ನವದೆಹಲಿ: ಟೀಮ್ ಇಂಡಿಯಾ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ T20I ಸರಣಿಗೆ ಸಜ್ಜಾಗುತ್ತಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಶನಿವಾರ (ಜನವರಿ 12) ತಮ್ಮ ಸಹ ಆಟಗಾರರು ಹೋಟೆಲ್ ಕೋಣೆಯಲ್ಲಿ ಒಟ್ಟಿಗೆ ಕುಳಿತು IPL 2022 ಮೆಗಾ ಹರಾಜನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2022 Mega Auction ನಂತರ, ಈ ಆಟಗಾರನೆ RCB ಕ್ಯಾಪ್ಟನ್!


ಯುಜ್ವೇಂದ್ರ ಚಹಾಲ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣು ಮಿಟುಕಿಸಿದೆ  ಐಪಿಎಲ್ ಹರಾಜು ವೀಕ್ಷಿಸುತ್ತ, ಮಂಚದ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ (Viral Photo) ಆಗುತ್ತಿದೆ. 


ಈ ಫೋಟೋವನ್ನು ತಮ್ಮ Instagram ಸ್ಟೋರಿಯಲ್ಲಿ ಹಂಚಿಕೊಂಡಿರುವ ರೋಹಿತ್ ಶರ್ಮಾ, "ಕೆಲವರ ಮುಖದಲ್ಲಿ ಟೆನ್ಶನ್ ಮತ್ತು ಕೆಲವು ಸಂತೋಷದ ಮುಖಗಳು" ಎಂದು ಬರೆದುಕೊಂಡಿದ್ದಾರೆ.


[[{"fid":"229569","view_mode":"default","fields":{"format":"default","field_file_image_alt_text[und][0][value]":"India players watch auction together in hotel room ","field_file_image_title_text[und][0][value]":"ಹರಾಜು ವೀಕ್ಷಿಸುತ್ತಿರುವ ಭಾರತೀಯ ಆಟಗಾರರು "},"type":"media","field_deltas":{"1":{"format":"default","field_file_image_alt_text[und][0][value]":"India players watch auction together in hotel room ","field_file_image_title_text[und][0][value]":"ಹರಾಜು ವೀಕ್ಷಿಸುತ್ತಿರುವ ಭಾರತೀಯ ಆಟಗಾರರು "}},"link_text":false,"attributes":{"alt":"India players watch auction together in hotel room ","title":"ಹರಾಜು ವೀಕ್ಷಿಸುತ್ತಿರುವ ಭಾರತೀಯ ಆಟಗಾರರು ","class":"media-element file-default","data-delta":"1"}}]]


ಹರಾಜಿನ ಮೊದಲ ದಿನದ ಕುರಿತು ಮಾತನಾಡುತ್ತಾ, ಕಿಶನ್ (Ishan Kishan)ಮತ್ತು ಅಯ್ಯರ್ ಅವರನ್ನು ಕ್ರಮವಾಗಿ ಮುಂಬೈ ಇಂಡಿಯನ್ಸ್ (MI) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಯ್ಕೆ ಮಾಡಿಕೊಂಡಿದೆ. 15.25 ಕೋಟಿಗೆ ಕಿಶನ್, 12.25 ಕೋಟಿಗೆ ಅಯ್ಯರ್ (Shreyas Iyer) ಮಾರಾಟವಾಗಿದ್ದಾರೆ.


ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ (Suryakumar Yadav) ಅವರನ್ನು ಮುಂಬೈ ಇಂಡಿಯನ್ಸ್ ಕ್ರಮವಾಗಿ 16 ಕೋಟಿ ಮತ್ತು 8 ಕೋಟಿಗೆ ಉಳಿಸಿಕೊಂಡರೆ, ಡೆಲ್ಲಿ ಕ್ಯಾಪಿಟಲ್ಸ್ 16 ಕೋಟಿ ರೂ.ಗೆ ರಿಷಬ್ ಪಂತ್ ಅವರನ್ನು ಉಳಿಸಿಕೊಂಡಿದೆ.


ಇದನ್ನೂ ಓದಿ: IPL 2022 mega auction: ಮೊದಲ ದಿನದ ಹರಾಜಿನ ಬಳಿಕ ಯಾವ ಆಟಗಾರ ಯಾರ ತಂಡ ಸೇರಿದ್ದಾರೆ?


ಏತನ್ಮಧ್ಯೆ, ಯುಜ್ವೇಂದ್ರ ಚಹಾಲ್ (Yuzvendra Chahal) ಅವರನ್ನು ರಾಜಸ್ಥಾನ್ ರಾಯಲ್ಸ್ (RR) 6.50 ಕೋಟಿ ರೂ.ಗೆ ಖರೀದಿಸಿದೆ ಮತ್ತು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಶಾರ್ದೂಲ್ ಠಾಕೂರ್ (Shardul Thakur) ಅವರನ್ನು 10.75 ಕೋಟಿ ರೂ.ಗೆ ಖರೀದಿಸಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.