IPL 2022 Retention: ಕೊಹ್ಲಿ- ಧೋನಿ ಅಲ್ಲದೆ ಈ 3 ಆಟಗಾರರು ಪಡೆಯುತ್ತಾರೆ ಅತೀ ಹೆಚ್ಚು ಸಂಬಳ!
ಅಸ್ತಿತ್ವದಲ್ಲಿರುವ ಎಂಟು ಐಪಿಎಲ್ ಫ್ರಾಂಚೈಸಿಗಳು ಗರಿಷ್ಠ 3 ಭಾರತೀಯರು, 2 ವಿದೇಶಿ ಆಟಗಾರರನ್ನು ಮತ್ತು 2 ಅನ್ ಕ್ಯಾಪ್ಡ್ ಭಾರತೀಯರೊಂದಿಗೆ 4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗಿದೆ.
ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2022 ಸೀಸನ್‌ಗಾಗಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ತಂಡಗಳಿಗೆ ಗಡುವು ಮಂಗಳವಾರ (ನವೆಂಬರ್ 30) ಕೊನೆಗೊಂಡಿತು. ಅಸ್ತಿತ್ವದಲ್ಲಿರುವ ಎಂಟು ಐಪಿಎಲ್ ಫ್ರಾಂಚೈಸಿಗಳು ಗರಿಷ್ಠ 3 ಭಾರತೀಯರು, 2 ವಿದೇಶಿ ಆಟಗಾರರನ್ನು ಮತ್ತು 2 ಅನ್ ಕ್ಯಾಪ್ಡ್ ಭಾರತೀಯರೊಂದಿಗೆ 4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಕ್ಯಾಪಿಟಲ್ಸ್ (DC), ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸುವುದರೊಂದಿಗೆ ಪ್ರತಿಯೊಂದು ಫ್ರಾಂಚೈಸಿಗಳು ಆಟಗಾರರ ಧಾರಣ ಆಯ್ಕೆಯನ್ನು ಬಳಸಿದವು. ರಾಜಸ್ಥಾನ್ ರಾಯಲ್ಸ್ (RR), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಲಾ 3 ಆಟಗಾರರನ್ನು ಉಳಿಸಿಕೊಂಡರೆ, ಪಂಜಾಬ್ ಕಿಂಗ್ಸ್ (PBKS) 2 ಆಟಗಾರರನ್ನು ಉಳಿಸಿಕೊಂಡಿದೆ.
ಇದನ್ನೂ ಓದಿ : IPL : RCBಯ ಈ ಆಟಗಾರನನ್ನೇ ಟಾರ್ಗೆಟ್ ಮಾಡಲಿದೆ Mumbai Indians
ಮುಂಬೈ ಇಂಡಿಯನ್‌ನ ರೋಹಿತ್ ಶರ್ಮಾ(Rohit Sharma), ಸಿಎಸ್‌ಕೆಯ ರವೀಂದ್ರ ಜಡೇಜಾ ಮತ್ತು ಡಿಸಿಯ ರಿಷಬ್ ಪಂತ್ ತಲಾ 16 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಉಳಿಸಿಕೊಂಡಿರುವ ಆಟಗಾರರ ಪೈಕಿ ಮೂವರ ಸಂಭಾವನೆ ಅತ್ಯಧಿಕವಾಗಿದೆ. ಆರ್‌ಸಿಬಿಯ ವಿರಾಟ್ ಕೊಹ್ಲಿ 15 ಕೋಟಿ ರೂ., ಎಸ್‌ಆರ್‌ಎಚ್‌ನ ಕೇನ್ ವಿಲಿಯಮ್ಸನ್ ಮತ್ತು ಆರ್‌ಆರ್‌ನ ಸಂಜು ಸ್ಯಾಮ್ಸನ್ ತಲಾ 14 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಎಂಐನ ಜಸ್ಪ್ರೀತ್ ಬುಮ್ರಾ, ಪಿಬಿಕೆಎಸ್‌ನ ಮಯಾಂಕ್ ಅಗರ್ವಾಲ್, ಸಿಎಸ್‌ಕೆಯ ಎಂಎಸ್ ಧೋನಿ, ಕೆಕೆಆರ್‌ನ ಆಂಡ್ರೆ ರಸೆಲ್ ತಲಾ 12 ಕೋಟಿ ರೂ.
ಪ್ರತಿ ಫ್ರಾಂಚೈಸಿಯಿಂದ ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ ಮತ್ತು ಅವರು ಪಡೆಯುವ ಸಂಬಳ:
ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (16 ಕೋಟಿ ರೂ.), ಮಹೇಂದ್ರ ಸಿಂಗ್ ಧೋನಿ (12 ಕೋಟಿ ರೂ.), ಮೊಯೀನ್ ಅಲಿ (8 ಕೋಟಿ ರೂ.), ರುತುರಾಜ್ ಗಾಯಕ್ವಾಡ್ (ರೂ. 6 ಕೋಟಿ).
ಕೋಲ್ಕತ್ತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್ (12 ಕೋಟಿ ರೂ.), ವರುಣ್ ಚಕ್ರವರ್ತಿ (8 ಕೋಟಿ ರೂ.), ವೆಂಕಟೇಶ್ ಅಯ್ಯರ್ (8 ಕೋಟಿ ರೂ.), ಸುನಿಲ್ ನರೈನ್ (ರೂ. 6 ಕೋಟಿ).
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (14 ಕೋಟಿ ರೂ.), ಅಬ್ದುಲ್ ಸಮದ್ (4 ಕೋಟಿ ರೂ.), ಉಮ್ರಾನ್ ಮಲಿಕ್ (4 ಕೋಟಿ ರೂ.).
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (16 ಕೋಟಿ ರೂ.), ಜಸ್ಪ್ರೀತ್ ಬುಮ್ರಾ (12 ಕೋಟಿ ರೂ.), ಸೂರ್ಯಕುಮಾರ್ ಯಾದವ್ (8 ಕೋಟಿ ರೂ.), ಕೀರಾನ್ ಪೊಲಾರ್ಡ್ (ರೂ. 6 ಕೋಟಿ).
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (15 ಕೋಟಿ ರೂ.), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರೂ.), ಮೊಹಮ್ಮದ್ ಸಿರಾಜ್ (7 ಕೋಟಿ ರೂ.).
ದೆಹಲಿ ಕ್ಯಾಪಿಟಲ್ಸ್: ರಿಷಬ್ ಪಂತ್ (16 ಕೋಟಿ ರೂ.), ಅಕ್ಸರ್ ಪಟೇಲ್ (9 ಕೋಟಿ ರೂ.), ಪೃಥ್ವಿ ಶಾ (7.5 ಕೋಟಿ ರೂ.), ಅನ್ರಿಚ್ ನಾರ್ಟ್ಜೆ (6.5 ಕೋಟಿ ರೂ.)
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (14 ಕೋಟಿ ರೂ.), ಜೋಸ್ ಬಟ್ಲರ್ (10 ಕೋಟಿ ರೂ.), ಯಶಸ್ವಿ ಜೈಸ್ವಾಲ್ (ರೂ. 4 ಕೋಟಿ).
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.