IPL 2024: `ಇಲ್ಲಿ ಯಾರೂ ಸಿನಿಯರ್... ಜೂನಿಯರ್ ಇಲ್ಲ...; ಹೀಗಂತ ಗೌತಮ್ ಗಂಭೀರವಾಗಿ ಹೇಳಿದ್ಯಾರಿಗೆ!
Indina Premier League 2024: ಈ ಹಿಂದೆ ಎರಡು ಸೀಸನ್ಗಳಿಗೆ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ನ ಮೆಂಟರ್ ಆಗಿದ್ದರು. ಅವರು ಹೊಸ ಪಾತ್ರದಲ್ಲಿ KKR ಗೆ ಮರಳಿದ್ದಾರೆ. ಗಂಭೀರ್ ಬಂದ ಕೂಡಲೇ ಆಟಗಾರರಲ್ಲಿ ಉತ್ಸಾಹ ತುಂಬುವ ಕೆಲಸ ಆರಂಭಿಸಿದರು. (IPL 2024 News In Kannada)
Indian Premier League 2024: ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಮಾರ್ಚ್ 23 ರಂದು ಐಪಿಎಲ್ 17 ನೇ ಆವೃತ್ತಿಯಲ್ಲಿ ತನ್ನ ಅಭಿಯಾನ ಆರಂಭಿಸಲು ಸನ್ನದ್ಧಗೊಂಡಿದೆ. ಅದಕ್ಕೂ ಒಂದು ದಿನ ಮುಂಚೆ ಐಪಿಎಲ್ 2024 ಆರಂಭವಾಗಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ಮೊದಲ ಮುಖಾಮುಖಿ ನಡೆಯಲಿದೆ. ಮರುದಿನ ಕೋಲ್ಕತ್ತಾ ತಂಡ ಸನ್ ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎದುರಿಸಲಿದೆ. ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸುವುದರ ಮೇಲೆ ತಂಡ ತನ್ನ ಗಮನ ಕೇಂದ್ರೀಕರಿಸಿದೆ. ಕೆಕೆಆರ್ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ತಂಡದ ಮಾಜಿ ನಾಯಕ ಗೌತಮ್ ಗಂಭೀರ್ (aoutam Gambir) ಅವರನ್ನು ಮಾರ್ಗದರ್ಶಕರನ್ನಾಗಿ ಕೆಕೆಆರ್ ನೇಮಕ ಮಾಡಿಕೊಂಡಿದೆ. ಗಂಭೀರ್ 2012 ಮತ್ತು 2014ರಲ್ಲಿ ತಂಡವನ್ನು ಚಾಂಪಿಯನ್ ಆಗಿಸಿದ್ದಾರೆ. (IPL 2024 News In Kannada)
ಅದ್ಭುತ ಮಾತು ಹೇಳಿದ ಗಂಭೀರ್
ಈ ಹಿಂದೆ ಒಟ್ಟು ಎರಡು ಸೀಸನ್‌ಗಳಿಗಾಗಿ ಗಂಭೀರ್ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗಿದ್ದರು. ಇದೀಗ ಅವರು ತಮ್ಮ ಹೊಸ ಪಾತ್ರದಲ್ಲಿ ಮತ್ತೆ KKR (Kolkata Knight Riders) ಗೆ ಮರಳಿದ್ದಾರೆ. ಗಂಭೀರ್ ತಂಡಕ್ಕೆ ಮರಳುತ್ತಲೇ ತಂಡದ ಆಟಗಾರರಲ್ಲಿ ಉತ್ಸಾಹ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ. ತನ್ನ ಮೊದಲ ತರಬೇತಿ ಭಾಷಣ ಮಾಡಿದ ಗೌತೀ, . ತಂಡದಲ್ಲಿ ಹಿರಿಯ-ಕಿರಿಯ ಎಂಬ ಭೇಧಭಾವ ಇಲ್ಲ ಎಂದು ಆಟಗಾರರಿಗೆ ಗಂಭೀರವಾಗಿ ಹೇಳಿದ್ದಾರೆ. ತಂಡವನ್ನು ಚಾಂಪಿಯನ್ ಆಗಿಸಲು ಪ್ರತಿಯೊಬ್ಬರ ಉದ್ದೇಶವೂ ಒಂದೇ ಆಗಿರಬೇಕು. ಗಂಭೀರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
IPL 2024: ಮತ್ತೊಮ್ಮೆ ದೇಶದ ಹೊರಗೆ ಆಯೋಜನೆಯಾಗಲಿದೆಯಾ ಐಪಿಎಲ್? ಈ ದೇಶದಲ್ಲಿ ಎರಡನೇ ಹಂತದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಿದ್ಧತೆ!
ತಂಡವನ್ನು ಮತ್ತೆ ಚಾಂಪಿಯನ್ ಆಗಿಸಬೇಕು ಎಂದ ಗಂಭೀರ್
ಇದಕ್ಕೂ ಮುಂದುವರೆದು ಮಾತನಾಡಿದ ಗಂಭೀರ್, "ತಂಡವನ್ನು ಚಾಂಪಿಯನ್ ಆಗಿಸುವುದು ನಮ್ಮ ಏಕಮೇವ ಧ್ಯೇಯ ಮತ್ತು ನಾವು ಅದನ್ನು ಮಾತ್ರ ಅನುಸರಿಸಬೇಕು. ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಮೇ 26 ರಂದು (ಸಂಭವನೀಯ ದಿನಾಂಕ) ಅಂತಿಮ ಪಂದ್ಯವನ್ನು ಆಡಬೇಕು. ಅದಕ್ಕಾಗಿ ಸಿದ್ಧತೆ ಮಾರ್ಚ್ 23 ರಿಂದ ಆರಂಭವಾಗಲಿದೆ(Ipl 2024 kkr schedule). ಆದರೆ ಇಂದಿನಿಂದಲೇ ನಾವು ಒಂದೇ ಉದ್ದೇಶದಿಂದ ಮುನ್ನದೆಯುತ್ತೇವೆ ಮತ್ತು ಪ್ರಬಲವಾಗಿ ಸ್ಪರ್ಧಿಸುತ್ತೇವೆ. ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ಸಂಪೂರ್ಣ ಭರವಸೆ ನನಗಿದೆ. ಸಹಾಯಕ ಸಿಬ್ಬಂದಿ ನಿಮ್ಮ ಬಗ್ಗೆ ಸಂಪೂರ್ಣವಾಗಿ ಪ್ರಾಮಾಣಿಕರಾಗಿರುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವು ಎಲ್ಲಿ ಬೇಕಾದರೂ, ಏನು ಬೇಕಾದರೂ ಪ್ರಶ್ನಿಸಬಹುದು, ನಿಮ್ಮನ್ನು ಇಲ್ಲಿ ತಡೆಯುವವರು ಯಾರೂ ಇಲ್ಲ' ಎಂದು ಗೌತಿ ಹೇಳಿದ್ದಾರೆ.
ಇದನ್ನೂ ಓದಿ-Virat Kohli: ಅನುಷ್ಕಾಗೂ ಮುನ್ನ ಈ ನಟಿಯನ್ನೇ ಮದುವೆಯಾಗಲು ಬಯಸಿದ್ದರಂತೆ ವಿರಾಟ್! ಯಾರು ಗೊತ್ತಾ ಆ ಬ್ಯೂಟಿ?
KKR ಪೂರ್ಣ ತಂಡ ಇಂತಿದೆ (IPL 2024 Team KKR)
ಶ್ರೇಯಸ್ ಅಯ್ಯರ್ (ನಾಯಕ), ಮನೀಷ್ ಪಾಂಡೆ, ರಿಂಕು ಸಿಂಗ್, ಶಕೀಬ್ ಹುಸೇನ್, ನಿತೀಶ್ ರಾಣಾ, ರಮಣ್‌ದೀಪ್ ಸಿಂಗ್, ಅನುಕೂಲ್ ರಾಯ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶೆರ್ಫಾನ್ ರುದರ್‌ಫೋರ್ಡ್, ಆಂಗ್‌ಕ್ರಿಶ್ ರಘುವಂಶಿ, ಕೆಎಸ್ ಭರತ್, ಫಿಲಿಪ್ ರಭ್‌ಮಾನುಲ್ಲಾ ವಬ್ರ ಜಿ, ., ಚೇತನ್ ಸಕರಿಯಾ, ದುಷ್ಮಂತ ಚಮೀರಾ, ವರುಣ್ ಚಕ್ರವರ್ತಿ, ಮಿಚೆಲ್ ಸ್ಟಾರ್ಕ್, ಮುಜೀಬ್ ಉರ್ ರೆಹಮಾನ್, ಹರ್ಷಿತ್ ರಾಣಾ, ಸುಯ್ಯಶ್ ಶರ್ಮಾ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ