IPL 2024 DC vs MI: ಆಟದ ಮಧ್ಯದಲ್ಲಿಯೇ ಗಾಳಿಪಟ ಹಾರಿಸಲು ಮುಂದಾದ Rohit Sharma-Rishabh Pant ವಿಡಿಯೋ ನೋಡಿ!
Indian Premier League 2024: ಸಾಮಾಜಿಕ ಮಾಧ್ಯಮದಲ್ಲಿ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಉಭಯ ಆಟಗಾರರು ಪಂದ್ಯದ ನಡುವೆಯೇ ಕ್ರಿಕೆಟ್ ಆಡುವುದನ್ನು ಬಿಟ್ಟು ಗಾಳಿಪಟ ಹಾರಿಸುತ್ತಿರುವುದು ಕಂಡುಬಂದಿದೆ.
IPL 2024 DC vs MI: ಐಪಿಎಲ್ 2024 ರ 43 ನೇ ಪಂದ್ಯವು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ, ಆದರೆ ಈ ನಿರ್ಣಯ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡಿಸಿ 257 ರನ್ ಕಲೆ ಹಾಕಿದೆ. ಏತನ್ಮಧ್ಯೆ ಪಂದ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಮೈದಾನದ ಮಧ್ಯದಲ್ಲಿ ಗಾಳಿಪಟಗಳೊಂದಿಗೆ ಆಟವಾಡುತ್ತಿದ್ದಾರೆ.
ಗಾಳಿಪಟ ಹಿಡಿದು ತಮಾಷೆ ಮಾಡಿದ ರೋಹಿತ್ ಶರ್ಮಾ-ರಿಷಭ್ ಪಂತ್
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ವೇಳೆ ಗಾಳಿಪಟವೊಂದು ಗಾಳಿಯಲ್ಲಿ ಹಾರಿ ಮೈದಾನದೊಳಕ್ಕೆ ಬಂದಿದೆ. ಅದನ್ನು ರೋಹಿತ್ ಶರ್ಮಾ ಕ್ಯಾಚ್ ಹಿಡಿದಿದ್ದಾರೆ. ಹಿಟ್‌ಮ್ಯಾನ್ ನಂತರ ಗಾಳಿಪಟವನ್ನು ರಿಷಬ್ ಪಂತ್‌ಗೆ ನೀಡಿದರು, ಅವರು ದಾರವನ್ನು ಹಿಡಿದು ಅದನ್ನು ಹಾರಿಸಲು ಪ್ರಯತ್ನಿಸುತ್ತಿರುವುದು ಬಂದಿದೆ. ಈ ದೃಶ್ಯ ನೋಡಿ ಎಲ್ಲಾ ಆಟಗಾರರು ನಗಲಾರಂಭಿಸಿದ್ದಾರೆ. ನಂತರ ರಿಷಭ್ ಗಾಳಿಪಟವನ್ನು ಅಂಪೈರ್‌ಗೆ ಹಸ್ತಾಂತರಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಅಭಿಮಾನಿಗಳಿಂದ ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ‘ಫೀಲ್ಡ್ ನಲ್ಲಿ ಗಾಳಿಪಟ ಹಾರಿಸಬೇಡಿ’ ಎಂದು ಒಬ್ಬ ಬಳಕೆದಾರ ಬರೆದರೆ, ಮತ್ತೊಬ್ಬ ಬಳಕೆದಾರರು ‘ಆಗ್ ಲಗೇ ಬಸ್ತಿ ಮೇ, ಪಂತ್ ಅಪ್ನಿ ಮಸ್ತಿ ಮೇ’ ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು ಮೈದಾನದಲ್ಲಿ ಗಾಳಿಪಟಗಳಿಗೆ ಅವಕಾಶ ನೀಡಬಾರದು ಎಂದು ತಮಾಷೆಯಾಗಿ ಬರೆದಿದ್ದಾರೆ.
ಡಿಸಿ ವರ್ಸಸ್ ಎಂಐ ಪಂದ್ಯದಲ್ಲಿ ರಿಷಬ್ ಪಂತ್ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಇಂದು ಅವರು 19 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 29 ರನ್ ಗಳಿಸಿದ್ದಾರೆ. ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ಪಂತ್ ತನ್ನ ವಿಕೆಟ್ ಒಪ್ಪಿಸಿದ್ದಾರೆ.
8 ರನ್ ಗಳಿಸಿ ಔಟಾದ ರೋಹಿತ್ ಶರ್ಮಾ .
258 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ನಾಲ್ಕನೇ ಓವರ್‌ನಲ್ಲಿ ರೋಹಿತ್ ಶರ್ಮಾ ರೂಪದಲ್ಲಿ ಭಾರಿ ಆಘಾತ ಅನುಭವಿಸಿದೆ. ಹಿಟ್‌ಮ್ಯಾನ್ ಖಲೀಲ್ ಅಹ್ಮದ್ ವಿರುದ್ಧ 8 ಎಸೆತಗಳಲ್ಲಿ 8 ರನ್ ಗಳಿಸಿ ಔಟಾಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.