Indian Premier League 2024: ಈ ಬಾರಿಯ ಐಪಿಎಲ್ ನಲ್ಲಿ ಶಶಾಂತ್ ಸಿಂಗ್ ಹೆಸರಿನ ಸಂಚಲನ ಎಲ್ಲೆಡೆ ಪಸರಿಸಿದೆ. ಒಂದೆಡೆ ಮೈದಾನದಲ್ಲಿ ಈ ಆಟಗಾರ ಪ್ರತಿಯೊಂದು ಪಂದ್ಯದಲ್ಲಿ ತಂಡಕ್ಕಾಗಿ ತನ್ನ ಭಾರಿ ಕೊಡುಗೆಯನ್ನು ನೀಡುತ್ತಿದ್ದರೇ, ಇನ್ನೊಂದೆಡೆ KKR ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಶಶಾಂಕ್ ಸಿಂಗ್ ಕ್ಯಾಮೆರಾ ಕಣ್ಣೆದುರಲ್ಲಿಯೇ ಮಾಡಿದ ಒಂದು ಕೃತ್ಯ, ಮಿತಿ ಮೀರಿ ವೈರಲ್ ಆಗುತ್ತಿದೆ. 
IPL 2024 KKR vs PBKS: ಶಶಾಂಕ್ ಸಿಂಗ್ ಹೊರತುಪಡಿಸಿ, ಕೆಕೆಆರ್ ವಿರುದ್ಧ ಪಂಜಾಬ್ ಪಂದ್ಯದಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಿದ್ದಾರೆ, ಇದು ಒಂದು ದಾಖಲೆಯಾಗಿದ್ದು, ಈ ಹಿಂದೆ ಐಪಿಎಲ್ ನಲ್ಲಿ ಇಂತಹ ದಾಖಲೆ ನೋಡಲು ಸಿಕ್ಕಿಲ್ಲ. ಮೊದಲು ಕೆಕೆಆರ್ ತಂಡದ ಪರ ಸುನಿಲ್ ನರೈನ್ 71 ರನ್ ಹಾಗೂ ಫಿಲ್ ಸಾಲ್ಟ್ 75 ರನ್ ಗಳ ಅಮೋಘ ಇನ್ನಿಂಗ್ಸ್ ಆಡಿದರು. ನಂತರ ಪಂಜಾಬ್ ತಂಡದ ಪರ ಪ್ರಭಸಿಮ್ರನ್ ಸಿಂಗ್ 54 ರನ್ ಮತ್ತು ಜಾನಿ ಬೈರ್‌ಸ್ಟೋವ್ ಕೂಡ ಅಜೇಯ 108 ರನ್ ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

Shashank Singh ಈ ವಿಡಿಯೋ SRK ಗೆ ಇಷ್ಟವಾಗಿಲ್ಲ
ಪಂಜಾಬ್ ತಂಡ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶಶಾಂಕ್ ಸಿಂಗ್ ಅವರ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೋದಲ್ಲಿ ಶಶಾಂಕ್ ಪಂಜಾಬ್ ತಂಡದ ಗೆಲುವನ್ನು ಸಂಭ್ರಮಿಸುತ್ತ ವಿಶೇಷ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಶಶಾಂಕ್ SRK ಅವರ ಸಿಗ್ನಿಚರ್ ಸ್ಟೈಲ್ ನಲ್ಲಿ ಕೈಗಳನ್ನು ಚಾಚಿ ವಿಜಯವನ್ನು ಆಚರಿಸುತ್ತಿರುವುದನ್ನು ನೀವು ನೋಡಬಹುದು. ಈಗ ಬ್ಯಾಟ್ಸ್‌ಮನ್‌ನ ಈ ವಿಡಿಯೋ ಅಭಿಮಾನಿಗಳಲ್ಲಿ ಭಾರಿ ವೈರಲ್ ಆಗುತ್ತಿದೆ.


ಇದನ್ನೂ ಓದಿ-Lok Sabha Elections 2024: ಜನ ಸಾಮಾನ್ಯರಂತೆ ಲೈನ್ ನಲ್ಲಿ ನಿಂತು ಮತ ಚಲಾಯಿಸಿದ ದ್ರಾವಿಡ್ Watch Video


ಹರಾಜಿನಲ್ಲಿ ತಪ್ಪಾಗಿ ಖರೀದಿಯಾಗಿದ್ದ ಈ ಆಟಗಾರ
ಹೌದು, ಐಪಿಎಲ್ 2024 ರ ಹರಾಜಿನಲ್ಲಿ ಪಂಜಾಬ್ ತಂಡವು ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅವರನ್ನು ತಪ್ಪಾಗಿ ಖರೀದಿಸಿತ್ತು, ನಂತರ ತಂಡ  ಬ್ಯಾಟ್ಸ್‌ಮನ್ ಅನ್ನು ಹಿಂದಿರುಗಿಸಲು ಬಯಸಿತ್ತು. ಆದರೆ ಇದು ಸಾಧ್ಯವಾಗಲಿಲ್ಲ ಮತ್ತು ತಂಡವು ಈ ಬ್ಯಾಟ್ಸ್‌ಮನ್‌ನನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಈ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು, ನಂತರ ಇದಕ್ಕಾಗಿ ಪಂಜಾಬ್ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಬೇಕಾಯಿತು. ಈಗ ಎಲ್ಲರೂ ಶಶಾಂಕ್ ಅವರ ಬ್ಯಾಟಿಂಗ್ ಅಭಿಮಾನಿಗಳಾಗಿದ್ದಾರೆ ಮತ್ತು ಮುಂದಿನ ವರ್ಷವೂ ಇದೇ ತಂಡದಲ್ಲಿ ಈ ಬ್ಯಾಟ್ಸ್‌ಮನ್ ಆಗಿ ಆಡುವುದನ್ನು ನೀವು ನೋಡಬಹುದು.


ಇದನ್ನೂ ಓದಿ-IPL 2024 KKR vs PBKS: Narain-Salt ಸುನಾಮಿಗೆ ಪಂಜಾಬ್ ತತ್ತರ, ಒಂದೇ ದಿನದಲ್ಲಿ ಹಲವು ದಾಖಲೆಗಳ ನಿರ್ಮಾಣ!

ಇಲ್ಲಿದೆ ಶಶಾಂಕ್ ಸಿಂಗ್ ವೈರಲ್ ವಿಡಿಯೋ




ಶಶಾಂಕ್ ಈ ವಿಡಿಯೋ ಕೂಡ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ


 



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.