ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, `Lucky Mascot` ಎಂದು ಭಾವಿಸುತ್ತಿದ್ದ!
Suresh Raina-Shruti Haasan: ದಕ್ಷಿಣ ಚಿತ್ರರಂಗ ಹಾಗೂ ಬಾಲೀವುಡ್ ನ ಸುಂದರ ನಟಿಮಣಿಯರಲ್ಲಿ ಒಬ್ಬಳಾಗಿರುವ ಶ್ರುತಿ ಹಾಸನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ.
Suresh Raina-Shruti Haasan: ಶ್ರುತಿ ಹಾಗೂ ಆಕೆಯೇ ಬಾಯ್ಫ್ರೆಂಡ್ ಶಂತನು ಹಜಾರಿಕಾ ಬ್ರೇಕ್ ಅಪ್ ಆಗಿದೆ ಎನ್ನಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಉಭಯರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಮತ್ತು ಲೀವ್ ಇನ್ ಪಾರ್ಟ್ನರ್ ಕೂಡ ಆಗಿದ್ದರು ಎನ್ನಲಾಗುತ್ತದೆ.
ಪ್ರಸ್ತುತ ಇಬ್ಬರು ಪರಸ್ಪರ ಬೇರ್ಪಟ್ಟ ಕಾರಣ ಯಾವುದೇ ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಆನ್ ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ.
ಶಂತನು ಕೌಶಿಕ್ ಹಜಾರಿಕಾ ಮೂಲತಃ ಅಸ್ಸಾಂನ ಡೂಡಲ್ ಕಲಾವಿದನಾಗಿದ್ದು, 2020 ರಿಂದ ಶ್ರುತಿ ಅವರೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗುತ್ತದೆ. ಶ್ರುತಿ ಹಿರಿಯ ನಟ ಕಮಲ್ ಹಾಸನ್ ಮತ್ತು ನಟಿ ಸಾರಿಕಾ ಅವರ ಮಗಳಾಗಿದ್ದು, ಹಿಂದಿ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾಳೆ.
ಸುರೇಶ್ ರೈನಾ ಶ್ರುತಿ ಹಾಸನ್ ಅವರನ್ನು ಇಷ್ಟಪಟ್ಟಿದ್ದರಾ?
ಶ್ರುತಿ ಹೆಸರು ಈಗಾಗಲೇ ಹಲವು ನಟರ ಜೊತೆ ತಳುಕು ಹಾಕಿಕೊಂಡಿದ್ದು, ಶ್ರುತಿ ಹಾಸನ್ ಅವರನ್ನು ಹುಚ್ಚರಂತೆ ಪ್ರೀತಿಸಿದವರಲ್ಲಿ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕೂಡ ಒಬ್ಬರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸುರೇಶ್ ರೈನಾ ಅವರ ಇಮೇಜ್ ಯಾವಾಗಲೂ 'ಅಮ್ಮನ ಮಗ' ಆಗಿದ್ದರೂ, ಅವರು ಕೆಲವೊಮ್ಮೆ ಐಪಿಎಲ್ ಪಂದ್ಯಗಳಲ್ಲಿ ಶ್ರುತಿ ಹಾಸನ್ ಅವರೊಂದಿಗೆ ಕಾಣಿಸಿಕೊಂಡಿದ್ದರು.
ಐಪಿಎಲ್ 7 ರ ಸಮಯದಲ್ಲಿ ರೈನಾ-ಹಾಸನ್ ಸಂಬಂಧದ ಬಗ್ಗೆ ಸಾಕಷ್ಟು ವರದಿಗಳು ಪ್ರಕಟವಾಗಿದ್ದವು. ಆ ಸಮಯದಲ್ಲಿ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಮತ್ತು ಇದೆ ಅವಧಿಯಯಲ್ಲಿ, ಶ್ರುತಿ ಆಗಾಗ್ಗೆ ತಂಡವನ್ನು ಮತ್ತು ರೈನಾ ಅವರನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಹುರುದುಂಬಿಸುತ್ತಿರುವುದು ನೋಡಲಾಗಿದೆ.
ರೈನಾ ಶೃತಿಯನ್ನು ತನ್ನ Lucky Mscot ಭಾವಿಸುತ್ತಿದ್ದರು !
ಆಗ ‘ನಟಿ ಶ್ರುತಿ ಅವರನ್ನು ಸುರೇಶ್ ರೈನಾ ತನ್ನ ಲಕ್ಕಿ ಮಾಸ್ಕಟ್ ಎಂದು ಪರಿಗಣಿಸುತ್ತಾರೆ’ ಎಂಬ ಸುದ್ದಿ ‘ಮುಂಬೈ ಮಿರರ್’ನಲ್ಲಿ ಪ್ರಕಟವಾಗಿತ್ತು. ಇಬ್ಬರೂ CSK ಯ ಈವೆಂಟ್ ಪಾರ್ಟಿಯಲ್ಲಿ ಭೇಟಿಯಾಗಿದ್ದರು ಮತ್ತು ನಂತರ ಅವರು ಪರಸ್ಪರ ಭೇಟಿಯಾಗಲು ಪ್ರಾರಂಭಿಸಿದರು. ಆ ಸಮಯದಲ್ಲಿ ರೈನಾ ಮತ್ತು ಶ್ರುತಿ ಎಂದಿಗೂ ಏನನ್ನೂ ಹೇಳಲಿಲ್ಲ, ಶ್ರುತಿ ಮತ್ತು ರೈನಾ ಅವರ ಅನೇಕ ಚಿತ್ರಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು, ನಂತರ ಅವರ ಸಂಬಂಧದ ಸುದ್ದಿ ಕಿಚ್ಚು ಹಚ್ಚಿತು, ಆದರೆ ರೈನಾ ಮತ್ತು ಶ್ರುತಿ ಹಾಸನ್ ಇಬ್ಬರೂ ಬಹಿರಂಗವಾಗಿ ಏನನ್ನೂ ಮಾತನಾಡಲಿಲ್ಲ. ಐಪಿಎಲ್ ಮುಕ್ತಾಯದ ಬಳಿಕ ಈ ಸುದ್ದಿಗಳು ಕೂಡ ತೆರೆಮರೆಗೆ ಸರಿದವು.
ಇದನ್ನೂ ಓದಿ-"ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ", ಹೀಗಂತ Anushka MSD ಕುರಿತು ಹೇಳಿದ್ಯಾಕೆ?
2 ಏಪ್ರಿಲ್ 2015 ರಂದು ಪ್ರಿಯಾಂಕಾ ವರಿಸಿದ ಸುರೇಶ್ ರೈನಾ
ನಂತರ ಸುರೇಶ್ ರೈನಾ ತಮ್ಮ ತಾಯಿಯ ಸ್ನೇಹಿತನ ಮಗಳು ಪ್ರಿಯಾಂಕಾ ಅವರನ್ನು 2 ಏಪ್ರಿಲ್ 2015 ರಂದು ವಿವಾಹವಾದರು. ಪ್ರಿಯಾಂಕಾ ನೆದರ್ಲ್ಯಾಂಡ್ನ ಆಮ್ಸ್ಟರ್ಡ್ಯಾಮ್ನಲ್ಲಿರುವ ಬ್ಯಾಂಕ್ನಲ್ಲಿ ಅಧಿಕಾರಿಯಾಗಿದ್ದು, ಮೂಲತಃ ಮೀರತ್ನವರಾಗಿದ್ದಾರೆ. ಈ ಮದುವೆಯಿಂದ ರೈನಾ ಮತ್ತು ಪ್ರಿಯಾಂಕಾಗೆ ಇಬ್ಬರು ಮಕ್ಕಳಿದ್ದಾರೆ. ರೈನಾ ಮತ್ತು ಪ್ರಿಯಾಂಕಾ ಅವರನ್ನು ಕ್ರಿಕೆಟ್ ಜಗತ್ತಿನ 'ಕೂಲ್ ಕಪಲ್' ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ-IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!
ಇಂದಿಗೂ ಒಂಟಿಯಾಗಿದ್ದಾರೆ
ಪ್ರಸ್ತುತ ರೈನಾ ಅವರನ್ನು ನೀವು ಐಪಿಎಲ್ ಪಂದ್ಯಗಳಲ್ಲಿ ಕಾಮೆಂಟ್ರ್ರಿ ಮಾಡುವುದನ್ನು ನೀವು ನೋಡಬಹುದು ಮತ್ತು ಕಾಮೆಂಟ್ರಿಯಲ್ಲೂ ಉತ್ತಮ ಸಂವಾದ ನಡೆಸುವುದನ್ನು ನೀವು ನೋಡಬಹುದು, ಮತ್ತೊಂದೆಡೆ, ಶ್ರುತಿ ಹಾಸನ್ ತನ್ನ ಜೀವನದಲ್ಲಿ ಇನ್ನೂ ಒಂಟಿಯಾಗಿದ್ದಾಳೆ.
ಇದನ್ನೂ ನೋಡಿ-