPL 2022 Auction:ಭರ್ಜರಿ ಮೊತ್ತ ಪಡೆದು RCB ಗೆ ಮರಳಿದ ಹರ್ಷಲ್ ಪಟೇಲ್


ಹರಾಜುದಾರ ಹ್ಯೂ ಆಡಮ್ಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಹರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಐಪಿಎಲ್ ಹರಾಜುದಾರ ಮತ್ತು ಬ್ರಿಟನ್‌ನ ಹಗ್ ಆಡಮ್ಸ್ ಅವರು ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ (Wanindu Hasaranga) ಅವರ ಬಿಡ್ ಮಾಡುತ್ತಿದ್ದಾಗ ಏಕಾಏಕಿ ಮೂರ್ಛೆ ಹೋದರು. ಹಸರಂಗ ಅವರ ಬಿಡ್ 10.75 ಕೋಟಿಗೆ ತಲುಪಿತ್ತು. ಆದರೆ ಹ್ಯೂ ಆಡಮ್ಸ್ ಕುಸಿದುಬಿದ್ದ ಕಾರಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


 


IPL) ಹರಾಜುಗಳನ್ನು ನಡೆಸುತ್ತಿದ್ದಾರೆ. ಹಗ್ ಆಡಮ್ಸ್ 60 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಅವರು ವಿಶ್ವದಾದ್ಯಂತ 2700 ಕ್ಕೂ ಹೆಚ್ಚು ಹರಾಜುಗಳನ್ನು ಮಾಡಿದ್ದಾರೆ. 


ಇದನ್ನೂ ಓದಿ:ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳಿಂದ ಕೆ.ಎಲ್.ರಾಹುಲ್, ಅಕ್ಷರ್ ಪಟೇಲ್ ಹೊರಕ್ಕೆ


ಮೊದಲ ಹರಾಜನ್ನು 1984 ರಲ್ಲಿ ಅಡ್ಮಿಡ್ಸ್ ನಡೆಸಿದರು. ಆಡಮ್ಸ್ ಅವರು ಬ್ರಿಟಿಷ್ ಹರಾಜು ಮನೆಯಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅಲ್ಲಿ 3 ಲಕ್ಷಕ್ಕೂ ಹೆಚ್ಚು ವಸ್ತುಗಳನ್ನು ಹರಾಜು ಮಾಡಿದ್ದಾರೆ. ಅಷ್ಟೇ ಅಲ್ಲ, ಲಂಡನ್‌ನಲ್ಲಿ ನಡೆದ ನೆಲ್ಸನ್ ಮಂಡೇಲಾ ಗಾಲಾ ಹರಾಜುಗಾರರೂ ಆಗಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.