ನವದೆಹಲಿ: ಪ್ರತಿ ವರ್ಷ ಐಪಿಎಲ್ (IPL 2022) ಆವೃತ್ತಿ ಬಂದಾಗಲೆಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕಪ್ ಗೆಲ್ಲುತ್ತಾ ಅಥವಾ ಇಲ್ಲವೋ ಎನ್ನುವುದು ಚರ್ಚೆಯ ವಿಷಯವಾಗಿರುತ್ತದೆ.


COMMERCIAL BREAK
SCROLL TO CONTINUE READING

ಈಗ ಈ ಕುರಿತಾಗಿ ಮಾತನಾಡಿರುವ ಮಾಜಿ ಆಟಗಾರ ಹಾಗೂ ಕಾಮೆಂಟೆಟರ್ ಆಗಿರುವ ಆಕಾಶ್ ಚೋಪ್ರಾ ಮಾತ್ರ ಖಡಾಖಂಡಿತವಾಗಿ ಬೆಂಗಳೂರು ತಂಡವು ಪ್ಲೇ ಆಫ್ ಪ್ರವೇಶ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: IPL 2022: ಮೊದಲ ಬಾರಿಗೆ ಐಪಿಎಲ್ ಪ್ರವೇಶಿಸಲಿದೆ ಲಕ್ನೋ ಸೂಪರ್ ಜೈಂಟ್ಸ್


ಆರ್‌ಸಿಬಿ ಈ ವರ್ಷ ಅರ್ಹತೆ ಪಡೆಯದೇ ಇರಬಹುದು: ಆಕಾಶ್ ಚೋಪ್ರಾ


ಕಳೆದ ಎರಡು ವರ್ಷಗಳಲ್ಲಿ, RCB ತಮ್ಮ ಪ್ರದರ್ಶನದೊಂದಿಗೆ ಲೀಗ್ ಹಂತದಲ್ಲಿ ಅದ್ಭುತವಾಗಿತ್ತು ಆದರೆ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಸನ್‌ರೈಸರ್ಸ್ ಹೈದರಾಬಾದ್ (2020 ರಲ್ಲಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2021 ರಲ್ಲಿ) ನಿಂದ ಪ್ಲೇಆಫ್‌ನಲ್ಲಿ ಹೊರಹಾಕಲ್ಪಟ್ಟಿತು.ಈಗ ತಂಡದ ಹೊಸ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ನೇಮಕ ಮಾಡಿರುವುದು ಆರ್ಸಿಬಿ ಅಭಿಮಾನಿಗಳಿಗೆ ಒಂದು ರೀತಿಯ ಹೊಸ ಭರವಸೆ ಮೂಡಿಸಿದೆ.


ಆದಾಗ್ಯೂ, ಕೆಕೆಆರ್ ಮತ್ತು ಆರ್‌ಆರ್‌ ಪರವಾಗಿ ಏಳು ಐಪಿಎಲ್ ಪಂದ್ಯಗಳನ್ನು ಆಡಿರುವ ಚೋಪ್ರಾ, ಆರ್‌ಸಿಬಿ ನಾಕೌಟ್ ಹಂತವನ್ನು ಕೂಡ ತಲುಪುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. "ಆರ್‌ಸಿಬಿ ಈ ವರ್ಷ ಅರ್ಹತೆ ಪಡೆಯದಿರಬಹುದು ಎಂದು ನಾನು ಹೇಳುತ್ತೇನೆ. ಇದು ನನ್ನ ಭಾವನೆಯಾಗಿದೆ, ಇದು ತಪ್ಪು ಕೂಡ ಆಗಿರಬಹುದು, ಅವರು ಇನ್ನೂ ಹೆಚ್ಚಿನದನ್ನು ಸಾಧಿಸುವ ಸಾಧ್ಯತೆ ಇದೆ.ಆದರೆ ಒಂದು ವೇಳೆ ಅವರು ಹಾಗೆ ಮಾಡದೆ ಇದ್ದರೆ ಅದೂ ಅಚ್ಚರಿಯನ್ನು ಉಂಟು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: CSK vs KKR Prediction: ಇರ್ವರ ನಡುವೆ ಗೆಲ್ಲುವವರು ಯಾರು?


“ಆರ್‌ಸಿಬಿಯಲ್ಲಿ ದಿನೇಶ್ ಕಾರ್ತಿಕ ಮತ್ತು ಫ್ಯಾಪ್ ಅವರು ಟಾಪ್ ಆರ್ಡರ್ ನಲ್ಲಿದ್ದರೆ,ಮಹಿಪಾಲ್ ಲೊಮ್ರೋರ್ ಲೋ ಆರ್ಡರ್ ನಲ್ಲಿದ್ದಾರೆ.ಈಗ ಅವರು ಹರಸಂಗ ಅವರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ.ರಾಹುಲ್ ಚಹಾರ್ ಮತ್ತು ಯುಜ್ವೇಂದ್ರ ಚಹಾಲ್ ಅವರಂತಹವರನ್ನು ನಾನು ನೋಡಲಿಲ್ಲ ಎಂದು ನನಗೆ ಆಶ್ಚರ್ಯವಾಯಿತು.ಈ ಹಿಂದೆ ಇದ್ದ ಕೆಳ ಮಧ್ಯಮ ಕ್ರಮಾಂಕದ ಸಮಸ್ಯೆಗಳು ಈಗಲೂ ಇವೆ ಎಂದು ಅವರು ಹೇಳಿದರು.


ಐಪಿಎಲ್ 2022 (Indian Premier League 2022) ರ ಹರಾಜಿಗೆ ಮುಂಚಿತವಾಗಿ ಕೊಹ್ಲಿಯ ಹೊರತಾಗಿ, ಆರ್‌ಸಿಬಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಸಹ ಉಳಿಸಿಕೊಂಡಿದೆ.


ಇದನ್ನೂ ಓದಿ: ಧೋನಿ ಕನಸು ನನಸಾಗಿಸಲಿದ್ದಾರೆ ಈ 3 ಆಟಗಾರರು : 5ನೇ ಭಾರಿಗೆ IPL ಪ್ರಶಸ್ತಿಗೆ ಮುತ್ತಿಕ್ಕಲಿದೆ CSK


ಐಪಿಎಲ್ 2021 ಹರಾಜಿನಲ್ಲಿ INR 14.25 ಕೋಟಿಗೆ RCB ಖರೀದಿಸಿದ ಮ್ಯಾಕ್ಸ್‌ವೆಲ್, ಕಳೆದ ಋತುವಿನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಯುಎಇಯಲ್ಲಿ ನಡೆದ ಐಪಿಎಲ್ 2020 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ನಿರಾಶಾದಾಯಕ ಪ್ರದರ್ಶನವನ್ನು ನೀಡಿದ್ದರು.ಆಗ ಅವರು 13 ಪಂದ್ಯಗಳಿಂದ 15.42 ಸರಾಸರಿಯಲ್ಲಿ ಕೇವಲ 108 ರನ್ ಗಳಿಸಿದರು. ಮ್ಯಾಕ್ಸ್‌ವೆಲ್ ಕಳೆದ ವರ್ಷ ಆರ್‌ಸಿಬಿಗೆ ಸೇರಿದ ನಂತರವಂತೂ ಅವರು 15 ಪಂದ್ಯಗಳಲ್ಲಿ 144.10 ಸ್ಟ್ರೈಕ್ ರೇಟ್‌ನಲ್ಲಿ 513 ರನ್ ಗಳಿಸಿದರು.


RCB ಮುಂಬರುವ ಋತುವಿನ ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಮಾರ್ಚ್ 27 ರಂದು ನವಿ ಮುಂಬೈನಲ್ಲಿ ಆಡಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.