Ravindra Jadeja Shivam Dube : ಐಪಿಎಲ್ 2022 ಸಧ್ಯ ಕೊನೆಯ ಹಂತದಲ್ಲಿದೆ. ಸಿಎಸ್‌ಕೆ ತಂಡದ ಮಾಜಿ ಕ್ಯಾಪ್ಟನ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಟೀಂನಿಂದ ಹೊರಗುಳಿದಿದ್ದಾರೆ. ಐಪಿಎಲ್ 2022 ಜಡೇಜಾ ಮತ್ತು ಸಿಎಸ್​ಕೆ ತಂಡಕ್ಕೆ ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಲ್ಲಿ ರವೀಂದ್ರ ಜಡೇಜಾ ಬದಲಿಗೆ ಸ್ಟಾರ್ ಆಟಗಾರನನ್ನು ಸೇರಿಸಿಕೊಳ್ಳಬಹುದು. ನಾಯಕ ಮಹೇಂದ್ರ ಸಿಂಗ್ ಧೋನಿಯ ಇಷ್ಟದ ಆಟಗಾರನಾಗಿದ್ದಾನೆ. 


COMMERCIAL BREAK
SCROLL TO CONTINUE READING

ಚಾನ್ಸ್ ಸಿಗಬಹುದು ಈ ಆಟಗಾರನಿಗೆ 


ಐಪಿಎಲ್ 2022 ರ ಮೊದಲು ಧೋನಿ ಬದಲಿಗೆ ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಮಾಡಲಾಯಿತು, ಆದರೆ ಅವರು ಐಪಿಎಲ್ ಮಧ್ಯದಲ್ಲಿ ನಾಯಕತ್ವವನ್ನು ತೊರೆದರು. ಅವರು ಚೆಂಡು ಮತ್ತು ಬ್ಯಾಟ್‌ನಲ್ಲಿ ಅದ್ಭುತಗಳನ್ನು ಮಾಡಲು ವಿಫಲರಾಗಿದ್ದರು. ಅವರು ತಮ್ಮ ಕಳಪೆ ಫೀಲ್ಡಿಂಗ್‌ಗಾಗಿ ಟೀಕೆಗಳನ್ನು ಸಹ ಎದುರಿಸಿದರು. ಐಪಿಎಲ್ 2022 ರ 10 ಪಂದ್ಯಗಳಲ್ಲಿ, ಜಡೇಜಾ 110 ರನ್ ಗಳಿಸಿದರು ಮತ್ತು ಕೇವಲ 5 ವಿಕೆಟ್ ಪಡೆದರು. ಈಗ ಜಡೇಜಾ ನಿರ್ಗಮನದ ನಂತರ, ಅವರ ಸ್ಥಾನಕ್ಕೆ ಶಿವಂ ದುಬೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು.


ಇದನ್ನೂ ಓದಿ : Team India : ರೋಹಿತ್ ಗೆ ವಿಶ್ವಕಪ್ ಗೆಲ್ಲುವ ಟಿಪ್ಸ್ ನೀಡಿದ ಸುನಿಲ್ ಗವಾಸ್ಕರ್!


ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಈ ಆಟಗಾರ 


ಶಿವಂ ದುಬೆ ಉತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನಸೆಳೆದಿದ್ದಾರೆ. ಶಿವಂ ದುಬೆ ಐಪಿಎಲ್ 2022 ರ 9 ಪಂದ್ಯಗಳಲ್ಲಿ 279 ರನ್ ಗಳಿಸಿದ್ದಾರೆ. ದುಬೆ ಅಪಾಯಕಾರಿ ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ. ಯಾವುದೇ ಪಿಚ್‌ನಲ್ಲೂ ರನ್ ಗಳಿಸುವ ಕಲೆ ಅವರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರವೀಂದ್ರ ಜಡೇಜಾ ಬದಲಿಗೆ ಶಿವಂ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.


ಐಪಿಎಲ್ 2022 ರಲ್ಲಿ CSK ಕಳಪೆ ಪ್ರದರ್ಶನ


ಐಪಿಎಲ್ 2022 ರಲ್ಲಿ ಸಿಎಸ್‌ಕೆ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು. 11 ಪಂದ್ಯಗಳಲ್ಲಿ ತಂಡವು ನಾಲ್ಕರಲ್ಲಿ ಮಾತ್ರ ಗೆದ್ದಿದೆ. ಸಿಎಸ್‌ಕೆ ತಂಡ ತನ್ನ ಕೊನೆಯ ಪಂದ್ಯವನ್ನು 91 ರನ್‌ಗಳಿಂದ ಗೆದ್ದುಕೊಂಡಿತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಆದರೆ ಐಪಿಎಲ್ 2022 ರಲ್ಲಿ ತಂಡವು ಹಳೆಯ ವರ್ಚಸ್ಸನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಸಿಎಸ್‌ಕೆ ತಂಡ ಪ್ಲೇಆಫ್‌ಗೆ ಪ್ರವೇಶಿಸಲು ಹರಸಾಹಸ ಪಡುತ್ತಿದೆ. ಪ್ಲೇಆಫ್ ತಲುಪಲು, ಸಿಎಸ್‌ಕೆ ಉಳಿದ ಎಲ್ಲಾ ಮೂರು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು ಮತ್ತು ಇತರ ತಂಡಗಳ ಗೆಲುವು ಮತ್ತು ಸೋಲಿನ ಮೇಲೆ ಅವಲಂಬಿತವಾಗಿದೆ.


ಇದನ್ನೂ ಓದಿ : CSK vs MI, IPL 2022: ಮುಂಬೈಗೆ ಪ್ರತಿಷ್ಠೆಯಾಗಿರುವ ಪಂದ್ಯದಲ್ಲಿ ಚೆನ್ನೈ ಸೋತರೆ ಹೊರಕ್ಕೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.