IPL 2022 Qualifier RCB vs RR : ಐಪಿಎಲ್ 2022 ರ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಆರ್‌ಸಿಬಿ 15 ವರ್ಷಗಳ ನಂತರವೂ ಮೊದಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ವಿರುದ್ಧ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿದ್ದರು. ಆದರೆ ಈ ಪಂದ್ಯದಲ್ಲಿ ಬಟ್ಲರ್ ಕೂಡ ಅಮೋಘ ಜೀವದಾನ ಪಡೆದರು.


COMMERCIAL BREAK
SCROLL TO CONTINUE READING

ಬಟ್ಲರ್ ಕ್ಯಾಚ್ ಬಿಟ್ಟ ಈ ಆಟಗಾರ 


ಆರ್‌ಸಿಬಿಯ ಆಟಗಾರನೊಬ್ಬ ಆಟದ ಅತ್ಯಂತ ಮಹತ್ವದ ಸಂದರ್ಭದಲ್ಲಿ ಜೋಸ್ ಬಟ್ಲರ್‌ನ ಕ್ಯಾಚ್‌ ಬಿಟ್ಟು ಆಟವನ್ನು ಇಕ್ಕಟ್ಟಿಗೆ ಸಿಲುಕಿಸಿದನು. ಈ ಆಟಗಾರ ಬೇರೆ ಯಾರೂ ಅಲ್ಲ, ಲೆಜೆಂಡರಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್. ರಾಜಸ್ಥಾನದ ಇನ್ನಿಂಗ್ಸ್‌ನಲ್ಲಿ ಹರ್ಷಲ್ ಪಟೇಲ್ 11ನೇ ಓವರ್ ಸಂದರ್ಭದಲ್ಲಿ ಕೂಡ ಹೀಗೆ ಆಗಿತ್ತು. ಕಾರ್ತಿಕ್ ವಿಕೆಟ್, ಬಟ್ಲರ್ ಹೊಡೆದ  ಕ್ಯಾಚ್ ಹಿಡಿದಿದ್ದರೆ ಬಹುಶಃ ಪಂದ್ಯದಕ್ಕೆ ಟರ್ನಿಂಗ್ ಪಾಯಿಂಟ್ ಸಿಗುತ್ತಿತ್ತು. ಈ ಕ್ಯಾಚ್ ಬಿಟ್ಟಿದಕ್ಕೆ ಬಟ್ಲರ್ ಕೂಡ ಭರ್ಜರಿ ಶತಕ ಬಾರಿಸಿದರು.


ಇದನ್ನೂ ಓದಿ : ಸೋಲಿನ ನಡುವೆಯೂ ದಾಖಲೆ ನಿರ್ಮಿಸಿದ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್..!


ಬ್ಯಾಟ್ನೊಂದಿಗೆ ಫ್ಲಾಪ್


ಈ ಸೀಸನ್ ನಲ್ಲಿ ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಾರ್ತಿಕ್ ಆರ್‌ಸಿಬಿ ಗಾಗಿ ಅನೇಕ ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಈ ಮಹತ್ವದ ಪಂದ್ಯದಲ್ಲಿ ದಿನೇಶ್ ವಿಫಲರಾದರು. ಈ ಪಂದ್ಯದಲ್ಲಿ ಕಾರ್ತಿಕ್ ಕೇವಲ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕಳಪೆ ಪ್ರದರ್ಶನದಿಂದಾಗಿ ಆರ್‌ಸಿಬಿ ಅಲ್ಪ ಮೊತ್ತಕ್ಕೆ ಕುಸಿಯಿತು, ಇದರಿಂದಾಗಿ ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು.


ರಾಜಸ್ಥಾನ್ ಗೆ ಭರ್ಜರಿ ಗೆಲುವು


ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿಯನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ ಮನ್ ಗಳು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಜೋಸ್ ಬಟ್ಲರ್ ಭರ್ಜರಿ ಶತಕ ಬಾರಿಸಿದ್ದು. ಇದು ಬಟ್ಲರ್ ನ ಈ ಸೀಸನ್  ನಾಲ್ಕನೇ ಶತಕವಾಗಿದೆ. ಬಟ್ಲರ್ ಬಲದಿಂದ ರಾಜಸ್ಥಾನ ಫೈನಲ್‌ನ ಟಿಕೆಟ್ ಪಡೆದುಕೊಂಡಿದೆ. ರಾಜಸ್ಥಾನ್ ತಂಡ ಎರಡನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್ ತಲುಪಿದೆ. ಇದಕ್ಕೂ ಮುನ್ನ ಶೇನ್ ವಾರ್ನ್ ನಾಯಕತ್ವದಲ್ಲಿ ತಂಡ ಮೊದಲ ಪ್ರಶಸ್ತಿ ಗೆದ್ದು ಬಿಗಿತ್ತು.


ಇದನ್ನೂ ಓದಿ : Virender Sehwag : ರಿಷಬ್ ಪಂತ್ ಬಗ್ಗೆ ಭವಿಷ್ಯ ನುಡಿದ ವೀರೇಂದ್ರ ಸೆಹ್ವಾಗ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.