ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2022 Mega Auction) ಮೆಗಾ ಹರಾಜಿನಲ್ಲಿ ಭಾನುವಾರದಂದು ಭಾರತದ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) 1 ಕೋಟಿ ರೂ.ಗೆ ಖರೀದಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2022 Mega Auction: ಹೋಟೆಲ್ ಕೋಣೆಯಲ್ಲಿ ಒಟ್ಟಿಗೆ ಕುಳಿತು ಹರಾಜು ವೀಕ್ಷಿಸುತ್ತಿರುವ ಭಾರತೀಯ ಆಟಗಾರರು.!!


ಮೆಗಾ ಹರಾಜಿನ 2 ನೇ ದಿನ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಾಮ್‌ (Markram) SRHಗೆ ಮಾರಾಟವಾಗಿದ್ದಾರೆ. ಬಲಗೈ ಬ್ಯಾಟರ್ ಅನ್ನು ಸನ್ ರೈಸರ್ಸ್ ಹೈದರಾಬಾದ್ (SRH) ಗೆ 2.6 ಕೋಟಿ ರೂ.ಗೆ ಖರೀದಿಸಿದೆ. 


ಅಲ್ಲದೆ, ಭಾರತದ ಬ್ಯಾಟರ್ ಮನ್ದೀಪ್ ಸಿಂಗ್ (Mandeep Singh) ಅವರನ್ನು ದೆಹಲಿ ಕ್ಯಾಪಿಟಲ್ಸ್ 1.1 ಕೋಟಿ ರೂ.ಗೆ ಖರೀದಿಸಿತು.


ಇಂಡಿಯನ್ ಪ್ರೀಮಿಯರ್ ಲೀಗ್ (IPL), 2022 ರ ಮೆಗಾ ಹರಾಜಿನ ಮೊದಲ ದಿನ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹಾರ್ ಅವರು ಅತಿ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದಾರೆ.


ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಆಯ್ಕೆ ಖರೀದಿಸಿದ್ದಾರೆ, ಚಹರ್ 14 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಮಾರಾಟವಾಗಿದ್ದಾರೆ.


ಇದನ್ನೂ ಓದಿ: IPL 2022 Mega Auction: ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ಕ್ರಿಕೆಟ್ ತಾರೆಯರು


ಕೋಲ್ಕತ್ತಾ ನೈಟ್ ರೈಡರ್ಸ್ ಅಯ್ಯರ್ ಅವರನ್ನು ರೂ 12.25 ಕೋಟಿಗೆ ಖರೀದಿಸಿತು. ಮತ್ತೊಂದೆಡೆ, ಲಖನೌ ಸೂಪರ್ ಜೈಂಟ್ಸ್ ರೂ 10 ಕೋಟಿಗೆ ಖರೀದಿಸಿದ ನಂತರ ಅವೇಶ್ ಖಾನ್ ಅನ್ ಕ್ಯಾಪ್ಡ್ ಆಟಗಾರರ ಪೈಕಿ ಅತ್ಯಂತ ದುಬಾರಿ ಆಯ್ಕೆಯಾದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.