IPL 2024 CSK vs RCB: IPL 2024 ರ CSK vs RCB ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಬಾರಿ ಪ್ರಶಸ್ತಿ ಗೆಲ್ಲುವ ಆಸೆಯೊಂದಿಗೆ ಕಣಕ್ಕೆ ಇಳಿದ ಆರ್‌ಸಿಬಿಗೆ ಆರಂಭದಲ್ಲೇ ನಿರಾಸೆ ಎದುರಾಯಿತು. ಸದ್ಯ ಸೋಲಿನ ಹಿಂದಿನ ಕಾರಣವನ್ನು ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ವಿಶ್ಲೇಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ಇನ್ನಿಂಗ್ಸ್‌ನ್ನು ಬಲಿಷ್ಠವಾಗಿ ಆರಂಭಿಸಿತಾದರೂ ಸಿಎಸ್‌ಕೆ ವೇಗಿ ಮುಸ್ತಾಫಿಜುರ್ ರೆಹಮಾನ್ ಎದುರು ತಲೆಬಾಗಿತು. 4 ಓವರ್ ಬೌಲ್ ಮಾಡಿದ ಮುಸ್ತಾಫಿಜುರ್ ರೆಹಮಾನ್ 29 ರನ್ ನೀಡಿ 4 ವಿಕೆಟ್ ಪಡೆದರು. ರಹಿನ್ ರವೀಂದ್ರ ಮತ್ತು ರಹಾನೆ ಅವರ ಅತ್ಯುತ್ತಮ ಫೀಲ್ಡಿಂಗ್ ಕೊಹ್ಲಿ ಮತ್ತು ಡುಪ್ಲೆಸಿಸ್ ಅವರನ್ನು ಮೀರಿಸಿತ್ತು..


ಇದನ್ನೂ ಓದಿ-IPL 2024 : ಬೆಂಗಳೂರು ತಂಡಕ್ಕೆ ಕೈಕೊಟ್ಟ ಬ್ಯಾಟಿಂಗ್ : 6 ವಿಕೆಟ್ ಗಳ ಅಂತರದಿಂದ ಮೊದಲ ವಿಕ್ಟರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್


ಮ್ಯಾಕ್ಸ್ ವೆಲ್ ಡಕ್ ಔಟ್ ಆದರು. ನಿರ್ಣಾಯಕ ವಿಕೆಟ್ ಕಳೆದುಕೊಂಡ ಆರ್ ಸಿಬಿಗೆ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ ನೆರವಾದರು. ಕೊನೆಯ 3 ಓವರ್‌ಗಳಲ್ಲಿ ಸುಮಾರು 50 ರನ್‌ಗಳ ನಂತರ, RCB ಕನಿಷ್ಠ 173 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. CSK ಯಂತಹ ತಂಡಕ್ಕೆ ಇದು ದೊಡ್ಡ ಸ್ಕೋರ್ ಆಗಿರಲಿಲ್ಲ, ಆದ್ದರಿಂದ ಅವರು ಗೆಲ್ಲಲು ಹೆಚ್ಚು ಶ್ರಮಿಸಲಿಲ್ಲ. ರಚಿನ್ ರವೀಂದ್ರ, ರವೀಂದ್ರ ಜಡೇಜಾ ಮತ್ತು ದುಬೆ ಸಿಎಸ್‌ಕೆಗೆ ಮೊದಲ ಜಯ ತಂದುಕೊಟ್ಟರು. 


RCB ನಾಯಕ ಫಾಫ್ ಡುಪ್ಲೆಸಿಸ್ ಮೊದಲ ಪಂದ್ಯದಲ್ಲಿಯೇ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದು.. ಬ್ಯಾಟಿಂಗ್ ವೈಫಲ್ಯವೇ ಇದಕ್ಕೆ ಕಾರಣ, ಇನ್ನು 15-20 ರನ್ ಗಳಿಸಿದ್ದರೆ RCB ಗೆಲ್ಲುತ್ತಿತ್ತು ಇದೇ ಸೋಲಿಗೆ ಕಾರಣ ಎಂದಿದ್ದಾರೆ..  


ಇದನ್ನೂ ಓದಿ-ಆರಂಭಿಕ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ RCBಗೆ ಸಿಂಹಸ್ವಪ್ನವಾಗಿ ಕಾಡಿದ ಈ ಎಂ.ರೆಹಮಾನ್ ಯಾರು? ಆತನ ಹಿನ್ನೆಲೆ ಏನು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.