ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಅನುಭವಿಸಿದೆ.ಆ ಮೂಲಕ ಪ್ಲೇ ಆಫ್ ಗೆ ಸಾಗುವ ಆರ್ಸಿಬಿ ಕನಸು ಭಗ್ನವಾಗಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಗುಜರಾತ್ ಟೈಟಾನ್ಸ್ ತಂಡವು ಮೊದಲು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಈ ಅವಕಾಶ ವನ್ನು ಸದುಪಯೋಗಪಡಿಸಿಕೊಂಡ ಬೆಂಗಳೂರು ತಂಡವು ನಾಯಕ ಫ್ಯಾಪ್ ದುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಮೊದಲ ವಿಕೆಟ್ 67 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.


ಇನ್ನೇನೂ ಈ ಇಬ್ಬರೂ ಆಟಗಾರರು ತಮ್ಮ ಸ್ಥಿರ ಬ್ಯಾಟಿಂಗ್ ಮುಂದುವರೆಸುತ್ತಾರೆ ಎನ್ನುವಷ್ಟರಲ್ಲಿ ಫ್ಯಾಫ್ ದುಪ್ಲೆಸಿಸ್ ನೂರ್ ಅಹಮದ್ ಅವರಿಗೆ 28 ರನ್ ಗಳಾಗಿದ್ದಾಗ ವಿಕೆಟ್ ಒಪ್ಪಿಸಿದರು.ಇದಾದ ನಂತರ ಬಂದಂತಹ ಮ್ಯಾಕ್ಸ್ ವೆಲ್ ಹಾಗೂ ಮಹಿಪಾಲ್ ಲೋಮ್ರೋವ್ ಬೇಗನೆ ವಿಕೆಟ್ ಒಪ್ಪಿಸಿದ್ದರಿಂದಾಗಿ ಆರ್ಸಿಬಿ ಸಂಕಷ್ಟದಲ್ಲಿ ಸಿಲುಕಿತು.


ಇದನ್ನೂ ಓದಿ: ವ್ಯರ್ಥವಾದ ರಿಂಕು ಸಿಂಗ್ ಹೋರಾಟ, ಲಕ್ನೋ ಗೆ 1 ರನ್ ಗಳ ರೋಚಕ ಗೆಲುವು 


ಇಷ್ಟೆಲ್ಲದರ ನಡುವೆಯೂ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ ವಿರಾಟ್ ಕೊಹ್ಲಿ ಕೇವಲ 61 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ನೆರವಿನೊಂದಿಗೆ 101 ರನ್ ಗಳೊಂದಿಗೆ ಅಜೇಯ ಶತಕ ಸಿಡಿಸಿದರು. ಆ ಮೂಲಕ ಈ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಶತಕ ಸಿಡಿಸಿದ್ದಲ್ಲದೆ ಒಟ್ಟಾಗಿ ಏಳನೇ ಶತಕವನ್ನು ಅವರು ದಾಖಲಿಸಿದರು. ಕೊಹ್ಲಿಗೆ ಸಾಥ್ ನೀಡಿದ ಮೈಕಲ್ ಬ್ರಾಸ್ವೆಲ್ 26,ಹಾಗೂ ಅನುಜ್ ರಾವತ್ 23 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ ಗಳಲ್ಲಿ  ಐದು ವಿಕೆಟ್ ನಷ್ಟಕ್ಕೆ 197 ರನ್ ಗಳನ್ನು ಗಳಿಸಿದೆ.


ದ್ವೇಷದ ರಾಜಕಾರಣ ಕೊನೆಗಾಣಿಸುವುದೇ ರಾಜೀವ್ ಗಾಂಧಿಯವರಿಗೆ ಸಲ್ಲಿಸುವ ಗೌರವ: ಸಿಎಂ ಸಿದ್ದರಾಮಯ್ಯ


ಗುಜರಾತ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಬ್ಮನ್ ಗಿಲ್ ಕೇವಲ 52 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದಾಗಿ ಅವರು 104 ರನ್ ಗಳಿಸಿ ಅಜೇಯರಾಗಿ ಉಳಿದರೆ, ವಿಜಯ್ ಶಂಕರ 35 ಎಸೆತಗಳಲ್ಲಿ ಏಳು ಬೌಂಡರಿ ಎರಡು ಸಿಕ್ಸರ್ ಗಳ ನೆರವಿನಿಂದ 53 ರನ್ ಗಳಿಸಿದರು.ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡವು 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 198 ರನ್ ಗಳನ್ನು ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು. 


ಆ ಮೂಲಕ ಪ್ಲೇ ಆಫ್ ಕನಸಿನಲ್ಲಿದ್ದ ಆರ್ಸಿಬಿಗೆ ಈ ಪಂದ್ಯದ ಸೋಲಿನೊಂದಿಗೆ ಅದರ ಕನಸು ಭಗ್ನವಾಗಿದೆ. ಇನ್ನೊಂದೆಡೆಗೆ ಆರ್ಸಿಬಿ ಸೋಲನ್ನು ಬಯಸಿದ್ದ ಮುಂಬೈ ಇಂಡಿಯನ್ಸ್ ತಂಡವು ಈಗ ಸುಲಭವಾಗಿ ಪ್ಲೇ ಆಫ್ ತಲುಪಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.