Indian Premier League 2024: ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಮಹೇಂದ್ರ ಸಿಂಗ್ (Mahendra Singh Dhoni) ಅವರ ಪತ್ನಿ ಸಾಕ್ಷಿ ಧೋನಿ (Sakshi Dhoni) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿಯನ್ನು  ಹಂಚಿಕೊಂಡಿದ್ದಾರೆ, ಸಾಕ್ಷಿ ಹಂಚಿಕೊಂಡ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.  ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ 46 ನೇ ಪಂದ್ಯವನ್ನು ಚೆಪಾಕ್‌ನಲ್ಲಿ ಸಿಎಸ್‌ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ 78 ರನ್‌ಗಳಿಂದ ಗೆದ್ದಿದೆ.  ಆದರೆ ಪಂದ್ಯದ ಮಧ್ಯದಲ್ಲಿ, ಮಗು ಜನಿಸಲಿರುವ ಕಾರಣ ಪಂದ್ಯವನ್ನು ಬೇಗ ಮುಗಿಸಬೇಕು ಎಂದು ಸಾಕ್ಷಿ ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ಪ್ರಸ್ತುತ ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


COMMERCIAL BREAK
SCROLL TO CONTINUE READING

ಹೈದರಾಬಾದ್ ವಿರುದ್ಧದ ಈ ಪಂದ್ಯದ ವೇಳೆ, ಧೋನಿ ಅವರ ಪತ್ನಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪಂದ್ಯವನ್ನು ಬೇಗ ಮುಗಿಸಲು ಚೆನ್ನೈ ಸೂಪರ್ ಕಿಂಗ್ಸ್‌ಗೆ ವಿಂತಾಂಟಿಸಿದ್ದಾರೆ. ಸ್ವಲ್ಪ ಮಟ್ಟಿಗೆ, SRH ತಂಡವು ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗದ ಕಾರಣ CSK ಅವರ ವಿನಂತಿಯನ್ನು ಸ್ವೀಕರಿಸಿದೆ ಮತ್ತು 18.4 ಓವರ್‌ಗಳಲ್ಲಿ ಆಲೌಟ್ ಆಗಿದೆ. ಆದರೆ, ಈ ನಡುವೆ ಸಾಕ್ಷಿಯ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.


ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಅನ್ನು ಹಂಚಿಕೊಂಡು ಬರೆದ ಸಾಕ್ಷಿ, “ಚೆನ್ನೈ ಸೂಪರ್ ಕಿಂಗ್ಸ್ ಕಿಂಗ್ಸ್, ದಯವಿಟ್ಟು ಪಂದ್ಯವನ್ನು ಬೇಗ ಮುಗಿಸಿ, ಮಗು ಜನಿಸಲಿದೆ. ಲೆಬರ್ ಆರಂಭವಾಗಿದೆ. ಚಿಕ್ಕಮ್ಮನಾಗಿ ವಿನಂತಿ" ಎಂದು ಬರೆದುಕೊಂಡಿದ್ದಾರೆ. ಅವರ ಇದೇ ಪೋಸ್ಟ್ ವೈರಲ್ ಆಗುತ್ತಿದ್ದು, ಅದರಲ್ಲಿ ತಾನು ಚಿಕ್ಕಮ್ಮನಾಗಲಿದ್ದೇನೆ ಎಂದು ಸಾಕ್ಷಿ ಹೇಳುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ-IPL 2024 RCB vs GT: "ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದಾಗ... Will Jacks...", ಗೆಲುವಿನ ಬಳಿಕ Virat Kohli ಹೇಳಿಕೆ ವೈರಲ್!


ಚೆನ್ನೈ ತಂಡ ಹೈದರಾಬಾದ್ ತಂಡವನ್ನು 78 ರನ್‌ಗಳಿಂದ ಸೋಲಿಸಿದೇ
ನಾವು ಪಂದ್ಯದ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಬಳಿಕ ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದೆ. 213 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡದ ಬ್ಯಾಟಿಂಗ್ ವಿಫಲ ಸಾಬೀತಾಗಿದೆ ಮತ್ತು ತಂಡ 134 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಚೆನ್ನೈ 78 ರನ್‌ಗಳಿಂದ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.


ಇದನ್ನೂ ಓದಿ-IPL 2024 DC vs MI: ಆಟದ ಮಧ್ಯದಲ್ಲಿಯೇ ಗಾಳಿಪಟ ಹಾರಿಸಲು ಮುಂದಾದ Rohit Sharma-Rishabh Pant ವಿಡಿಯೋ ನೋಡಿ!


ಈ ಪಂದ್ಯದಲ್ಲಿ CSK ನಾಯಕ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ಆದರೆ ಅವರು ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಗಾಯಕ್ವಾಡ್ 54 ಎಸೆತಗಳನ್ನು ಎದುರಿಸಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 98 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆ, ಅವರನ್ನು ಪ್ಲೇಯರ್ ಆಫ್ ಮ್ಯಾಚ್ ಆಯ್ಕೆ ಮಾಡಲಾಗಿದೆ. 


[[{"fid":"402335","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.