Call Me Virat Instead Of King Kohli Requests Fans: ಟೀಮ್ ಇಂಡಿಯಾದಲ್ಲಿ ರನ್ ಮಷೀನ್ ಎಂದೇ ಖ್ಯಾತಿ ಹೊಂದಿರುವ ಕಿಂಗ್ ವಿರಾಟ್ ಕೊಹ್ಲಿ, ನನ್ನನ್ನು 'ಕಿಂಗ್' ಅಂತ ಕರೆಯಬೇಡಿ, ಅದು ನನಗೆ ಸಾಕಷ್ಟು ಮುಜುಗರ ಉಂಟುಮಾಡುತ್ತದೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ಜೆರ್ಸಿಯ ಅದ್ಭುತ ಅನ್‌ಬಾಕ್ಸಿಂಗ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫ್ರಾಂಚೈಸಿ (Chinnaswamy Stadium) ತನ್ನ ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ನಿಂದ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಎಂದು ಬದಲಾಯಿಸಿದೆ. ಇದೇ ಸಂದರ್ಭದಲ್ಲಿ ಕೊಹ್ಲಿ ತನಗೆ ‘ವಿರಾಟ್’ ಎಂದು ಕರೆಯಿಸಿಕೊಳುವುದು ಇಷ್ಟ ಹೊರತು ‘ಕಿಂಗ್’ ಅಲ್ಲ ಎಂದು ಹೇಳಿದ್ದಾರೆ. (IPL 2024 News In Kannada)


COMMERCIAL BREAK
SCROLL TO CONTINUE READING

ಕ್ರೀಡಾಂಗಣದಲ್ಲಿ ಮೊಲಗಿದ 'ಕೊಹ್ಲಿ-ಕೊಹ್ಲಿ' ಘೋಷಣೆಗಳು
ಹೊಸ ಜೆರ್ಸಿ ಬಿಡುಗಡೆಗೂ (RCB Unbox Event 2024) ಮುನ್ನ ಕೊಹ್ಲಿಗೆ ಎರಡನೇ ಪುತ್ರ ಆಕಾಯ್ ಜನನದ ಬಳಿಕ ಕ್ರಿಕೆಟ್ ಮೈದಾನದಲ್ಲಿ ಅನ್ನಿಸುತ್ತಿದೆ ಎಂದು ಪ್ರಶ್ನಿಸಲಾಗಿತ್ತು. ಕೊಹ್ಲಿ ಮಾತನಾಡುತ್ತಿರುವಾಗಲೇ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಕೊಹ್ಲಿ-ಕೊಹ್ಲಿ ಘೋಷಣೆಗಳು ಮೊಳಗಿದವು. ಈ ಸಂದರ್ಭದಲ್ಲಿ ನನಗೆ ಮಾತನಾಡಲು ಅವಕಾಶ ಕೊಡಿ ಎಂದು ಪ್ರೇಕ್ಷಕರಿಗೆ ವಿರಾಟ್ (Virat Kohli) ಮನವಿ ಮಾಡಬೇಕಾದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಎಂದುರಾಗಿತ್ತು. ಅನ್‌ಬಾಕ್ಸ್ ಕಾರ್ಯಕ್ರಮದ ಬಳಿಕ ತಂಡವು ಸಂಜೆ ಚೆನ್ನೈಗೆ ಚಾರ್ಟರ್ ಫ್ಲೈಟ್ ಕ್ಯಾಚ್ ಮಾಡಬೇಕು, ನಮ್ಮ ಬಳಿ ಹೆಚ್ಚು ಸಮಯವಿಲ್ಲ ಎಂದು ವಿರಾಟ್ ಮನವಿ ಮಾಡಿದ್ದಾರೆ. IPL 2024 ರ ಆರಂಭಿಕ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.


ಇದನ್ನೂ ಓದಿ- IPL 2024: ತಂಡದ ಹೆಸರಿನಲ್ಲಿ Bangalore ನಿಂದ Bengaluru ಎಂದು ಬದಲಾಯಿಸಿದ RCB ತಂಡ


ನನ್ನನ್ನು 'ಕಿಂಗ್' ಅಂತ ಕರೆಯಬೇಡಿ...
ಬಳಿಕ ಮುಂದುವರೆದು ಮಾತನಾಡಿದ ಸ್ಟಾರ್ ಬ್ಯಾಟ್ಸ್‌ಮನ್, ಇನ್ನು ಮುಂದೆ ನನ್ನನ್ನು 'ಕಿಂಗ್' ಎಂದು ಕರೆಯಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 'ಮೊದಲು, ನೀವು ನನ್ನನ್ನು ಆ ಪದದಿಂದ (ಕಿಂಗ್) ಕರೆಯುವುದನ್ನು ನಿಲ್ಲಿಸಬೇಕು. ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ. ಆ ಪದದಿಂದ ನನ್ನನ್ನು ಕರೆಯಬೇಡಿ (ಕಿಂಗ್). ಪ್ರತಿ ಸಂದರ್ಭದಲ್ಲಿ ನೀವು ನನ್ನನ್ನು ಹೀಗೆ (ಕಿಂಗ್) ಎಂದು ಕರೆಯುವಾಗ ನನಗೆ ಮುಜುಗರವಾಗುತ್ತದೆ ಎಂದು ನಾನು ಫಾಫ್ ಡು ಪ್ಲೆಸಿಸ್‌ಗೆ ಹೇಳುತ್ತಿದ್ದೆ. ಹೀಗಾಗಿ ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ, ಇನ್ನು ಮುಂದೆ ಆ ಪದವನ್ನು ಬಳಸಬೇಡಿ. ಇದು ನನಗೆ ತುಂಬಾ ಮುಜುಗರ ತರುತ್ತದೆ ಎಂದು ವಿನಂತಿ ಮಾಡಿದ್ದಾರೆ.


ಇದನ್ನೂ ಓದಿ-Virat Kohli: "ಇದು RCB ಹೊಸ ಅಧ್ಯಾಯ" ಖಡಕ್‌ ಆಗಿ ಕನ್ನಡದಲ್ಲೇ ಮಾತನಾಡಿದ ಕಿಂಗ್‌ ಕೊಹ್ಲಿ!! ವಿಡಿಯೋ ವೈರಲ್‌


ಆರ್‌ಸಿಬಿ ಟ್ರೋಫಿಗಾಗಿ ತವಕಿಸುತ್ತಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ 16 ಸೀಸನ್‌ಗಳನ್ನು ಆಡಿದ್ದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕೊಹ್ಲಿ ನಾಯಕತ್ವದಲ್ಲಿ ತಂಡ ಒಮ್ಮೆ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು, ಆದರೆ ಸನ್ ರೈಸರ್ಸ್ ಹೈದರಾಬಾದ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ತಂಡದ ಮ್ಯಾನೇಜ್‌ಮೆಂಟ್ ಮತ್ತು ಅಭಿಮಾನಿಗಳ ಜೊತೆಗೆ ಆಟಗಾರರು ಕೂಡ ಮುಂಬರುವ ಐಪಿಎಲ್ (Indian Premier League 2024) ಸೀಸನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದ್ದಾರೆ. ವಿಶೇಷವಾಗಿ ಫ್ರಾಂಚೈಸಿಯ ಮಹಿಳಾ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಸೀಸನ್ 2 ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ