SRH ತಂಡವು ಈ IPL ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ, ಈ ತಂಡವು ಹಲವು ವರ್ಷಗಳಿಂದ ವಿಫಲ ಎಂದು ಸಾಬೀತಾಗಿದೆ. ಆದರೆ ಈ ಬಾರಿ ಪ್ಯಾಟ್ ನಾಯಕತ್ವದಲ್ಲಿ ಹೈದರಾಬಾದ್ ಹಗಲಿರುಳು ಎದುರಾಳಿಗಳಿಗೆ ಸಿಂಹಸ್ವಪ್ನ ಸಾಬೀತಾಗಿದೆ. ರಾಜಸ್ತಾನ ವಿರುದ್ಧದ ಗೆಲುವಿನ ನಂತರ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆ ಇದೀಗ ಭಾರಿ ವೈರಲ್ ಆಗುತ್ತಿದೆ, ಇನ್ನೊಂದೆಡೆ ಆರ್ಆರ್ ತಂಡದ ಪಾಳಯದಲ್ಲಿ ಭಾರಿ ನಿರಾಶೆಯ ವಾತಾವರಣ ಮೂಡಿತ್ತು.


COMMERCIAL BREAK
SCROLL TO CONTINUE READING

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಯಶಸ್ವಿಯಾದ SRH ತಂಡ.
ಹೌದು, ಎಸ್‌ಆರ್‌ಎಚ್ ತಂಡವು ರಾಜಸ್ಥಾನದಂತಹ ಬಲಿಷ್ಠ ತಂಡದ ವಿರುದ್ಧವೂ ಅತ್ಯುತ್ತಮ ಪ್ರದರ್ಶನ ನೀಡಿದೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ಯಾಟ್ ಬಳಗ 201 ರನ್ ಗಳಿಸಿದೆ. ಈ ವೇಳೆ ಟ್ರಾವಿಸ್ ಹೆಡ್ 58 ರನ್, ನಿತೀಶ್ ಕುಮಾರ್ ರೆಡ್ಡಿ 76 ರನ್ ಮತ್ತು ಕ್ಲಾಸೆನ್ 42 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಭುವಿ 3 ವಿಕೆಟ್, ಪ್ಯಾಟ್ ಕಮಿನ್ಸ್ ಮತ್ತು ನಟರಾಜನ್ ತಲಾ 2-2 ವಿಕೆಟ್ ಪಡೆದು ಇಡೀ ಆಟವನ್ನೇ ಬದಲಿಸಿ ರಾಜಸ್ಥಾನವನ್ನು ಸೋಲಿಸಿದ್ದಾರೆ.


ಇದನ್ನೂ ಓದಿ-IPL 2024: MS Dhoni ಪತ್ನಿ Saakshi Dhoni ಆದಾಯ ಎಷ್ಟು ಗೊತ್ತಾ? ಕೇಳಿದ್ರೆ ಗ್ಯಾರಂಟಿ ತಲೆ ಗಿರ್ರ್ ಅನ್ನುತ್ತೆ


SRH ಗೆಲುವಿನ ನಂತರ ಹುಚ್ಚೆದ್ದು ಕುಣಿದ ಕಾವ್ಯಾ ಮಾರನ್ 
ಪಂದ್ಯದ ಕೊನೆಯ ಎಸೆತದವರೆಗೂ ನಡೆದ ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 1 ರನ್ ನಿಂದ ಸೋಲಿಸಿದೆ. ಈ ವೇಳೆ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಖುಷಿಯಿಂದ ಕುಣಿದಾಡಿದ್ದಾರೆ. ಕೊನೆಯ ಎಸೆತದಲ್ಲಿ ವಿಕೆಟ್ ಬಂದಾಗ ಕಾವ್ಯಾ ಮಾರನ್ ಮೊದಲು ಕುಣಿದು ಕುಪ್ಪಳಿಸಿ ನಂತರ ನೃತ್ಯ ಮಾಡಲು ಆರಂಭಿಸಿದ್ದಾರೆ. ಇನ್ನೊಂದೆಡೆ ಸಂಜು ಸ್ಯಾಮಸನ್ ಬಳಗದ ಸೋಲನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.


ಇದನ್ನೂ ಓದಿ-'Happy Birthday My Love' ತನ್ನ ಪ್ರೀತಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ Virat Kohli


ಇಂದು ಯಾರ ನಡುವೆ ಪಂದ್ಯ ನಡೆಯಲಿದೆ?
ಇಂದು ಕೂಡ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯ ನಡೆಯಲಿದ್ದು, ಅದು ಸೂಪರ್‌ಹಿಟ್ ಆಗುವ ನಿರೀಕ್ಷೆಯಿದೆ. ಈ ಪಂದ್ಯದಲ್ಲಿ ಮುಂಬೈ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ, ಈ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30 ರಿಂದ ನಡೆಯಲಿದೆ. ಒಂದೆಡೆ ಕೆಕೆಆರ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದರೆ, ಮುಂಬೈ ತಂಡವು ಅತ್ಯಂತ ಕಳಪೆ ಋತುವಿನಲ್ಲಿ 9 ನೇ ಸ್ಥಾನದಲ್ಲಿದೆ. ಹೀಗಿರುವಾಗ ಹಾರ್ದಿಕ್ ಪಡೆ ತವರು ನೆಲದಲ್ಲಿ ಅಭಿಮಾನಿಗಳನ್ನು ಖುಷಿಪಡಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.